ಕರ್ನಾಟಕ

karnataka

ETV Bharat / bharat

ಯುಕೆ-ಅಮೆರಿಕಾ ಆರ್ಥಿಕತೆ ಸದೃಢವಾದ್ರಷ್ಟೇ ಹೈದರಾಬಾದ್ ಐಟಿ ಚೇತರಿಕೆ ಸಾಧ್ಯ!! - it sector in hyderabad

ನಮ್ಮ ದೇಶದ ಐಟಿ ಯೋಜನೆಗಳು ಹೆಚ್ಚಿನಾಂಶ ಬರುವುದು ಅಮೆರಿಕ ಮತ್ತು ಬ್ರಿಟನ್‍ನಿಂದ. ಆ ದೇಶಗಳಲ್ಲಿ ವೈರಾಣುವಿನ ಸೋಂಕು ಹತೋಟಿಗೆ ಬಂದು ಬದುಕು ಸಹಜ ಸ್ಥಿತಿಗೆ ಮರಳಿದರೆ ಉದ್ಯಮವೂ ಸಹಜ ಸ್ಥಿತಿಗೆ ಮರಳುತ್ತದೆ. ಆದರೆ, ಮುಂದೆ ಏನಾಗಬಹುದು ಎಂದು ಈಗಲೇ ಹೇಳಲು ಬರುವುದಿಲ್ಲ. ಐಟಿ ಕಂಪನಿಗಳ ಪ್ರತಿನಿಧಿಗಳು ಉದ್ಯೋಗ ಕಡಿತಗಳ ಕುರಿತು ಹೆಚ್ಚಿನ ವಿವರ ಬೇಕೆಂದು ಕೇಳಿದ್ದಾರೆ.

it
it

By

Published : Apr 14, 2020, 12:46 PM IST

ದೇಶದೊಳಗಿನ ಅಲ್ಪಕಾಲಿಕ ಲಾಕ್‍ಡೌನ್‍ ದೇಶದ ಐಟಿ ಕ್ಷೇತ್ರದ ಮೇಲೆ ಹೆಚ್ಚೇನೂ ಪರಿಣಾಮ ಬೀರದು. ಆದರೆ, ಈ ಲಾಕ್‍ಡೌನ್ ಕೆಲ ತಿಂಗಳುಗಳ ಕಾಲ ಮುಂದುವರಿಯಿತೆಂದರೆ ಐಟಿ ಕಂಪನಿಗಳು ಮತ್ತು ಅವುಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮೇಲೆ ಖಂಡಿತವಾಗಿಯೂ ತೀವ್ರ ಪರಿಣಾಮ ಬೀರುತ್ತದೆ. ಅಮೆರಿಕ ಮತ್ತು ಯೂರೋಪಿನ ದೇಶಗಳು ಕೋವಿಡ್-19ನಿಂದ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳಿದಲ್ಲಿ ಹೈದರಾಬಾದ್ ಐಟಿ ಕ್ಷೇತ್ರ ಮತ್ತೆ ಮೊದಲಿನ ಗತಿ ಪಡೆಯುತ್ತದೆ ಎನ್ನುತ್ತಾರೆ ಹೈದರಾಬಾದ್ ಸಾಫ್ಟ್‌ವೇರ್ ಎಂಟರ್‍ಪ್ರೈಸಸ್ ಅಸೋಸಿಯೇಶನ್ (HYSEA) ಅಧ್ಯಕ್ಷರಾದ ಮುರಳಿ ಬೊಲ್ಲು.

