ಬೆಂಗಳೂರು/ಆಂಧ್ರಪ್ರದೇಶ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಉದ್ದೇಶಿತ ಕಾರ್ಟೋಸ್ಯಾಟ್-3 ಹೊಂದಿರುವ PSLV-C47 ಉಡ್ಡಯನ ದಿನಾಂಕ ಮುಂದೂಡಿದೆ.
ಈ ಮೊದಲಿನಂತೆ ಕಾರ್ಟೋಸ್ಯಾಟ್-3 ಹೊತ್ತೊಯ್ಯುವ PSLV-C47 ನ.25ರ ಬೆಳಗ್ಗೆ 9.28ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಬೇಕಿತ್ತು. ಆದರೆ ಸದ್ಯ ಉಡಾವಣೆ ನ.27ರ ಬೆಳಗ್ಗೆ 9.28ಕ್ಕೆ ಮುಂದೂಡಿಕೆಯಾಗಿದೆ.