ಕರ್ನಾಟಕ

karnataka

By

Published : Feb 8, 2021, 5:11 PM IST

Updated : Feb 8, 2021, 5:24 PM IST

ETV Bharat / bharat

ಹಿಮನದಿ ಪ್ರವಾಹದ ಚಿತ್ರ ಹಂಚಿಕೊಂಡ ಅಮೆರಿಕದ ಉಪಗ್ರಹ; ಆಘಾತಕಾರಿ ಸಂಗತಿ ಬಹಿರಂಗ

ಚಮೋಲಿಯಲ್ಲಿ ಸಂಭವಿಸಿದ ಹಿಮಪ್ರವಾಹಕ್ಕೆ ಸಂಬಂಧಿಸಿದಂತೆ ಇಸ್ರೋ ಚಾರ್ಟರ್ ಜಾರಿ ಮಾಡುವಂತೆ ಉತ್ತರಾಖಂಡದ ವಿಪತ್ತು ನಿರ್ವಹಣಾ ಇಲಾಖೆಯು ಕೇಂದ್ರ ಸರ್ಕಾರಕ್ಕೆ ವಿನಂತಿಸಿತ್ತು. ಈ ಹಿನ್ನೆಲೆ ಇಂದು ಇಸ್ರೋ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿವೆ.

ಹಿಮನದಿ ಪ್ರವಾಹ
ಹಿಮನದಿ ಪ್ರವಾಹ

ಡೆಹ್ರಾಡೂನ್:ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ರೇಣಿ ಗ್ರಾಮದಲ್ಲಿ ಹಿಮನದಿ ಒಡೆದಿತ್ತು. ಇದರಿಂದ ಆದ ಅನಾಹುತಕ್ಕೆ ಸಂಬಂಧಿಸಿದಂತೆ ಇಸ್ರೋ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಚಿತ್ರಗಳನ್ನು ಆಧಾರಿಸಿ ಚಮೋಲಿಯಲ್ಲಿ ಉಂಟಾದ ದುರಂತಕ್ಕೆ ಕಾರಣವನ್ನು ಪತ್ತೆ ಹಚ್ಚಲಾಗಿದ್ದು, ಕೆಲವು ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿವೆ.

ಈ ದುರಂತದಿಂದಾಗಿ ಚಮೋಲಿಯಲ್ಲಿ ನಿನ್ನೆಯಿಂದ ಎಲ್ಲಾ ರೀತಿಯ ತಾಂತ್ರಿಕ ತೊಂದರೆ ಉಂಟಾಗಿದೆ. ಈ ವಿಪತ್ತಿಗೆ ಕಾರಣ ಕಂಡುಹಿಡಿಯಲು ಇಸ್ರೋ ಚಾರ್ಟರ್ ಜಾರಿ ಮಾಡುವಂತೆ ಉತ್ತರಾಖಂಡದ ವಿಪತ್ತು ನಿರ್ವಹಣಾ ಇಲಾಖೆಯು ಕೇಂದ್ರ ಸರ್ಕಾರಕ್ಕೆ ವಿನಂತಿಸಿತ್ತು. ಈ ಹಿನ್ನೆಲೆ ಇಂದು ಇಸ್ರೋ ಅಂತಾರಾಷ್ಟ್ರೀಯ ಚಾರ್ಟರ್​ನನ್ನು ಜಾರಿಗೆ ತಂದಿದೆ. ಅಮೆರಿಕದ ಖಾಸಗಿ ಉಪಗ್ರಹ ಕಂಪನಿಯಿಂದ ಪಡೆದ ಛಾಯಾಚಿತ್ರಗಳಿಂದ ಆಘಾತಕಾರಿ ಸಂಗತಿಗಳನ್ನು ಇಸ್ರೋ ಬಹಿರಂಗಪಡಿಸಿದೆ.

