ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಕೆ. ಸಿವನ್ ಅವರಿಗೆ ತಮಿಳುನಾಡು ಸರ್ಕಾರದಿಂದ ಪ್ರತಿಷ್ಠಿತ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಪ್ರಶಸ್ತಿ ಲಭಿಸಿದೆ.
ಇಸ್ರೋ ಅಧ್ಯಕ್ಷ ಕೆ. ಸಿವನ್ ಅವರಿಗೆ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಪ್ರಶಸ್ತಿ - Abdul Kalam Award
ಚಂದ್ರಯಾನ-2 ಯಶಸ್ವಿ ಉಡಾವಣೆ ನೇತೃತ್ವ ವಹಿಸಿ ಯಶಸ್ವಿಯಾದ ಇಸ್ರೋ ಅಧ್ಯಕ್ಷ ಕೆ. ಸಿವನ್ ಅವರಿಗೆ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಪ್ರಶಸ್ತಿ ಒಲಿದಿದೆ.
ರಾಕೆಟ್ ಮ್ಯಾನ್ ಎಂದೇ ಖ್ಯಾತರಾಗಿರುವ ಕೆ. ಸಿವನ್ ನೇತೃತ್ವದಲ್ಲಿ ಇಸ್ರೋ ಚಂದ್ರಯಾನ-2 ಯಶಸ್ವಿ ಉಡಾವಣೆ ಮಾಡಿದೆ. ನಿನ್ನೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಿವನ್ ಪ್ರಶಸ್ತಿ ಸ್ವೀಕರಿಸಬೇಕಿತ್ತು. ಆದರೆ ಅವರು ಭಾಗವಹಿಸದ ಹಿನ್ನೆಲೆಯಲ್ಲಿ ಮುಂದೊಂದು ದಿನ ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇನ್ನು ತಮಿಳುನಾಡು ಸರ್ಕಾರದಿಂದ ಮೀನುಗಾರಿಕೆ ಸಹಾಯಕ ನಿರ್ದೇಶಕ ಪಿ.ರಾಮಲ್ಯಕ್ಷ್ಮಿ ಅವರಿಗೆ ಕಲ್ಪನಾ ಚಾವ್ಲಾ ಪ್ರಶಸ್ತಿ, ತಿರುನೆಲ್ವೇಲಿ ಜಿಲ್ಲೆಯ ಕಡಾಯಂ ಮೂಲದ ಪಿ.ಶಣ್ಮುಗವೇಲು ಮತ್ತು ಅವರ ಪತ್ನಿ ಸೆಂಥಮರೈ ಅವರಿಗೆ ದರೋಡೆಕೋರರ ಜೊತೆ ಹೋರಾಡಿ ಶೌರ್ಯ ಮೆರೆದ ಹಿನ್ನೆಲೆಯಲ್ಲಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.