ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ನ (ಐಟಿಬಿಪಿ) ಪರ್ವತಾರೋಹಿಗಳು ಹಿಮಾಚಲ ಪ್ರದೇಶದ ಲಿಯೋ ಪಾರ್ಗಿಲ್ ಶಿಖರವನ್ನು (22,222 ಅಡಿ) ಯಶಸ್ವಿಯಾಗಿ ಏರಿದ್ದಾರೆ.
ಸೆಕ್ಟರ್ ಹೆಡ್ಕ್ವಾರ್ಟರ್ಸ್ ಐಟಿಬಿಪಿ ಶಿಮ್ಲಾದ 12 ಸದಸ್ಯರ ತಂಡ ಆಗಸ್ಟ್ 31ರಂದು ಪರ್ವತ ಏರಿ ಈ ದಾಖಲೆ ಮಾಡಿದ್ದಾರೆ.
"ಈ ಪರ್ವತಾರೋಹಣದ ನಾಯಕ ಉಪ ಕಮಾಂಡೆಂಟ್ ಕುಲದೀಪ್ ಸಿಂಗ್ ಮತ್ತು ಉಪನಾಯಕ ಉಪ ಕಮಾಂಡೆಂಟ್ ಧರ್ಮೇಂದ್ರ ಆಗಿದ್ದರು. ಕಿನ್ನೌರ್ನ ಚಿಟ್ಕುಲ್ ಗ್ರಾಮದ ಹೆಡ್ ಕಾನ್ಸ್ಟೇಬಲ್ ಪ್ರದೀಪ್ ನೇಗಿ ಎರಡನೇ ಬಾರಿಗೆ ಈ ಶಿಖರವನ್ನು ಏರಿದರು. ಪ್ರದೀಪ್ ಈ ಹಿಂದೆಯೂ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಅನ್ನು ಎರಡು ಬಾರಿ ಏರಿದ್ದಾರೆ"ಎಂದು ಐಟಿಬಿಪಿ ಹೇಳಿದೆ.