ಕರ್ನಾಟಕ

karnataka

ETV Bharat / bharat

ಗಡಿಯಲ್ಲಿ ಗಣತಂತ್ರ ಹಬ್ಬ.. 17,000 ಅಡಿ ಎತ್ತರದಲ್ಲಿ ಸೈನಿಕರ ಸಂಭ್ರಮ.. - ಇಂಡೋ ಟಿಬೆಟಿಯನ್ ಬಾರ್ಡರ್​ ಫೋರ್ಸ್

ಇಂಡೋ-ಟಿಬೆಟಿಯನ್ ಗಡಿ ಪೊಲೀಸ್​ ಪಡೆ 17,000 ಅಡಿ ಎತ್ತರದಲ್ಲೂ ರಾಷ್ಟ್ರಧ್ವಜ ಹಿಡಿದು ಗಣರಾಜ್ಯೋತ್ಸವ ಆಚರಿಸಿದೆ.

ITBP personnel celebrate Republic Day,ಇಂಡೋ ಟಿಬೆಟಿಯನ್ ಗಡಿ ಪೊಲೀಸ್​ ಪಡೆ
ಇಂಡೋ ಟಿಬೆಟಿಯನ್ ಗಡಿ ಪೊಲೀಸ್​ ಪಡೆ

By

Published : Jan 26, 2020, 11:08 AM IST

ಲಡಾಖ್:ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಗಣತಂತ್ರದ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಇತ್ತ ಗಡಿ ಕಾಯುತ್ತಿರುವ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್​ ಪಡೆ 17,000 ಅಡಿ ಎತ್ತರದಲ್ಲೂ ರಾಷ್ಟ್ರಧ್ವಜ ಹಿಡಿದು ಗಣರಾಜ್ಯೋತ್ಸವ ಆಚರಿಸಿದೆ.

ಪ್ರಸ್ತುತ ಲಡಾಕ್‌ನಲ್ಲಿ ತಾಪಮಾನವು ಮೈನಸ್ 20 ಡಿಗ್ರಿ ಸೆಲ್ಸಿಯಸ್ ಆಗಿದೆ. ಇಂತಹ ವಾತಾವರಣದಲ್ಲೂ ಕರ್ತವ್ಯ ನಿರ್ವಹಿಸುತ್ತಿರುವ ಹಿಮ ವೀರರು 'ಭಾರತ್ ಮಾತಾ ಕಿ ಜೈ' ಮತ್ತು 'ವಂದೇ ಮಾತರಂ' ಎಂದು ಘೋಷಣೆ ಕೂಗಿದ್ದಾರೆ.

1962 ರಿಂದ ಪ್ರಾರಂಭಿಸಲಾ ಇಂಡೋ-ಟಿಬೆಟಿಯನ್ ಬಾರ್ಡರ್​ ಫೋರ್ಸ್​(ಐಟಿಬಿಪಿಎಫ್) ಪ್ರಸ್ತುತ ಲಡಾಖ್‌ನ ಕಾರಕೋರಂ ಪಾಸ್‌ನಿಂದ ಅರುಣಾಚಲ ಪ್ರದೇಶದ ಜಚೆಪ್ ಲಾ ವರೆಗೆ 3,488 ಕಿ.ಮೀ ಗಡಿ ಕಾವಲು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇದೊಂದು ವಿಶೇಷ ಪರ್ವತ ಪಡೆ. ಇದರಲ್ಲಿ ಕೆಲಸ ಮಾಡುವವರು ವೃತ್ತಿಪರವಾಗಿ ತರಬೇತಿ ಪಡೆದ ಪರ್ವತಾರೋಹಿಗಳಾಗಿದ್ದಾರೆ. ನೈಸರ್ಗಿಕ ವಿಕೋಪದಂತಹ ಅನೇಕ ಸಂದರ್ಭಗಳಲ್ಲಿ ಈ ಪಡೆ ದೇಶಾದ್ಯಂತ ಹಲವಾರು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಿದೆ.

ABOUT THE AUTHOR

...view details