ಕರ್ನಾಟಕ

karnataka

ETV Bharat / bharat

ಇಟಲಿಯಲ್ಲಿ ಏಪ್ರಿಲ್ 12ರವರೆಗೆ ಲಾಕ್‌ಡೌನ್ ವಿಸ್ತರಣೆ: ಸ್ಪೇನ್‌ನಲ್ಲಿ ಅಂತ್ಯಸಂಸ್ಕಾರಕ್ಕೂ ನಿರ್ಬಂಧ - ಇಟಲಿಯಲ್ಲಿ ಕೊರೊನಾ

ಕೊರೊನಾ ವೈರಸ್ ಅತೀ ಹೆಚ್ಚು ಬಲಿ ಪಡೆದಿದ್ದು ಯೂರೋಪಿನ ಎರಡು ಪ್ರಮುಖ ರಾಷ್ಟ್ರಗಳಾದ ಇಟಲಿ ಮತ್ತು ಸ್ಪೇನ್‌ನಲ್ಲಿ. ಆರಂಭದಲ್ಲಿ ಸೋಂಕಿನ ಬಗ್ಗೆ ನಿರ್ಲಕ್ಷ ತೋರಿದ ಈ ರಾಷ್ಟ್ರಗಳು ಅದಕ್ಕೆ ಭಾರಿ ಬೆಲೆಯನ್ನೇ ತೆರುವಂತಾಯ್ತು. ಇದೀಗ ಈ ಎರಡೂ ದೇಶಗಳಲ್ಲೂ ಪರಿಸ್ಥಿತಿ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದರೂ ಆತಂಕ ಮಾತ್ರ ಹಾಗೆಯೇ ಇದೆ. ಹೀಗಾಗಿ ಲಾಕ್​ಡೌನ್​ ಅವಧಿಯನ್ನು ವಿಸ್ತರಿಸಲು ಇಟಲಿ ನಿರ್ಧರಿಸಿದೆ.

Italy extends lockdown till April 12
ಸ್ಪೇನ್‌ನಲ್ಲಿ ಅಂತ್ಯಸಂಸ್ಕಾರಕ್ಕೆ ನಿರ್ಬಂಧ

By

Published : Mar 31, 2020, 7:50 AM IST

Updated : Mar 31, 2020, 10:40 AM IST

ರೋಮ್(ಇಟಲಿ): ಕೊರೊನಾ ವೈರಸ್‌ನಿಂದ ಹೈರಾಣಾಗಿರುವ ಇಟಲಿಯಲ್ಲಿ ಕನಿಷ್ಠ ಏಪ್ರಿಲ್ ತಿಂಗಳ ಮಧ್ಯಭಾಗದವರೆಗೆ ಲಾಕ್ ಡೌನ್ ಮುಂದುವರೆಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ದೇಶದಲ್ಲಿ ಮಾರಣಾಂತಿಕ ಸೋಂಕಿಗೆ ಈಗಾಗಲೇ 11,591 ಮಂದಿ ಸಾವಿಗೀಡಾಗಿದ್ದು, ಅಲ್ಲಿನ ಪ್ರಧಾನಿ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಂತದಲ್ಲಿ ಒಂದುವೇಳೆ ನಾವು ನಿರ್ಬಂಧಗಳನ್ನು ಸಡಿಲಿಸಿದ್ದೇ ಆದಲ್ಲಿ ನಾವು ಹೊಂದಿರುವ ಪ್ರಗತಿಗೆ ಹಿನ್ನಡೆಯಾಗಲಿದೆ ಎನ್ನುವುದು ಅವರ ಆತಂಕ.

ದೇಶದ ಆರ್ಥಿಕಾಭಿವೃದ್ಧಿಯ ದೃಷ್ಠಿಯಿಂದ 3 ವಾರಗಳ ಲಾಕ್ ಡೌನ್ ನಿಜವಾಗ್ಲೂ ಕಷ್ಟವಾಗುತ್ತದೆ. ಆದ್ರೆ, ಇದೇನು ತುಂಬ ಸಮಯಗಳ ಕಾಲ ಮುಂದುವರೆಯಲ್ಲ. ನಾವು ಪರಿಹಾರಾತ್ಮಕ ದಾರಿಗಳನ್ನು ಹುಡುಕುತ್ತಿದ್ದೇವೆ. ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ನಿರ್ಬಂಧಗಳು ಸಡಿಲಗೊಳ್ಳಲಿದೆ ಎಂದು ಇಟಲಿಯ ಆರೋಗ್ಯ ಸಚಿವ ಆಶಾವಾದ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ವ್ಯಾಪಾರ, ವಹಿವಾಟು ಮತ್ತು ಇತರ ಸಾರ್ವಜನಿಕ ಸಮಾರಂಭವನ್ನು ನಿಷೇಧಿಸಿದ ಆದೇಶ ಶುಕ್ರವಾರಕ್ಕೆ ಕೊನೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ಈ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ಇಡೀ ವಿಶ್ವದಲ್ಲೇ ಕೋವಿಡ್-19 ಹರಡುವಿಕೆ ತಡೆಗಟ್ಟಲು ಅತಿ ಹೆಚ್ಚು ನಿರ್ಬಂಧಗಳನ್ನು ಇಟಲಿಯಲ್ಲಿ ವಿಧಿಸಲಾಗಿದೆ. ಇಟಲಿಯಲ್ಲಿ ಫೆಬ್ರವರಿ 21 ರಂದು ಮಾರಕ ಖಾಯಿಲೆಗೆ ಮೊದಲ ವ್ಯಕ್ತಿ ಬಲಿಯಾದ ಬಳಿಕ ಇದೀಗ ವೈರಸ್ ಹರಡುವಿಕೆಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.

ಸ್ಪೇನ್‌ನ ಚಿತ್ರಣ ಹೇಗಿದೆ?

ಸ್ಪೇನ್‌ನಲ್ಲಿ ಕೋವಿಡ್-19 ವೈರಸ್ ದೊಡ್ಡ ಪ್ರಮಾಣದಲ್ಲಿ ಸಾವು ನೋವು ಸೃಷ್ಟಿಸಿದೆ. ಹೀಗಾಗಿ ಇದೀಗ ದೇಶದಲ್ಲಿ ಅಂತ್ಯ ಸಂಸ್ಕಾರದ ಕಾರ್ಯಕ್ರಮಗಳಿಗೂ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಸರ್ಕಾರದ ನಿಯಮದ ಪ್ರಕಾರ, ಅಂತ್ಯ ಸಂಸ್ಕಾರದಲ್ಲಿ ಮೂರಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳುವಂತಿಲ್ಲ. ಸ್ಪೇನ್‌ನಲ್ಲಿ ಈಗಾಗಲೇ ಕೊರೊನಾ ವೈರಸ್‌ಗೆ ಈಗಾಗಲೇ 7,340 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಟಲಿಯ ನಂತರ ಅತೀ ಹೆಚ್ಚು ಸಾವುನೋವು ಸಂಭವಿಸಿದ್ದು ಇದೇ ದೇಶದಲ್ಲಿ ಅನ್ನೋದು ಗಮನಾರ್ಹ. ಮುಂದಿನ ಎರಡು ವಾರಗಳ ಜನರ ಜನರು ಮನೆಗಳಿಂದ ಹೊರಬರದಂತೆ ದೇಶದಲ್ಲಿ ಕಠಿಣಾತಿಕಠಿಣ ನಿರ್ಬಂಧಗಳನ್ನು ಹೇರಲಾಗಿದೆ.

Last Updated : Mar 31, 2020, 10:40 AM IST

ABOUT THE AUTHOR

...view details