ನವದೆಹಲಿ:ಭಾರತ ಸೇರಿದಂತೆ ಸ್ಮಾರ್ಟ್ಪೋನ್ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳಲ್ಲಿ ಅತ್ಯಂತ ಚಿರಪರಿಚಿತವಾಗಿರುವ ಜನಪ್ರಿಯ ಮೆಸೇಂಜರ್ ಆ್ಯಪ್ ವಾಟ್ಸ್ಆ್ಯಪ್ ಖಾಸಗಿ ಮಾಹಿತಿ ಸೋರಿಕೆ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ.
ಜಿಫ್(GIF) ಫೋಟೋ ಸಂದೇಶಗಳು ಆ್ಯಂಡ್ರಾಯ್ಡ್ನಲ್ಲಿ ಬಳಕೆದಾರರ ಫೋಟೋ ಸೇರಿದಂತೆ ಉಪಯುಕ್ತ ಮಾಹಿತಿಗಳು ಮೂರನೇ ವ್ಯಕ್ತಿಗೆ ಸುಲಭವಾಗಿ ದೊರೆಯುತ್ತದೆ ಎನ್ನುವ ಗಂಭೀರ ವಿಚಾರ ತಿಳಿದು ಬಂದಿದೆ.
ವಾಟ್ಸ್ಆ್ಯಪ್ ಮೆಸೇಜ್ ಮಾಯ..! ಏನಿದು ಹೊಸ ಮಾಯೆ..?
ಹ್ಯಾಕರ್ಗಳು ಜಿಫ್ ಫೋಟೋಗಳಿಗೆ ವಿಶೇಷ ಕೋಡ್ಗಳನ್ನು ನೀಡಿರುತ್ತಾರೆ. ವಾಟ್ಸ್ಆ್ಯಪ್ ಬಳಕೆದಾರರು ಜಿಫ್ ಫೋಟೋಗಳನ್ನು ತಮ್ಮ ಆ್ಯಂಡ್ರಾಯ್ಡ್ ಫೋನಿಗೆ ಡೌನ್ಲೋಡ್ ಮಾಡಿದ ಬಳಿಕ ಅದನ್ನು ವಾಟ್ಸ್ಆ್ಯಪ್ ಇಲ್ಲವೇ ಗ್ಯಾಲರಿಯಲ್ಲಿ ತೆರೆದಾಗ ಆ ಕೋಡ್ ಮೂಲಕ ಹ್ಯಾಕರ್ಗಳು ಸುಲಭವಾಗಿ ಬಳಕೆದಾರರ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ.
ಸದ್ಯ ಅವೇಕನ್ಡ್(Awakened) ಎನ್ನುವ ಸಂಶೋಧನಾ ತಂಡ ಈ ಹ್ಯಾಕಿಂಗ್ ಬಗ್ಗೆ ಮಾಹಿತಿ ನೀಡಿದೆ. ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ವರ್ಷನ್(2.19.244) ಅನ್ನು ಅಪ್ಡೇಟ್ ಮಾಡಿಕೊಂಡಲ್ಲಿ ಈ ಹ್ಯಾಕಿಂಗ್ನಿಂದ ದೂರ ಉಳಿಯಬಹುದು ಎಂದು ಸಂಶೋಧನಾ ತಂಡ ಹೇಳಿದೆ.