ಚಮೋಲಿಯಲ್ಲಿ ಫೆ. 2 ರಿಂದ 5ರವರೆಗೆ ಧೌಲಿ ಗಂಗಾ ನದಿಯ ಮೂಲವಾದ ನಂದಾ ದೇವಿ ಪರ್ವತಗಳಲ್ಲಿ ಭಾರಿ ಹಿಮಪಾತವಾಗಿತ್ತು. ಇದರಿಂದಾಗಿ ಪರ್ವತಗಳಲ್ಲಿ ದೊಡ್ಡ ಪ್ರಮಾಣದ ಹಿಮ ಸಂಗ್ರಹವಾಗಿತ್ತು. ಫೆಬ್ರವರಿ 6 ರಂದು ಹವಾಮಾನ ಬದಲಾದಾಗ ಸಂಗ್ರಹವಾದ ಸಂಪೂರ್ಣ ಹಿಮದ ಗುಡ್ಡವು ಕಳಚಿ ಬಿದ್ದಿರುವುದು ಉಪಗ್ರಹ ಚಿತ್ರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಇಸ್ರೋ ಹೊರಡಿಸಿದ ಅಂತಾರಾಷ್ಟ್ರೀಯ ಚಾರ್ಟರ್ ನಂತರ, ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಅಮೆರಿಕದ ಖಾಸಗಿ ಕಂಪನಿ "ಪ್ಲಾನೆಟ್ ಲ್ಯಾಬ್"ನ ಸ್ಯಾಟಲೈಟ್ ವಿಪತ್ತು ನಡೆದ ಪ್ರದೇಶದ ಮೇಲೆ ಸಂಚರಿಸುತ್ತಿತ್ತು. ಕಳೆದ ಫೆಬ್ರವರಿ 2 ರಿಂದ ಫೆಬ್ರವರಿ 5 ರವರೆಗೆ ಹಿಮಪಾತದಿಂದಾಗಿ ಗ್ಲೇಸಿಯರ್ ಮೇಲೆ ಭಾರಿ ಪ್ರಮಾಣದ ಹಿಮ ಸಂಗ್ರಹಗೊಂಡಿದ್ದು ಹಾಗೂ ನಂತರ ಹವಾಮಾನ ಬದಲಾದಾಗ ಗ್ಲೇಸಿಯರ್ ಕಳಚಿ ಬಿದ್ದಿರುವುದು ಕಾಣಿಸುತ್ತದೆ.

ಓದಿ:ಉತ್ತರಾಖಂಡ ಹಿಮ ಪ್ರವಾಹ: ಸಂಪರ್ಕ ಕಳೆದುಕೊಂಡ ಜನರಿಗೆ ಐಟಿಬಿಪಿ ಸಹಾಯಹಸ್ತ; VIDEO

ಯಾವುದೇ ದೇಶ ಅಥವಾ ಭೂಮಿಯ ಯಾವುದೇ ಭಾಗದಲ್ಲಿ ವಿಪತ್ತು ಸಂಭವಿಸಿದಾಗ ಇಂಟರ್​​ನ್ಯಾಷನಲ್ ರೂಲ್ ಫಾರ್ ಸ್ಪೇಸ್ ಸ್ಯಾಟಲೈಟ್ ಆರ್ಗನೈಸೇಶನ್ ಪ್ರಕಾರ, ಚಾರ್ಟರ್​ ಅನ್ನು ಆ ದೇಶದ ಅನುಮತಿ ಮೇರೆಗೆ ಜಾರಿಗೆ ತರಬೇಕು. ಆ ನಿರ್ದಿಷ್ಟ ಸ್ಥಳದ ಮೂಲಕ ಹಾದುಹೋಗುವ ಎಲ್ಲಾ ಉಪಗ್ರಹಗಳು ಮಾಹಿತಿಯನ್ನು ಹೊಂದಿರುತ್ತವೆ. ಆ ಸ್ಥಳದ ಮೂಲಕ ಯಾವುದೇ ಉಪಗ್ರಹ ಹಾದು ಹೋದರೂ ಅದು ಚಿತ್ರಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಇದನ್ನು ಇಂಟರ್​ನ್ಯಾಷನಲ್ ಚಾರ್ಟರ್ ಎಂದು ಕರೆಯಲಾಗುತ್ತದೆ.

ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಸಂಭವಿಸಿದ ಹಿಮಪ್ರವಾಹದಲ್ಲಿ ಬದುಕುಳಿದವರ ಮತ್ತು ಮೃತಪಟ್ಟವರ ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದೆ. ಈವರೆಗೆ 200ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಇದುವರೆಗೆ 19 ಜನರ ಶವ ಪತ್ತೆ ಹಚ್ಚಲಾಗಿದೆ. ತಪೋವನ್ ಎನ್‌ಟಿಪಿಸಿ ಯೋಜನೆಯ ಸುರಂಗದಲ್ಲಿ ಇದ್ದ 35 ಜನರನ್ನು ರಕ್ಷಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

Last Updated : Feb 8, 2021, 5:24 PM IST

ABOUT THE AUTHOR

...view details