ಪಿತೊರಗಢ(ಉತ್ತರಾಖಂಡ): ಭಾರತದೊಂದಿಗೆ ಪ್ರಬಲ ಸವಾಲೊಡ್ಡುತ್ತಿರುವ ಚೀನಾದ ದಾಳಿಯನ್ನು ಮಟ್ಟಹಾಕಲು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಗೆ ತರಬೇತಿಯನ್ನು 10,000 ರಿಂದ 17,000 ಅಡಿ ಎತ್ತರದಲ್ಲಿ ನೀಡುತ್ತಿದೆ.
ಹೆಚ್ಚುತ್ತಿರುವ ಉದ್ವಿಗ್ನತೆ ಸಮನಗೊಳಿಸಲು ಮತ್ತು ಚೀನಾದ ಆಕ್ರಮಣಗಳಿಂದ ಗಡಿ ರಕ್ಷಿಸಲು ಐಟಿಬಿಪಿಯ ಹಿಮವೀರ್, ತಮ್ಮ ಜಾಗರೂತೆಯ ರಕ್ಷಣೆಗೆ ಸಿದ್ಧವಾಗುತ್ತಿದೆ. ಐಟಿಬಿಪಿಯ 7ನೇ ಬೆಟಾಲಿಯನ್ ಇಂಡೋ-ಚೀನಾ ಗಡಿಯಲ್ಲಿ ಗುಂಜಿಯಿಂದ ಲಿಪು ಪಾಸ್ ಮತ್ತು ಜೋಲಿಂಗ್‌ಕಾಂಗ್‌ವರೆಗೆ ನೆಲೆಗೊಂಡಿದೆ.
10,000 ರಿಂದ 17,000 ಅಡಿ ಎತ್ತರದಲ್ಲಿ ಪುರುಷ ಮತ್ತು ಮಹಿಳಾ ಯೋಧರು ಸೇರಿದಂತೆ ಹಿಮವೀರ್ ಪಡೆ, ಗಡಿಯಲ್ಲಿ 24X7 ಕಣ್ಗಾವಲಿನಲ್ಲಿ ತೊಡಗಿದ್ದಾರೆ. ಯುದ್ಧದಂತಹ ಸಂದರ್ಭಗಳನ್ನು ಎದುರಿಸಲು ಅವರು ಇಕ್ಕಟ್ಟಾದ ಭೌಗೋಳಿಕ ಪರಿಸ್ಥಿತಿಗಳ ನಡುವೆ ಕಠಿಣ ತರಬೇತಿ ಪಡೆಯುತ್ತಿದ್ದಾರೆ.