ಕರ್ನಾಟಕ

karnataka

ETV Bharat / bharat

ರಾಧಾ ಸೋಮಿ ಬಿಯಾಸ್ ಕೋವಿಡ್​ ಕೇರ್​ ಸೆಂಟರ್​ಗೆ ನೋಡೆಲ್ ಏಜೆನ್ಸಿಯಾಗಿ ಐಟಿಬಿಪಿ ನೇಮಕ - ರಾಧಾ ಸೋಮಿ ಬಿಯಾಸ್ ಕೋವಿಡ್​ ಕೇರ್​ ಸೆಂಟರ್

ನವದೆಹಲಿಯ ರಾಧಾ ಸೋಮಿ ಬಿಯಾಸ್ ಕೋವಿಡ್​ ಕೇರ್​ ಸೆಂಟರ್​ಗೆ ನೋಡೆಲ್​ ಏಜೆನ್ಸಿಯಾಗಿ ಐಟಿಬಿಪಿ ಕೇಂದ್ರ ಗೃಹ ಸಚಿವಾಲಯ ನೇಮಕ ಮಾಡಿದೆ. ಐಟಿಬಿಪಿ ಈ ಕೇಂದ್ರಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಲಿದೆ.

ITBP appointedas nodal agency for RSB Covid Care Center
ರಾಧಾ ಸೋಮಿ ಬಿಯಾಸ್ ಕೋವಿಡ್​ ಕೇರ್​ ಸೆಂಟರ್

By

Published : Jun 24, 2020, 2:14 PM IST

ನವದೆಹಲಿ : ದೆಹಲಿ ಸರ್ಕಾರದ ಕೋರಿಕೆ ಹಿನ್ನೆಲೆ ಕೇಂದ್ರ ಗೃಹ ಸಚಿವಾಲಯ ಇಂಡೋ ಟಿಬೆಟಿಯನ್ ಗಡಿ ಪೊಲೀಸ್​​ (ಐಟಿಬಿಪಿ) ಅನ್ನು ನಗರದ ಚಟ್ಟರ್‌ಪುರದ ರಾಧಾ ಸೋಮಿ ಬಿಯಾಸ್ ಕೋವಿಡ್​ ಕೇರ್​ ಸೆಂಟರ್​ಗೆ ನೋಡೆಲ್​ ಏಜೆನ್ಸಿಯಾಗಿ ನೇಮಕ ಮಾಡಿದೆ. ಐಟಿಬಿಪಿ ಈ ಕೇಂದ್ರಕ್ಕೆ ವೈದ್ಯರು ಮತ್ತು ಇತರ ವೃತ್ತಿಪರರ ತಂಡವನ್ನು ಒದಗಿಸಲಿದೆ.

ವೈದ್ಯಕೀಯ ಮತ್ತು ಆಡಳಿತ ಸೇರಿದಂತೆ ಐಟಿಬಿಪಿಯ ಅನೇಕ ತಂಡಗಳು ಈಗಾಗಲೇ ರಾಧಾ ಸೋಮಿ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಪ್ರತಿನಿಧಿಗಳೊಂದಿಗೆ ಸರಣಿ ಚರ್ಚೆಗಳನ್ನು ನಡೆಸಿದೆ. ಈ ಕೋವಿಡ್​ ಕೇಂದ್ರದಲ್ಲಿ ಜೂನ್ 26ರ ವೇಳೆಗೆ 2 ಸಾವಿರ ಹಾಸಿಗೆ ಸೌಲಭ್ಯ ಏರ್ಪಡಿಸುವ ನಿರೀಕ್ಷೆಯಿದೆ. ಒಟ್ಟು 10,200 ಹಾಸಿಗೆಗಳನ್ನು ಒದಗಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ರಾಧಾ ಸೋಮಿ ಬಿಯಾಸ್​ ರಾಜಧಾನಿಯ ಮತ್ತು ದೇಶದ ಅತಿದೊಡ್ಡ ಸಿಂಗಲ್ ಕೋವಿಡ್ ಕೇರ್ ಸೆಂಟರ್ ಆಗಲಿದೆ.

ರಾಧಾ ಸೋಮಿ ಬಿಯಾಸ್ ಕೋವಿಡ್​ ಕೇರ್​ ಸೆಂಟರ್

ಐಟಿಬಿಪಿ ಮತ್ತು ಇತರ ಸಿಎಪಿಎಫ್‌ಗಳ ಸಾವಿರಕ್ಕೂ ಹೆಚ್ಚು ವೈದ್ಯರು ಮತ್ತು 2 ಸಾವಿರಕ್ಕೂ ಹೆಚ್ಚು ಅರೆ ವೈದ್ಯಕೀಯ, ಸಹಾಯಕ ಮತ್ತು ಭದ್ರತಾ ಸಿಬ್ಬಂದಿಯನ್ನು ಇಲ್ಲಿ ನಿಯೋಜನೆ ಮಾಡುವ ನಿರೀಕ್ಷೆಯಿದೆ.

For All Latest Updates

TAGGED:

ABOUT THE AUTHOR

...view details