ನವದೆಹಲಿ:ಕಾಶ್ಮೀರ ವಿಚಾರದಲ್ಲಿ ಆಗಾಗ್ಗೆ ಮೂಗು ತೂರಿಸುವ ಪಾಕಿಸ್ತಾನಕ್ಕೆ ಅದೇ ರಾಷ್ಟ್ರದ ಇಸ್ಲಾಮಿಕ್ ವಿದ್ವಾಂಸ ಭರ್ಜರಿಯಾಗಿ ಟಾಂಗ್ ನೀಡಿದ್ದಾರೆ.
ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ ಕಾಶ್ಮೀರ ಎಂದೂ ನಿಮ್ಮದಾಗಲ್ಲ ಎಂದು ಪಾಕಿಸ್ತಾನದ ನಡೆಯನ್ನು ಟೀಕಿಸಿರುವ ವಿದ್ವಾಂಸ ಇಮಾಮ್ ಮೊಹಮ್ಮದ್ ತೌವ್ಹಿದಿ, ಕಾಶ್ಮೀರ ಎಂದಿಗೂ ಪಾಕಿಸ್ತಾನದ ಭಾಗವಾಗಲು ಸಾಧ್ಯವೇ ಇಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ಯಾಕೆಂದರೆ ಭಾರತ ಇಸ್ಲಾಂ ಧರ್ಮಕ್ಕಿಂತಲೂ ಮೊದಲೇ ಇತ್ತು ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿರುವ ಅವರು, ಪಾಕಿಸ್ತಾನ ಪರಿಸ್ಥಿತಿಯನ್ನ ಪ್ರಾಮಾಣಿಕವಾಗಿ ಅರ್ಥ ಮಾಡಿಕೊಂಡು ಮುನ್ನಡೆಯಬೇಕಿದೆ ಎಂದು ಬುದ್ದಿ ಮಾತನ್ನೂ ಹೇಳಿದ್ದಾರೆ. ಪಾಕಿಸ್ತಾನ ಹಾಗೂ ಕಾಶ್ಮೀರ ಎರಡೂ ಭಾರತದ ಅಂಗವಾಗಿಯೇ ಇದ್ದವು. ಅವು ಅಲ್ಲಿಂದಲೇ ಬಂದವು ಎಂದಿರುವ ತೌವ್ಹಿದಿ, ಮುಸ್ಲಿಮರು ಹಿಂದುತ್ವದಿಂದಲೇ ಮತಾಂತರಗೊಂಡಿದ್ದಾರೆ. ಈ ವಾಸ್ತವವನ್ನು ಯಾವತ್ತಿಗೂ ಬದಲಾಯಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಭಾರತ ಇಸ್ಲಾಂಕ್ಕಿಂತ ಪುರಾತನವಾಗಿದ್ದು, ಪಾಕಿಸ್ತಾನ ಇಸ್ಲಾಂಗಿಂತಲೂ ಹಳೆಯದು ಎಂದು ಇದನ್ನು ಪಾಕಿಸ್ತಾನಿಗಳು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ ಎಂದು ಹೇಳಿದ್ದಾರೆ