ಹೈದರಾಬಾದ್: ಇಮೇಜಿಂಗ್ ಇನ್ಫ್ರಾರೆಡ್ ಸ್ಪೆಕ್ಟ್ರೋಮೀಟರ್ ಪೇಲೋಡ್‌ನಿಂದ ಪಡೆಯಲಾದ ಚಂದ್ರನ ಮೇಲ್ಮೈಯ ಮೊದಲ ಪ್ರಕಾಶಮಾನವಾದ ಚಿತ್ರವನ್ನು ಚಂದ್ರಯಾನ್ -2 ಕಳಿಸಿದ್ದು, ಇಸ್ರೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಚಂದ್ರಯಾನ 2ನ ಐಐಆರ್ಎಸ್ ಪೇಲೋಡ್‌ನಿಂದ ತೆಗೆದುಕೊಂಡ ಚಂದ್ರನ ಮೇಲ್ಮೈನ ಮೊದಲ ಪ್ರಕಾಶಮಾನವಾದ ಚಿತ್ರವನ್ನು ನೋಡಿ. ಚಂದ್ರನ ಮೇಲ್ಮೈಯಿಂದ ಪ್ರತಿಫಲಿತ ಸೂರ್ಯನ ಬೆಳಕನ್ನು ಅಳೆಯಲು ಇಂಡಿಯನ್ ಇನ್ಸಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ ಈ ಚಿತ್ರವನ್ನ ವಿನ್ಯಾಸಗೊಳಿಸಿದೆ ಎಂದು ಇಸ್ರೋ ಟ್ವೀಟ್ ಮೂಲಕ ತಿಳಿಸಿದೆ.