ಕರ್ನಾಟಕ

karnataka

ETV Bharat / bharat

'ವಿಕ್ರಮ'ನ ಸಂಪರ್ಕಕ್ಕೆ ಇಸ್ರೋ ಸರ್ವಪ್ರಯತ್ನ... ನಾಸಾದ ಸಹಾಯ ಪಡೆಯುವ ಸಾಧ್ಯತೆ - ನಾಸಾ

ಲ್ಯಾಂಡರ್ ಸ್ಥಿತಿಯ ಬಗ್ಗೆ ಈಗಾಗಲೇ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ಭಾನುವಾರ ವಿಕ್ರಮ್ ಲ್ಯಾಂಡರ್ ಥರ್ಮಲ್ ಫೋಟೋವನ್ನು ಇಸ್ರೋ ಸ್ಟೇಷನ್​ಗೆ ಕಳುಹಿಸಿತ್ತು. ಇದು ಸಹಜವಾಗಿಯೇ ವಿಜ್ಞಾನಿಗಳಲ್ಲಿ ಭರವಸೆಯನ್ನು ಮೂಡಿಸಿತ್ತು. ಈ ಬಗ್ಗೆ ಇಸ್ರೋ ಅಧಿಕೃತವಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದೆ.

ವಿಕ್ರಮ್ ಲ್ಯಾಂಡರ್

By

Published : Sep 10, 2019, 11:25 AM IST

ನವದೆಹಲಿ:ಲ್ಯಾಂಡಿಂಗ್ ವೇಳೆ ಏಕಾಏಕಿ ಇಸ್ರೋ ಕೇಂದ್ರದಿಂದ ಸಂಪರ್ಕ ಕಡಿದುಕೊಂಡಿದ್ದ ವಿಕ್ರಮ್ ಲ್ಯಾಂಡರ್ ಜೊತೆಗೆ ಸಂಪರ್ಕ ಸಾಧಿಸಲು ಇಸ್ರೋ ತಂಡ ಶತಪ್ರಯತ್ನ ನಡೆಸುತ್ತಿದೆ.

ಲ್ಯಾಂಡರ್ ಸ್ಥಿತಿಯ ಬಗ್ಗೆ ಈಗಾಗಲೇ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ಭಾನುವಾರ ವಿಕ್ರಮ್ ಲ್ಯಾಂಡರ್ ಥರ್ಮಲ್ ಫೋಟೋವನ್ನು ಇಸ್ರೋ ಸ್ಟೇಷನ್​ಗೆ ಕಳುಹಿಸಿತ್ತು. ಇದು ಸಹಜವಾಗಿಯೇ ವಿಜ್ಞಾನಿಗಳಲ್ಲಿ ಭರವಸೆಯನ್ನು ಮೂಡಿಸಿತ್ತು. ಈ ಬಗ್ಗೆ ಇಸ್ರೋ ಅಧಿಕೃತವಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದೆ.

ಆರ್ಬಿಟರ್ ಸದ್ಯ ವಿಕ್ರಮ್ ಲ್ಯಾಂಡರ್ ಪತ್ತೆ ಮಾಡಿದೆ. ಆದರೆ ಯಾವುದೇ ರೀತಿಯ ಸಂಪರ್ಕ ಸಾಧ್ಯವಾಗಿಲ್ಲ. ಲ್ಯಾಂಡರ್ ಜೊತೆಗೆ ಸಂಪರ್ಕ ಸಾಧಿಸಲು ಎಲ್ಲ ರೀತಿಯ ಪ್ರಯತ್ನಗಳೂ ನಡೆಯುತ್ತಿವೆ ಎಂದು ಇಸ್ರೋ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಸಾಫ್ಟ್​​ ಲ್ಯಾಂಡಿಂಗ್​ ಮಿಸ್​​; ಓರೆಯಾಗಿ ಶಶಿ ಮುತ್ತಿಕ್ಕಿದ ವಿಕ್ರಂ... ಇಸ್ರೋ ಸಾಧಿಸುತ್ತಾ ಮೇಲುಗೈ