ಅವರು ವಿವರಿಸುವ ಪ್ರಕಾರ, ಐಟಿ ಕಂಪನಿಗಳು ಈಗಾಗಲೇ ತಮ್ಮ ಹಣಕಾಸು ಹೊರೆಯನ್ನು ತಗ್ಗಿಸಲು ಕ್ರಮಗಳಿಗೆ ಮುಂದಾಗಿವೆ. ಪರಿಣಾಮವಾಗಿ ತಮ್ಮ ಉದ್ಯೋಗಿಗಳ ಬಹುಪಾಲು ಮುಂಬಡ್ತಿಗಳನ್ನು ಮುಂದೂಡಿವೆ. “ಸದ್ಯದ ಪರಿಸ್ಥಿತಿಯಲ್ಲಿ ಐಟಿ ಕ್ಷೇತ್ರದಲ್ಲಿ ಶೇ.5ರಷ್ಟು ಉದ್ಯೋಗ ಕಡಿತದ ಸಾಧ್ಯತೆಯಿದೆ” ಎಂದು ಅವರು ‘ಈನಾಡು’ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕೊರೊನಾ ಪರಿಣಾಮ ಎದುರಿಸಲು ಐಟಿ ಕಂಪನಿಗಳುಹೇಗೆ ಸಜ್ಜಾಗಿವೆಯೇ?:ದೇಶದೆಲ್ಲೆಡೆ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದಾಗಿ ಮೊತ್ತಮೊದಲ ಬಾರಿಗೆ ಕಳೆದೆರಡು ವಾರದಿಂದ ಶೇ. 90ರಿಂದ 95ರಷ್ಟು ಐಟಿ ಕ್ಷೇತ್ರದ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಶೇ.5ರಷ್ಟು ಉದ್ಯೋಗಿಗಳು ಮಾತ್ರ ಕಚೇರಿಗಳಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಹಲವು ಕಂಪನಿಗಳು ವೆಚ್ಚಕಡಿತ ಕ್ರಮಗಳನ್ನು ಜಾರಿಗೊಳಿಸತೊಡಗಿವೆ. ಉದ್ಯೋಗಿಗಳ ಮುಂಬಡ್ತಿ ಮತ್ತು ಸಂಬಳ ಹೆಚ್ಚಳಗಳನ್ನು ಸದ್ಯಕ್ಕೆ ಮುಂದೂಡಿವೆ.

‘ಮನೆಯಿಂದ ಕೆಲಸ ಮಾಡುವ’ ವ್ಯವಸ್ಥೆಯಿಂದ ಏನಾದರೂ ತೊಂದರೆ ಇದೆಯೇ?:ಮನೆಯಲ್ಲಿ ಸೂಕ್ತ ಆಸನ ವ್ಯವಸ್ಥೆಯಿಲ್ಲದೇ ಕೆಲಸ ಮಾಡುತ್ತಿರುವುದರಿಂದ ಅನೇಕ ಉದ್ಯೋಗಿಗಳು ಬೆನ್ನುನೋವಿನಿಂದ ನರಳುತ್ತಿದ್ದು, ಬಹಳಷ್ಟು ಮಂದಿ ರಜೆ ಕೇಳುತ್ತಿದ್ದಾರೆ. ಅಂತರ್ಜಾಲದ ಬಳಕೆ ವ್ಯಾಪಕ ಪ್ರಮಾಣದಲ್ಲಿ ಏರಿರುವುದರಿಂದ ಅನೇಕ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಲು ಆನ್‍ಲೈನ್ ತರಗತಿಗಳನ್ನು ನಡೆಸಲಾರಂಭಿಸಿವೆ. ಪರಿಣಾಮವಾಗಿ ಅಂತರ್ಜಾಲದ ಈ ಬೃಹತ್ ಬೇಡಿಕೆಯಿಂದಾಗಿ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಉದ್ಯೋಗಿಗಳು ಸಾಮಾನ್ಯವಾಗಿ ಸ್ಕೈಪ್ ಮತ್ತಿತರ ಚಾಟಿಂಗ್ ವಿಧಾನಗಳ ಮೂಲಕ ಪರಸ್ಪರ ಮಾತಾಡಿಕೊಳ್ಳುತ್ತಿದ್ದಾರೆ. ಸಭೆಗಳೂ ಇವುಗಳ ಮೂಲಕವೆ ನಡೆಯುತ್ತಿವೆ.

