ನವದೆಹಲಿ: ತಂತ್ರಜ್ಞಾನ ದೈತ್ಯ ಇಸ್ರೇಲ್ ಪ್ರತಿ ವರ್ಷ ಭಾರತ ಸ್ವಾತಂತ್ರ್ಯ ದಿನಾಚರಣೆಯಂದು ಕನ್ನಡ ಭಾಷೆಯಲ್ಲಿ ಶುಭಾಶಯ ಕೋರಿ ಕನ್ನಡಿಗರ ಮನಸ್ಸು ಗೆಲ್ಲುತ್ತಿದೆ.
ಭಾರತದ ಮಿತ್ರ ರಾಷ್ಟ್ರಗಳಲ್ಲಿ ಒಂದಾದ ಇಸ್ರೇಲ್ ಭಾರತೀಯರಿಗೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ಕನ್ನಡ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಗಳಲ್ಲಿ ತಿಳಿಸಿದೆ.
ಸ್ವಾತಂತ್ರೋತ್ಸವಕ್ಕೆ ಅನೇಕ ದೇಶಗಳು ಶುಭ ಕೋರಿವೆ. ಆದರೆ ಈ ಎಲ್ಲ ರಾಷ್ಟ್ರಗಳಿಗಿಂತಲೂ ಇಸ್ರೇಲ್ ಶುಭಾಶಯ ತೀರಾ ಭಿನ್ನವಾಗಿದೆ. ಭಾರತದ ವಿವಿಧ ಭಾಷೆಗಳಲ್ಲಿ ಶುಭ ಹಾರೈಸಿರುವ ಇಸ್ರೇಲ್ ಕನ್ನಡಕ್ಕೂ ಆದ್ಯತೆ ನೀಡಿರುವುದು ಗಮನಾರ್ಹ.
ಇಸ್ರೇಲ್ ತನ್ನ ಅಧಿಕೃತ ಟ್ವಿಟ್ಟರ್ ಖಾತತೆಯಲ್ಲಿ 'ಆತ್ಮೀಯ ಭಾರತಕ್ಕೆ ಸ್ವಾತಂತ್ರ್ಯ ದಿನ ಶುಭಾಷಯಗಳು' ಎಂದು ತಿಳಿಸಿದೆ.
ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಕನ್ನಡ ಭಾಷೆಯಲ್ಲಿ ಟ್ವೀಟ್ ಮಾಡಿರುವ ಆ ದೇಶವು ಭಾರತದ ತ್ರಿವರ್ಣ ಧ್ವಜದ ಚಿತ್ರವನ್ನೂ ಸಹ ಪೋಸ್ಟ್ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಈ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುತ್ತಿದೆ.