ಶ್ರೀನಗರ(ಜಮ್ಮು ಕಾಶ್ಮೀರ): ಶ್ರೀನಗರದ ನೌಹಟ್ಟಾ ಪ್ರದೇಶದಲ್ಲಿ ರಾತ್ರಿ 9:15 ರ ಸುಮಾರಿಗೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ಸಶಸ್ತ್ರ ಸೀಮಾ ಬಲದ ಮೂವರು ಯೋಧರು ಹಾಗೂ ಗಾಯಗೊಂಡಿದ್ದಾರೆ.
ಕಣಿವೆಯಲ್ಲಿ ಉಗ್ರರ ದಾಳಿ: ಮೂವರು ಯೋಧರು, ಒಬ್ಬ ಪೇದೆಗೆ ಗಾಯ - ಭದ್ರತಾ ಸಿಬ್ಬಂದಿ
ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಗಾಯಗೊಂಡ ಸಿಬ್ಬಂದಿಯನ್ನು ಜೆಕೆಪಿ ಕಾನ್‌ಸ್ಟೆಬಲ್ ಅಬ್ದುಲ್ ಮಜೀದ್, ಎಸ್‌ಎಸ್‌ಬಿ ಸಬ್ ಇನ್ಸ್‌ಪೆಕ್ಟರ್ ಅನುರಾಗ್ ರಾವ್, ಎಸ್‌ಎಸ್‌ಬಿ ಮುಖ್ಯ ಪೇದೆ ಸನಂತ ಕುಮಾರ್ ಮತ್ತು ಎಸ್‌ಎಸ್‌ಬಿ ಕಾನ್‌ಸ್ಟೆಬಲ್ ದುರ್ಗೇಶ್ ಕುಮಾರ್ ಎಂದು ಗುರುತಿಸಲಾಗಿದೆ.

ಕೃತ್ಯ ಎಸಗಿದ ಉಗ್ರರನ್ನು ಬಂಧಿಸಲು ಪೊಲೀಸರು ಮತ್ತು ಭದ್ರತಾ ಪಡೆಗಳು ಘಟನಾ ಪ್ರದೇಶವನ್ನು ಸುತ್ತುವರೆದಿದ್ದಾರೆ. ಇಲ್ಲಿಯವರೆಗೆ ಯಾವುದೇ ಉಗ್ರ ಸಂಘಟನೆಯು ದಾಳಿ ಜವಾಬ್ದಾರಿ ಹೊತ್ತುಕೊಂಡಿಲ್ಲ.