ಹೈದರಾಬಾದ್: ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ನ ವಿಜ್ಞಾನಿ ಸುರೇಶ್ ಎಂಬುವವರನ್ನ ಅಮೀರ್ಪೇಟ್ನಲ್ಲಿನ ಅವರ ನಿವಾಸದಲ್ಲಿ ಕೊಲೆ ಮಾಡಲಾಗಿದೆ.
ಹೈದರಾಬಾದ್ನಲ್ಲಿ ಇಸ್ರೋ ವಿಜ್ಞಾನಿ ಹತ್ಯೆ! - ಹೈದರಾಬಾದ್
ಹೈದರಾಬಾದ್ನ ಕೆಲಸ ಮಾಡುತ್ತಿದ್ದ ಕೇರಳ ಮೂಲದ ವಿಜ್ಞಾಯೊಬ್ಬರನ್ನ ಕೊಲೆ ಮಾಡಲಾಗಿದೆ.
ಹೈದರಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಸುರೇಶ್ ನಿನ್ನೆ ಕೆಲಸಕ್ಕೆ ಹಾಜರಾಗಿರಲಿಲ್ಲ. ಈ ವೇಳೆ ಅವರ ಕಚೇರಿಯಿಂದ ಸ್ನೇಹಿತರೊಬ್ಬರು ಫೋನ್ ಮಾಡಿದ್ದಾರೆ. ಆದ್ರೆ ಸುರೇಶ್ ಫೋನ್ ರಿಸೀವ್ ಮಾಡಲಿಲ್ಲ. ಇದರಿಂದ ಅನುಮಾನಗೊಂಡು ಚೆನ್ನೈನಲ್ಲಿ ವಾಸಮಾಡುತ್ತಿದ್ದ ಅವರ ಪತ್ನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಚೆನ್ನೈನಿಂದ ಕುಟಂಬಸ್ಥರೊಂದಿಗೆ ಬಂದ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿ ಅಪಾರ್ಟ್ಮೆಂಟ್ನ ಬಾಗಿಲು ಮುರಿದು ನೋಡಿದಾಗ ಸುರೇಶ್ ಕೊಲೆಯಾಗಿರುವುದು ಕಂಡುಬಂದಿದೆ. ಯಾವುದೋ ಬಲವಾದ ವಸ್ತುವಿನಿಂದ ತೆಲೆ ಹಡೆದು ಕೊಲೆ ಮಾಡಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.