ಕರ್ನಾಟಕ

karnataka

ETV Bharat / bharat

'ಟೋಕಿಯೋ ಒಲಿಂಪಿಕ್​ ನಡೆಯಬಹುದು ಅಥವಾ ರದ್ದಾಗಬಹುದು' - ಥಾಮಸ್ ಬಾಕ್​

ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ ಟೋಕಿಯೋ ಒಲಿಂಪಿಕ್​ ನಡೆಯಬಹುದು ಅಥವಾ ರದ್ದಾಗಬಹುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಂಘಟನೆ (ಐಒಸಿ)ಯ ಸಹಕಾರ ಆಯೋಗದ ಅಧ್ಯಕ್ಷ ಪಿರೆ ಒಲಿವಿಯರ್​ ಅಭಿಪ್ರಾಯಪಟ್ಟಿದ್ದಾರೆ.

Tokyo Olympic
ಟೋಕಿಯೋ ಒಲಿಂಪಿಕ್

By

Published : Jun 7, 2020, 9:52 AM IST

ಬ್ರುಸೆಲ್ಸ್​​​ (ಬ್ರೆಜಿಲ್​​): ಟೋಕಿಯೋ ಒಲಿಂಪಿಕ್​ 2021ಕ್ಕೆ ನಡೆಯಬಹುದು ಅಥವಾ ರದ್ದಾಗಬಹುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿಯ ಸಹಕಾರ ಆಯೋಗದ ಅಧ್ಯಕ್ಷ ಪಿಯರೆ ಒಲಿವಿಯರ್ ಬೆಕ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಬೆಲ್ಜಿಯಂನ ಸುದ್ದಿ ಮಾಧ್ಯಮವೊಂದಕ್ಕೆ ಮಾತನಾಡಿರುವ ಅವರು, ಮುಂದಿನ ವರ್ಷ ಜುಲೈ 23ಕ್ಕೆ ಒಲಿಂಪಿಕ್​ ನಡೆಯಬಹುದು ಅಥವಾ ಮುಂದೂಡಿಕೆಯಾಗಬಹುದು. ರದ್ದಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಒಲಿಂಪಿಕ್​ಗಾಗಿ ದೊಡ್ಡ ಮೊತ್ತದ ಹಣ ಖರ್ಚು ಮಾಡಲಾಗಿದೆ. ಸಾವಿರಾರು ಮಂದಿ ಜಾಗತಿಕ ಮಟ್ಟದ ಈ ಕ್ರೀಡಾಕೂಟಕ್ಕಾಗಿ ಶ್ರಮಿಸಿದ್ದಾರೆ. ಒಲಿಂಪಿಕ್​ ಅನ್ನು ಮುಂದೂಡುವುದು ಹಾಗೂ ರದ್ದುಗೊಳಿಸುವುದು ಯೋಚನೆ ಮಾಡಲೂ ಅಸಾಧ್ಯ ಎಂದರು.

ಅಂತಾರಾಷ್ಟ್ರೀಯ ಒಲಿಂಪಿಕ್​ ಕಮಿಟಿಯ ಅಧ್ಯಕ್ಷ ಥಾಮಸ್​ ಬಾಕ್,​ ಮುಂದಿನ ವರ್ಷ ಜುಲೈ 23ರಿಂದ ಆಗಸ್ಟ್​ 8ರ ಮಧ್ಯೆ ಒಲಿಂಪಿಕ್​ ಕ್ರೀಡಾಕೂಟ ನಡೆಯುತ್ತದೆ ಎಂದು ಭಾವಿಸಿದ್ದೇವೆ. ಒಂದು ವೇಳೆ ನಡೆಯದೇ ಹೋದರೆ ಮುಂದಿನ ನಿರ್ಧಾರದ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details