ಆದರೆ, ಮನೆಗಳಲ್ಲಿದ್ದುಕೊಂಡು ನಡೆಸುವ ಈ ಸಭೆಗಳಲ್ಲಿ ಹಲವಾರು ತೊಂದರೆಗಳು ಎದುರಾಗುತ್ತವೆ. ಮಕ್ಕಳು ಆಟವಾಡುವುದು, ಮನೆಯ ಇತರ ಸದಸ್ಯರು ಜೋರಾಗಿ ಮಾತಾಡುವುದು ಇತ್ಯಾದಿಗಳೆಲ್ಲಾ ಆನ್‍ಲೈನ್‍ ಸಭೆಗಳಿಗೆ ತೊಡಕುಗಳಾಗಿವೆ. ಕ್ಲೈಂಟುಗಳು ಸದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಹೊಂದಿಕೊಳ್ಳುತ್ತಿದ್ದಾರಾದರೂ ಇದು ದೀರ್ಘಕಾಲ ಮುಂದುವರೆದರೆ ಸಮಸ್ಯೆಯಾಗುತ್ತದೆ. ಅದರಲ್ಲೂ ಅವರು ತಮ್ಮ ತಾಳ್ಮೆ 0ಕಳೆದುಕೊಳ್ಳಲಾರಂಭಿಸಿದರೆ ಸಮಸ್ಯೆ ದೊಡ್ಡ ರೀತಿಯಲ್ಲಿ ಎದುರಾಗುತ್ತದೆ ಎಂಬುದು ಉದ್ಯೋಗಿಗಳ ಅಂಬೋಣ.

ಯೋಜನೆಗಳ ವಿಸ್ತರಣೆ, ಒಪ್ಪಂದಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದೇ?:ವಾಸ್ತವದಲ್ಲಿ ಐಟಿ ಕ್ಷೇತ್ರದ ಪಾಲಿಗೆ ಈಗ ಬಹಳ ಮುಖ್ಯ ಅವಧಿಯಾಗಿದೆ. ಈಗ ನಾವು ನಮ್ಮ ಕ್ಲೈಂಟ್‍ಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಮಯವಾಗಿದೆಯಲ್ಲದೇ ಒಪ್ಪಂದಗಳ ನವೀಕರಣದ ಕುರಿತು ತೀರ್ಮಾನಗಳು ಬಾಕಿಯಿವೆ. ಅಮೆರಿಕದಲ್ಲಿ ಪರಿಸ್ಥಿತಿ ಬೇಗ ಹತೋಟಿಗೆ ಬಂದರೆ ಯೋಜನೆಗಳು ಹೆಚ್ಚು ತೊಂದರೆಯಿಲ್ಲದೇ ಮುಂದುವರಿಯುತ್ತವೆ. ಆದರೆ, ಅಲ್ಲಿ ಪರಿಸ್ಥಿತಿ ಬೇಗನೇ ಸರಿಹೋಗದಿದ್ದರೆ ನಮ್ಮ ಐಟಿ ಕ್ಷೇತ್ರದಲ್ಲಿ ಒಪ್ಪಂದಗಳು ರದ್ದಾಗಬಹುದು ಇಲ್ಲವೇ ನವೀಕರಣಗೊಳ್ಳಬೇಕಾಗಬಹುದು. ಹೀಗಾಗಿ ಅವಧಿ ಮುಗಿದ ಒಪ್ಪಂದಗಳ ನವೀಕರಣದ ಮೇಲೆ ಕೋವಿಡ್-19 ಅಂತಹ ಪರಿಣಾಮವನ್ನು ಖಂಡಿತಾ ಬೀರಲಿದೆ.

ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿತದ ಕುರಿತ ಪ್ರಚಾರದ ಬಗ್ಗೆ ಏನು ಹೇಳುತ್ತೀರಿ?:ನಮ್ಮ ದೇಶದ ಐಟಿ ಯೋಜನೆಗಳು ಹೆಚ್ಚಿನಾಂಶ ಬರುವುದು ಅಮೆರಿಕ ಮತ್ತು ಬ್ರಿಟನ್‍ನಿಂದ. ಆ ದೇಶಗಳಲ್ಲಿ ವೈರಾಣುವಿನ ಸೋಂಕು ಹತೋಟಿಗೆ ಬಂದು ಬದುಕು ಸಹಜ ಸ್ಥಿತಿಗೆ ಮರಳಿದರೆ ಉದ್ಯಮವೂ ಸಹಜ ಸ್ಥಿತಿಗೆ ಮರಳುತ್ತದೆ. ಆದರೆ, ಮುಂದೆ ಏನಾಗಬಹುದು ಎಂದು ಈಗಲೇ ಹೇಳಲು ಬರುವುದಿಲ್ಲ. ಐಟಿ ಕಂಪನಿಗಳ ಪ್ರತಿನಿಧಿಗಳು ಉದ್ಯೋಗ ಕಡಿತಗಳ ಕುರಿತು ಹೆಚ್ಚಿನ ವಿವರ ಬೇಕೆಂದು ಕೇಳಿದ್ದಾರೆ. ಅವರು ಹೇಳುವ ಪ್ರಕಾರ ಸದ್ಯದ ಪರಿಸ್ಥಿತಿ ಸ್ಥಿರವಾಗಿದೆ. ಆದರೆ, ಉದ್ಯೋಗಿಗಳು ತಮ್ಮ ಕೌಶಲ್ಯಗಳನ್ನು ಮತ್ತಷ್ಟು ಸುಧಾರಿಸಿಕೊಳ್ಳದೇ ಹೋದರೆ ಅವರು ಪರಿಸ್ಥಿತಿಯ ವಿಕೋಪಕ್ಕೆ ಒಳಗಾಗುತ್ತಾರೆ. ಸಣ್ಣ ಕಂಪನಿಗಳು ಈಗಾಗಲೇ ಹಲವಾರು ಮಾರ್ಗಗಳ ಮೂಲಕ ತಮ್ಮ ವೆಚ್ಚಗಳನ್ನು ಕಡಿತಗೊಳಿಸಿಕೊಳ್ಳಲು ತೊಡಗಿವೆ. ಸಂಬಳ ಕಡಿತವನ್ನು ಜಾರಿಗೊಳಿಸುತ್ತಿವೆ.

ಇದೇನಾದರೂ ಶೇ.10ರಷ್ಟು ನಡೆದರೆ ಮುಂದೆ ಉದ್ಯೋಗ ಕಡಿತದಲ್ಲಿ ಪರಿಣಮಿಸಹುದು. ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದು ತಾಂತ್ರಿಕವಾಗಿ ಮುಂದುವರಿದ ಹಂತಕ್ಕೆ ಸಂಪೂರ್ಣವಾಗಿ ಸಿದ್ಧವಾಗಿರುವ ಉದ್ಯೋಗಿಗಳಿಗೆ ಉದ್ಯೋಗ ಕಡಿತದ ಭಯವಿಲ್ಲ. ಆದರೆ, ಉತ್ತಮ ಅವಕಾಶಗಳಿಗೆ ಹವಣಿಸಿ ತಮ್ಮ ಉದ್ಯೋಗಗಳನ್ನು ತೊರೆಯಲು ಈಗಾಗಲೇ ಸಿದ್ಧತೆ ನಡೆಸಿದ್ದ ಪರಿಣಿತ ಉದ್ಯೋಗಿಗಳು ದೇಶದಲ್ಲಿ ಆರ್ಥಿಕ ಹಿಂಜರಿತ ಏರ್ಪಡಬಹುದಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುವ ಭಯದಲ್ಲಿ ತಮ್ಮ ರಾಜೀನಾಮೆಗಳನ್ನು ಹಿಂದೆಗೆದುಕೊಳ್ಳುವ ಯೋಚನೆಯಲ್ಲಿದ್ದಾರೆ.

ABOUT THE AUTHOR

...view details