ಶ್ರೀನಗರ:ಜಮ್ಮು- ಕಾಶ್ಮೀರದ ಹಂದ್ವಾರದಲ್ಲಿ ಮತ್ತೊಮ್ಮೆ ಗುಂಡಿನ ಕಾಳಗ ಮುಂದುವರಿದಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಳೆದೆರಡು ದಿನಗಳ ಹಿಂದೆ ನಡೆದ ಗುಂಡಿನ ಕಾಳಗದಲ್ಲಿ ಭಾರತೀಯ ಸೇನೆಯ ಮೇಜರ್, ಕರ್ನಲ್ ಸೇರಿ ಐವರು ಯೋಧರು ಹುತಾತ್ಮರಾಗಿದ್ದರು. ಇದರ ಬೆನ್ನಲ್ಲೇ ಸಿಆರ್ಪಿಎಫ್ ಪಡೆಯ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಹಂದ್ವಾರದಲ್ಲಿ ಮುಂದುವರಿದ ಗುಂಡಿನ ಕಾಳಗ... ಮೂವರು ಯೋಧರು ಹುತಾತ್ಮ, ಏಳು ಯೋಧರಿಗೆ ಗಾಯ - ಜಮ್ಮು-ಕಾಶ್ಮೀರದ ಹಂದ್ವಾರ
ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಗುಂಡಿನ ಕಾಳಗ ಮುಂದುವರಿದಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದಾರೆ.
CRPF Jawans
ಗುಂಡಿನ ದಾಳಿಯಲ್ಲಿ ಏಳು ಸಿಆರ್ಪಿಎಫ್ ಯೋಧರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಈ ಪ್ರದೇಶದಲ್ಲಿ ಹೆಚ್ಚು ಉಗ್ರರು ಅಡಗಿ ಕುಳಿತ್ತಿದ್ದು, ಅಂತಹ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಈಟಿವಿ ಭಾರತ್ಗೆ ಸಿಆರ್ಪಿಎಫ್ ವಕ್ತಾರ ಪಂಕಜ್ ಸಿಂಗ್ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಹಂದ್ವಾರದ ಖ್ವಾಜಿಯಾಬಾದ್ ಸಮೀಪದಲ್ಲಿ ಪಹರೆ ನಡೆಸುತ್ತಿದ್ದ ಸಿಆರ್ಪಿಎಫ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಘಟನಾ ಸ್ಥಳಕ್ಕೆ ಹೆಚ್ಚುವರಿ ಸೇನಾ ಪಡೆ ರವಾನೆ ಮಾಡಲಾಗಿದೆ. ಇಡೀ ಪ್ರದೇಶ ಸುತ್ತುವರಿಯಲಾಗಿದೆ.
Last Updated : May 4, 2020, 8:03 PM IST