ಕರ್ನಾಟಕ

karnataka

ETV Bharat / bharat

54 ದಿನದ ಪಯಣ, 14 ದಿನದ ಅಧ್ಯಯನ... ಬಾಹುಬಲಿ ರಾಕೆಟ್​ ಉಡಾವಣೆಯತ್ತ ವಿಶ್ವದ ಕಣ್ಣು..!

ಸದ್ಯ ಚಂದ್ರಯಾನ-2ರ ಕ್ಷಣಗಣನೆ ಆರಂಭವಾಗಿರುವ ಸಮಯದಲ್ಲಿ ಇಸ್ರೋ ಮಾಜಿ ಮಾಜಿ ವಿಜ್ಞಾನಿ ಅಹ್ಮದ್ ಈಟಿವಿ ಭಾರತದೊಂದಿಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಬಾಹುಬಲಿ ರಾಕೆಟ್​

By

Published : Jul 21, 2019, 11:08 PM IST

ಹೈದರಾಬಾದ್:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2ರ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮಧ್ಯಾಹ್ನ 2.43ಕ್ಕೆ ಸರಿಯಾಗಿ ರಾಕೆಟ್ ಉಡಾವಣೆಯಾಗಲಿದೆ.

ಚಂದ್ರಯಾನ-2 ಪೂರ್ವನಿಗದಿಯಂತೆ ಜುಲೈ 15ರ ಮುಂಜಾನೆ 3ರ ಸುಮಾರಿಗೆ ಉಡಾವಣೆಗೊಳ್ಳಬೇಕಿತ್ತು. ಉಡಾಯನದ ಒಂದು ಗಂಟೆಗೂ ಮುನ್ನ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಉಡಾವಣೆಯನ್ನು ಮುಂದೂಡಲಾಗಿತ್ತು. ನಾಳೆ ಉಡಾವಣೆಯಾಗಲಿರುವ ರಾಕೆಟ್ ಸೆಪ್ಟೆಂಬರ್ 14ರಂದು ಚಂದ್ರನ ಅಂಗಳಕ್ಕೆ ಕಾಲಿಡಲಿದೆ.

ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ... ನಾಳೆ ಚಂದಿರನತ್ತ ನಮ್ಮ ಹೆಮ್ಮೆಯ ರಾಕೆಟ್

ಸದ್ಯ ಚಂದ್ರಯಾನ-2ರ ಕ್ಷಣಗಣನೆ ಆರಂಭವಾಗಿರುವ ಸಮಯದಲ್ಲಿ ಇಸ್ರೋ ಮಾಜಿ ಮಾಜಿ ವಿಜ್ಞಾನಿ ಅಹ್ಮದ್ ಈಟಿವಿ ಭಾರತದೊಂದಿಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಉಡಾವಣೆ ವೇಳೆ ಕಂಡುಬಂದ ದೋಷವನ್ನು ಅತ್ಯಂತ ಶೀಘ್ರವಾಗಿ ಬಗೆಹರಿಸಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ದೋಷವನ್ನು ಪತ್ತೆಹಚ್ಚಿದ ಬಳಿಕ ಅದನ್ನು ಉಡಾವಣೆಗೆ ಸಜ್ಜುಗೊಳಿಸುವ ಕಾರ್ಯ ಸವಾಲಾಗಿತ್ತು. ಇದನ್ನು ಇಸ್ರೋ ಕಡಿಮೆ ಸಮಯದಲ್ಲಿ ಸರಿಪಡಿಸಿದ್ದು ಶ್ಲಾಘನೀಯ ಎನ್ನುತ್ತಾರೆ ಇಸ್ರೋ ಮಾಜಿ ಮಾಜಿ ವಿಜ್ಞಾನಿ ಅಹ್ಮದ್.

ಚಂದ್ರಯಾನ-2ರಲ್ಲಿ ಲ್ಯಾಂಡರ್ ಹಾಗೂ ರೋವರ್​ಗಳಿದ್ದು, ಇದು ಚಂದ್ರಯಾನ-1ಕ್ಕಿಂತ ಸಂಪೂರ್ಣ ಭಿನ್ನ. ಇದರ ಜೊತೆಗೆ ಸಾಫ್ಟ್​ ಲ್ಯಾಂಡಿಂಗ್​(ಸುರಕ್ಷಿತ ಇಳಿಕೆ) ಅತ್ಯಂತ ಸವಾಲಿನ ಕೆಲಸ ಎನ್ನುವ ವಿಜ್ಞಾನಿ ಅಹ್ಮದ್, ಸಾಫ್ಟ್​ ಲ್ಯಾಂಡಿಂಗ್​​ಗೂ ಮುನ್ನ ಹಲವಾರು ಫೋಟೋಗಳನ್ನು ತೆಗೆಯಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಇಸ್ರೋ ಮಾಜಿ ಮಾಜಿ ವಿಜ್ಞಾನಿ ಅಹ್ಮದ್

ಚಂದ್ರಯಾನ-1ರ ಮೂಲಕ ಚಂದಿರನ ಅಂಗಳದಲ್ಲಿ ನೀರಿನ ಅಂಶವಿದೆ ಎಂದು ವಿಶ್ವಕ್ಕೇ ಹೇಳಿದ್ದ ಭಾರತ ಇದೀಗ ಚಂದ್ರಯಾನ-2ರ ಮೂಲಕ 13 ವಿವಿಧ ಅಂಶಗಳ ಮೇಲೆ ಅಧ್ಯಯನ ನಡೆಸಿ ಮಾಹಿತಿಗಳನ್ನು ಭೂಮಿಗೆ ರವಾನಿಸಲಿದೆ ಎಂದು ಅಹ್ಮದ್ ಹೇಳಿದ್ದಾರೆ.

ಸಂಪೂರ್ಣ ದೇಶೀ ನಿರ್ಮಿತ ಈ ಚಂದ್ರಯಾನ-2 ಯೋಜನೆಯಲ್ಲಿ ಇಸ್ರೋ ಸಾಕಷ್ಟು ವಿಚಾರಗಳನ್ನು ಕಲಿತಿದ್ದು, ವಿಜ್ಞಾನ ಕ್ಷೇತ್ರದಲ್ಲಿ ಭಾರತದ ತಾಕತ್ತನ್ನು ತೋರಿಸಲಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಇಸ್ರೋ ಮಾಜಿ ವಿಜ್ಞಾನಿ ಅಹ್ಮದ್.

ಚಂದ್ರನ ಮೇಲ್ಮೈ ಭೂಮಿಗಿಂತ ಬಹಳ ಭಿನ್ನವಾಗಿದ್ದು ರಾತ್ರಿ ವೇಳೆ ಮೈನಸ್ 120 ಡಿಗ್ರಿ ಇದ್ದರೆ, ಹಗಲಿನ ವೇಳೆ ಉಷ್ಣಾಂಶ 100 ಡಿಗ್ರಿಯ ಗಡಿ ದಾಟುತ್ತದೆ. ಹೀಗಾಗಿ ರೋವರ್​ ಕೇವಲ ಹದಿನಾಲ್ಕು ದಿನ ಮಾತ್ರವೇ ಕಾರ್ಯ ನಿರ್ವಹಿಸಲಿದೆ ಎಂದು ಅಹ್ಮದ್ ತಿಳಿಸಿದ್ದಾರೆ.

ABOUT THE AUTHOR

...view details