ಜಮ್ಮು: ಅಮರನಾಥ್ ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳಿಗೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಪ್ರತಿಕ್ಷಣವೂ ಕೆಚ್ಚದೆಯಿಂದ ರಕ್ಷಣೆ ನೀಡುತ್ತಿದ್ದು, ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.
ಅಮರನಾಥ್ ಯಾತ್ರಿಗಳಿಗೆ ರಕ್ಷಕರಾದ ಇಂಡೋ - ಟಿಬೆಟಿಯನ್ ಬಾರ್ಡರ್ ಪೊಲೀಸ್... ಇವರ ಕೆಚ್ಚೆದೆಗೆ ಸೆಲ್ಯೂಟ್!
ಅಮರನಾಥ್ ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ನಿಗಾ ವಹಿಸಿದ್ದಾರೆ.
ಯಾತ್ರಾರ್ಥಿಗಳಿಗೆ ರಕ್ಷಣೆ
ಯಾತ್ರಾರ್ಥಿಗಳು ತೆರಳುವ ಕಠಿಣ ಹಾದಿಯಲ್ಲಿ ಇದೀಗ ಹಿಮಪಾತವಾಗುತ್ತಿದ್ದು, ದೊಡ್ಡ ದೊಡ್ಡ ಕಲ್ಲುಗಳು ಬಂದು ರಸ್ತೆ ಮೇಲೆ ಬೀಳುತ್ತಿವೆ. ಅವು ಯಾತ್ರಾರ್ಥಿಗಳ ಮೇಲೆ ಬೀಳದಂತೆ ಬಾರ್ಡರ್ ಪೊಲೀಸರು ಅಡ್ಡಲಾಗಿ ನಿಂತು ಕಲ್ಲುಗಳನ್ನ ತಡೆ ಹಿಡಿಯುತ್ತಿದ್ದಾರೆ.
ಇದೀಗ ಇದರ ವಿಡಿಯೋ ವೈರಲ್ ಆಗಿದ್ದು, ಅವರ ಕೆಚ್ಚೆದೆಯ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಇನ್ನು ಕೆಲ ಯಾತ್ರಾರ್ಥಿಗಳಿಗೆ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ.