'IN-SPAce' ನೇತೃತ್ವ ವಹಿಸಲು ಕೇಂದ್ರಕ್ಕೆ ಇಸ್ರೋದ ಮೂವರು ವಿಜ್ಞಾನಿಗಳ ಹೆಸರು ಶಿಫಾರಸು - ISRO senior scientists refered for IN-SPACe chairman position
ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಖಾಸಗಿ ಕೈಗಾರಿಕೆಗಳ ಭಾಗವಹಿಸುವಿಕೆಯನ್ನು ನಿಯಂತ್ರಿಸಲು ಸ್ಥಾಪನೆಯಾಗಿರುವ 'IN-SPACe' ನ ಅಧ್ಯಕ್ಷ ಸ್ಥಾನಕ್ಕೆ ಇಸ್ರೋದ ಮೂವರು ಹಿರಿಯ ವಿಜ್ಞಾನಿಗಳ ಹೆಸರು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ.

ಬೆಂಗಳೂರು:ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದ (IN-SPACe) ಅಧ್ಯಕ್ಷ ಸ್ಥಾನಕ್ಕಾಗಿ ಇಸ್ರೋದ ಮೂವರು ನಿರ್ದೇಶಕ ಹಂತದ ಹಿರಿಯ ವಿಜ್ಞಾನಿಗಳ ಹೆಸರುಗಳನ್ನು ಪ್ರಧಾನಮಂತ್ರಿಗಳ ಕಚೇರಿಗೆ ಕಳುಹಿಸಲಾಗಿದೆ.
ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಖಾಸಗಿ ಕೈಗಾರಿಕೆಗಳ ಭಾಗವಹಿಸುವಿಕೆ ನಿಯಂತ್ರಿಸುವಲ್ಲಿ IN-SPACe ಪ್ರಮುಖ ಪಾತ್ರ ವಹಿಸುತ್ತದೆ.
ವಿಎಸ್‌ಎಸ್‌ಸಿ (ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ) ನಿರ್ದೇಶಕ ಎಸ್.ಸೋಮನಾಥ್, ಯು ಆರ್ ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಪಿ. ಕುನ್ಹಿಕೃಷ್ಣನ್ ಇಸ್ರೋ ಇಂಟೀರಿಯಲ್ ವ್ಯವಸ್ಥೆಗಳ ಘಟಕ ನಿರ್ದೇಶಕ ಶ್ಯಾಮ್ ದಯಾಳ್ ದೇವ್ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಶೀಘ್ರದಲ್ಲೇ ಕೇಂದ್ರವು ನೇಮಕಾತಿ ಪ್ರಕಟಿಸಲಿದೆ ಎಂದು ಈಟಿವಿ ಭಾರತ್‌ಗೆ ಮೂಲಗಳು ತಿಳಿಸಿವೆ.
ಖಾಸಗಿ ಉದ್ಯಮ, ಅಕಾಡೆಮಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳನ್ನು ಹೊಂದಿರುವ ಐಎನ್ - ಸ್ಪೇಸ್ ಮಂಡಳಿಯು ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಪ್ರಯತ್ನಗಳನ್ನು ಉತ್ತೇಜಿಸಲು ರಾಷ್ಟ್ರೀಯ ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಈ ವರ್ಷದ ಆರಂಭದಲ್ಲಿ ಐಎನ್ - ಸ್ಪೇಸ್ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು, ಮತ್ತು ಸ್ವಾಯತ್ತ ನೋಡಲ್ ಏಜೆನ್ಸಿ ಐಎನ್ -ಸ್ಪೇಸ್ ಅನ್ನು ಸಿಂಗಲ್ ವಿಂಡೋ ನೋಡಲ್ ಏಜೆನ್ಸಿಯಾಗಿ ಸ್ಥಾಪಿಸಲಾಗುವುದು, ತನ್ನದೇ ಆದ ಕೇಡರ್ನೊಂದಿಗೆ, ಇದು ಖಾಸಗಿ ಕೈಗಾರಿಕೆಗಳು ಮತ್ತು ಸ್ಟಾರ್ಟ್ ಅಪ್ಗಳಿಗೆ ಇಸ್ರೋನ ಬಾಹ್ಯಾಕಾಶ ನೌಕಾಯಾನದ ಭಾಗವಹಿಸುವಿಕೆ ಮತ್ತು ಸಹಯೋಗಕ್ಕೆ ಅನುಮತಿ ನೀಡುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ.