ನವದೆಹಲಿ :ಪ್ರಸ್ತುತ ಸಮಾಜವು ಇತಿಹಾಸದ ಒಂದು ಮಹತ್ವದ ಘಟ್ಟದಲ್ಲಿರುವುದರಿಂದ ಇದು ಆತ್ಮನಿರ್ಭರ್ ಭಾರತ ನಿರ್ಮಾಣಕ್ಕಾಗಿ ಹೂಡಿಕೆಯ ಮಾಡಲು ಮತ್ತು ಭಾರತೀಯ ವ್ಯವಹಾರಿಕ ಕ್ಷೇತ್ರ ರೂಪಾಂತರಗೊಳಿಸಲು ಸಕಾಲವಾಗಿದೆ ಎಂದು ಚೇಂಬರ್ ಆಫ್ ಇಂಡಿಯನ್ ಇಂಡಸ್ಟ್ರಿ ( ಸಿಐಐ) ನೂತನ ಅಧ್ಯಕ್ಷ ಉದಯ್ ಕೋಟಕ್ ಅಭಿಪ್ರಾಯಪಟ್ಟಿದ್ದಾರೆ.
ಆತ್ಮನಿರ್ಭರ್ ಭಾರತ ನಿರ್ಮಾಣಕ್ಕಾಗಿ ಹೂಡಿಕೆ ಮಾಡಲು ಇದು ಸಕಾಲ.. ಉದಯ್ ಕೋಟಕ್ - ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ಹೂಡಿಕೆ ಮಾಡಲು ಇದು ಸಕಾಲ
ಪ್ರಧಾನ ಮಂತ್ರಿಯವರು ಘೋಷಿಸಿರುವ ಆತ್ಮ ನಿರ್ಭರ್ ಭಾರತ ಅಭಿಯಾನದ ಬಗ್ಗೆ ಒಲವು ವ್ಯಕ್ತಪಡಿಸಿದ ಅವರು, ಕೊರೊನಾ ಕಾರಣದಿಂದ ಇಡೀ ಜಗತ್ತಿನ ಸ್ಥಿತಿಗತಿ ಒಂದೇ ರೀತಿಯಲ್ಲಿದೆ. ಈ ಕಾರಣದಿಂದ ನಮಗೆ ವ್ಯಾವಹಾರಿಕ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳು ಕಡಿಮೆಯಿರುತ್ತಾರೆ.

ಕೋವಿಡ್-19 ಬಿಕ್ಕಟ್ಟಿನ ಸಮಯವನ್ನು ಧನಾತ್ಮಕವಾಗಿ ಉಪಯೋಗಿಸಿ ಕಡಿಮೆ ಹತೋಟಿ ಹೊಂದಿರುವ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದನ್ನು ಕಳೆದುಕೊಳ್ಳಬಾರದು. ಸವಾಲಿನ ಸಮಯದಲ್ಲಿ ಬಂಡವಾಳ ಮಾರುಕಟ್ಟೆಯನ್ನು ಟ್ಯಾಪ್ ಮಾಡಿ ಬಫರ್ ಫಂಡ್ ಸಂಗ್ರಹಿಸುವುದನ್ನು ಹೆಚ್ಚಿಸಬೇಕು ಎಂದು ಮಹೀಂದ್ರಾ ಬ್ಯಾಂಕ್ನ ನಿರ್ದೇಶಕರು ಆಗಿರುವ ಕೋಟಕ್ ಹೇಳಿದ್ದಾರೆ.
ಪ್ರಧಾನ ಮಂತ್ರಿಯವರು ಘೋಷಿಸಿರುವ ಆತ್ಮ ನಿರ್ಭರ್ ಭಾರತ ಅಭಿಯಾನದ ಬಗ್ಗೆ ಒಲವು ವ್ಯಕ್ತಪಡಿಸಿದ ಅವರು, ಕೊರೊನಾ ಕಾರಣದಿಂದ ಇಡೀ ಜಗತ್ತಿನ ಸ್ಥಿತಿಗತಿ ಒಂದೇ ರೀತಿಯಲ್ಲಿದೆ. ಈ ಕಾರಣದಿಂದ ನಮಗೆ ವ್ಯಾವಹಾರಿಕ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳು ಕಡಿಮೆಯಿರುತ್ತಾರೆ. ಈ ಹಿಂದೆ ಕಾರ್ಪೊರೇಟ್ ಆಡಳಿತ ಉದ್ದಿಮೆಗಳ ಮೇಲೆ ಅತಿಯಾದ ಹಿಡಿತ ಹೊಂದಿದ್ದದ್ದು ನಿಜ. ಈಗ ನಾವು ಇರುವ ಅವಕಾಶ ಬಳಸಿಕೊಂಡು ಕಾರ್ಪೊರೇಟ್ ಕ್ಷೇತ್ರದ ಕಾರ್ಯಚಟುವಟಿಕೆಯ ಅನಾರೋಗ್ಯಕರ ಅಂಶಗಳನ್ನು ಶುದ್ಧೀಕರಿಸುವುದರೊಂದಿಗೆ ಹೂಡಿಕೆಯ ಬಗ್ಗೆ ಹೊಸ ದೃಷ್ಟಿಕೋನ ತೆಗೆದುಕೊಳ್ಳಬೇಕು ಎಂದಿದ್ದಾರೆ.