ಅಹ್ಮದಾಬಾದ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಮಗಳು ಇವಾಂಕಾ ಟ್ರಂಪ್ ಕೂಡ ಭಾರತದ ಪ್ರವಾಸದಲ್ಲಿದ್ದಾರೆ. ತುಂಬಾ ಸರಳವಾಗಿ ಡ್ರೆಸ್ ಮಾಡಿಕೊಂಡು ಆಗಮಿಸಿರುವ ಟ್ರಂಪ್ ಮಗಳು ಈ ಹಿಂದೆ ಸಹ ಇದೇ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು.
ಹಳೆ ಡ್ರೆಸ್ನಲ್ಲೇ ಭಾರತಕ್ಕೆ ಬಂದ ಟ್ರಂಪ್ ಮಗಳು 2019ರಲ್ಲಿ ಇವಾಂಕಾ ಟ್ರಂಪ್ ಅರ್ಜೆಂಟೈನಾ ಪ್ರವಾಸ ಕೈಗೊಂಡಿದ್ದ ವೇಳೆ ಇದೇ ಪ್ರಾಕ್ ಸೂಟ ಧರಿಸಿಕೊಂಡು ಫೋಟೋಗೆ ಪೋಸ್ ನೀಡಿದ್ದರು. ಇದೀಗ ಮತ್ತೊಮ್ಮೆ ಅದೇ ಡ್ರೆಸ್ನಲ್ಲಿ ಇವಾಂಕಾ ಕಾಣಿಸಿಕೊಂಡಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಡ್ರೆಸ್ನ ಬೆಲೆ 1,71,333 ರೂಪಾಯಿ ಎಂದು ಹೇಳಲಾಗಿದ್ದು, ಅರ್ಜೆಂಟೈನಾ ಪ್ರವಾಸದಲ್ಲಿದ್ದ ವೇಳೆ ಸಹ ಇದೇ ಉಡುಪು ಅವರು ಹಾಕಿಕೊಂಡಿದ್ದರು. ಇನ್ನು 2017ರ ನವೆಂಬರ್ ತಿಂಗಳಲ್ಲಿ ಇವಾಂಕಾ ಭಾರತದ ಪ್ರವಾಸ ಕೈಗೊಂಡಿದ್ದರು ಎಂಬುದು ಇಲ್ಲಿ ಗಮನಾರ್ಹ. ವಿಶ್ವ ಮಹಿಳಾ ಉದ್ಯಮಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ಇವಾಂಕಾ ಟ್ರಂಪ್ ಭಾರತಕ್ಕೆ ಆಗಮಿಸಿದ್ದರು. ಹೈದರಾಬಾದ್ನಲ್ಲಿ ನಡೆದ ದೊಡ್ಡ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು ಯುವ ಮಹಿಳಾ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.
ಅಂದು ಅವರು ಹೈದರಾಬಾದ್ನ ಪ್ರತಿಷ್ಠಿತ ಫಲಕ್ನಾಮಾ ಹೋಟೆಲ್ನಲ್ಲಿ ತಂಗಿದ್ದರು.