ಕರ್ನಾಟಕ

karnataka

ETV Bharat / bharat

ಇಸ್ರೇಲ್​ ಆರೋಗ್ಯ ಮಂತ್ರಿಗೇ ಕೊರೊನಾ.. ಸಂಪರ್ಕದಲ್ಲಿದ್ದ ಎಲ್ಲಾ ಅಧಿಕಾರಿಗಳಿಗೆ ಐಸೋಲೇಷನ್​..

ಸೋಂಕಿತ ಆರೋಗ್ಯ ಮಂತ್ರಿ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಹಾಗೂ ಇತರ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಿದ್ದ ಕಾರಣ ತೀವ್ರ ಆತಂಕ ಸೃಷ್ಟಿಯಾಗಿದೆ.

Israel's health minister has corona virus
ಇಸ್ರೇಲ್​ ಆರೋಗ್ಯ ಮಂತ್ರಿಗೇ ಬಂತು ಕೊರೊನಾ

By

Published : Apr 2, 2020, 12:50 PM IST

ಜೆರುಸಲೇಂ(ಇಸ್ರೇಲ್​) :ಇಸ್ರೇಲ್​ ಆರೋಗ್ಯ ಮಂತ್ರಿ ಯಾಕೋವ್ ಲಿಟ್ಜ್​ಮನ್​ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಇದರಿಂದಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಅವರನ್ನು ಪ್ರತ್ಯೇಕಗೊಳಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಸೋಂಕಿತ ಆರೋಗ್ಯ ಮಂತ್ರಿ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಹಾಗೂ ಇತರ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಿದ್ದ ಕಾರಣ ತೀವ್ರ ಆತಂಕ ಸೃಷ್ಟಿಯಾಗಿದೆ. ಆರೋಗ್ಯ ಮಂತ್ರಿಯೊಂದಿಗೆ ಹಿಂದಿನ ಎರಡು ವಾರಗಳಿಂದ ಸಂಪರ್ಕದಲ್ಲಿದ್ದ ಎಲ್ಲರನ್ನೂ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಲಾಗಿದೆ.

ಈ ಹಿಂದೆ ಉನ್ನತಾಧಿಕಾರಿಯೊಬ್ಬರಲ್ಲಿ ಕೊರೊನಾ ದೃಢಪಟ್ಟಿದ್ದರಿಂದ ಪ್ರಧಾನಿ ನೆತನ್ಯಾಹು ಅವರನ್ನು ಕ್ವಾರಂಟೈನ್​​​ನಲ್ಲಿಡಲಾಗಿತ್ತು. ವೈದ್ಯರು ಪರೀಕ್ಷೆ ನಡೆಸಿದಾಗ ಅವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಯಾಕೋವ್ ಲಿಟ್ಜ್​ಮನ್​ ಇಸ್ರೇಲ್​ನಲ್ಲಿ ಅತಿ ದೊಡ್ಡ ಸಮುದಾಯವೊಂದಕ್ಕೆ ಸೇರಿದವರಾಗಿದ್ದಾರೆ. ಹಾಗಾಗಿ ಕೊರೊನಾ ಹರಡಿರುವ ಭೀತಿ ಹೆಚ್ಚಾಗಿದೆ. ಈ ಹಿಂದೆ ಸರ್ಕಾರದ ಆದೇಶಗಳನ್ನು ಯಹುದಿಗಳ ಗುರುಗಳು ನಿರ್ಲಕ್ಷಿಸಿದ್ದರು ಎಂಬ ಕಾರಣಕ್ಕೆ ಈಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈಗ ಸದ್ಯಕ್ಕೆ ಕೊರೊನಾ ಇಸ್ರೇಲ್​ನಲ್ಲಿ ತುಂಬಾ ವೇಗವಾಗಿ ಹರಡುತ್ತಿದೆ. ಆರು ಸಾವಿರ ಮಂದಿ ಕೊರೊನಾ ಪಾಸಿಟಿವ್‌ ಎಂದು ದೃಢಪಟ್ಟಿದೆ. 26 ಮಂದಿ ಈವರೆಗೂ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ABOUT THE AUTHOR

...view details