ಆರ್ಬಿಟರ್ ಕಳುಹಿಸಿರುವ ಥರ್ಮಲ್ ಫೋಟೋವನ್ನು ಇಸ್ರೋ ಬಿಡುಗಡೆಗೊಳಿಸಿಲ್ಲ. ಆದರೆ, ಮೂಲಗಳ ಪ್ರಕಾರ ಲ್ಯಾಂಡರ್​ಗೆ ಯಾವುದೇ ಹಾನಿಯಾಗಿಲ್ಲ. ವಿಕ್ರಮ್ ಲ್ಯಾಂಡರ್ ಯೋಜನೆಯಂತೆ ಸಾಫ್ಟ್ ಲ್ಯಾಂಡಿಂಗ್ ಆಗದ ಪರಿಣಾಮ ಓರೆಯಾಗಿ ಚಂದ್ರನ ಮೇಲ್ಮೈ ಸ್ಪರ್ಶಿಸಿದೆ. ಸೂಕ್ತ ರೀತಿಯಲ್ಲಿ ಲ್ಯಾಂಡ್ ಆಗದಿರುವುದರಿಂದ ಸಂಪರ್ಕ ಸಾಧಿಸುವುದು ಇಸ್ರೋ ತಂಡಕ್ಕೆ ಸವಾಲಾಗಿ ಪರಿಣಮಿಸಿದೆ.

ಲ್ಯಾಂಡರ್ ಸಂಪರ್ಕಕ್ಕೆ ನಾಸಾ ಸಹಾಯ..?

ನಾಸಾ ಕಳುಹಿಸಿರುವ ಆರ್ಬಿಟರ್ ಸದ್ಯ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿದ್ದು, ಇದು ಸದ್ಯ ಚಂದ್ರಯಾನ-2 ಆರ್ಬಿಟರ್​ಗಿಂತ ಲ್ಯಾಂಡರ್​ಗೆ ಮತ್ತಷ್ಟು ಸನಿಹದಲ್ಲಿದೆ. ಇದೇ ಸಾಧ್ಯತೆ ಸದ್ಯ ಇಸ್ರೋ ವಿಜ್ಞಾನಿಗಳ ಮುಂದಿದೆ. ಜೊತೆಗೆ ಲ್ಯಾಂಡರ್​​ನ ಸ್ಪಷ್ಟವಾದ ಚಿತ್ರ ಇಸ್ರೋ ವಿಜ್ಞಾನಿಗಳ ಅಗತ್ಯವಿದ್ದು, ನಾಸಾದ ಸಹಾಯ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಸ್ರೋ ಅಧ್ಯಕ್ಷ ಕೆ.ಸಿವನ್ ಹೆಸರಿನಲ್ಲಿ ಯಾವುದೇ ಟ್ವಿಟ್ಟರ್​ ಅಕೌಂಟ್ ಇಲ್ಲ.. ಸುಳ್ಳು ಪೋಸ್ಟ್​ ನಂಬದಿರಿ

ನಾಸಾದ ಲುನಾರ್ ರೀಕನೈಸನ್ಸ್ ಆರ್ಬಿಟರ್(ಎಲ್​ಆರ್​ಒ) ಈ ಮೊದಲು ವಿಕ್ರಮ್ ಲ್ಯಾಂಡರ್​ ಸಾಫ್ಟ್​ ಲ್ಯಾಂಡಿಂಗ್​ಗೆ ಮಾಡಿಸಲು ನಿರ್ದಿಷ್ಟ ಸ್ಥಳವನ್ನು ಪತ್ತೆಹಚ್ಚಲು ಸಹಾಯ ಮಾಡಿತ್ತು. ಎಲ್ಲ ಸಾಧ್ಯಾಸಾಧ್ಯತೆ ಯನ್ನು ಗಮನದಲ್ಲಿರಿಸಿಕೊಂಡಿರುವ ಇಸ್ರೋ ತಂಡ ಇನ್ನುಳಿದ ಹನ್ನೊಂದು ದಿನದಲ್ಲಿ ಸಂಪರ್ಕ ಸಾಧಿಸಲು ಪ್ರಯತ್ನ ಮುಂದುವರೆಸಿದೆ.

ABOUT THE AUTHOR

...view details