ಕರ್ನಾಟಕ

karnataka

ETV Bharat / bharat

ಸಿರಿಯಾ, ಇರಾಕ್​​ ನಂತ್ರ ಭಾರತ, ಶ್ರೀಲಂಕಾದತ್ತ ಐಸಿಸ್​​​​​ ವಕ್ರದೃಷ್ಠಿ - undefined

ಕೇರಳದ ಪ್ರಮುಖ ಬಂದರು ಮಾಲ್​ ಹಾಗೂ ಮತ್ತಿತರ ಪ್ರದೇಶಗಳನ್ನು ಐಸಿಸ್​​ ಗುರಿಯಾಗಿಸಿಕೊಂಡಿದೆ. ಈಗಾಗಲೆ ಸೈಬರ್​ ಸಂಬಂಧಿ ಕೆಲಸಗಳಲ್ಲಿ ಸಂಘಟನೆ ತೊಡಗಿರುವುದು ದಾಳಿಯ ಮುನ್ಸೂಚನೆ ಎಂದು ಕೇರಳ ರಾಜ್ಯ ಗುಪ್ತಚರ ದಳವು, ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಎರಡು ಪತ್ರಗಳನ್ನು ಬರೆದು ಎಚ್ಚರಿಸಿದೆ.

ISIS

By

Published : Jun 20, 2019, 9:24 AM IST

ತಿರುವನಂತಪುರ: ಸಿರಿಯಾ, ಇರಾಕ್​ನಲ್ಲಿ ದಿವಾಳಿಯಾಗಿರುವ ಐಸಿಸ್​​​ ಉಗ್ರ ಸಂಘಟನೆ ಇದೀಗ ಭಾರತ ಹಾಗೂ ಶ್ರೀಲಂಕಾವನ್ನು ಟಾರ್ಗೆಟ್​ ಮಾಡಿದೆ ಎಂಬ ವರದಿ ಆತಂಕಕ್ಕೀಡು ಮಾಡಿದೆ.

ಈ ಸಂಬಂಧ ಕೇರಳ ರಾಜ್ಯ ಗುಪ್ತಚರ ದಳವು, ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಎರಡು ಪತ್ರಗಳನ್ನು ಬರೆದು ಎಚ್ಚರಿಸಿದೆ. ಕೇರಳದ ಪ್ರಮುಖ ಬಂದರು ಮಾಲ್​ ಹಾಗೂ ಮತ್ತಿತರ ಪ್ರದೇಶಗಳನ್ನು ಐಸಿಸ್​​​ ಗುರಿಯಾಗಿಸಿಕೊಂಡಿದೆ. ಈಗಾಗಲೇ ಸೈಬರ್​ ಸಂಬಂಧಿ ಕೆಲಸಗಳಲ್ಲಿ ಸಂಘಟನೆ ತೊಡಗಿರುವುದು ದಾಳಿಯ ಮುನ್ಸೂಚನೆ ಎಂದು ಹೇಳಿದೆ.

ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕಾಶ್ಮೀರ ಈಗಾಗಲೇ ಐಸಿಸ್​​​ ಪ್ರಭಾವಿತ ಪ್ರದೇಶಗಳಾಗಿವೆ. ದಾಳಿ ಕುರಿತಾಗಿ ಟೆಲಿಗ್ರಾಂನಲ್ಲಿ ಉಗ್ರರು ಮಾತುಕತೆ ನಡೆಸಿದ್ದು, ಮಾಹಿತಿ ಸೋರಿಕೆ ದೃಷ್ಟಿಯಿಂದ ಚಾಟ್​ಸೆಕ್ಯುರ್​, ಸಿಗ್ನಲ್ ಹಾಗೂ ಸೈಲೆಂಟ್​ ಟೆಕ್ಸ್ಟ್​​​ಗಳನ್ನು ಬಳಸುತ್ತಿದ್ದಾರೆ. ಕೇರಳದಲ್ಲಿಯೇ ಸುಮಾರು 100 ಯುವಕರು ಈ ಉಗ್ರ ಸಂಘಟನೆ ಸೇರಿದ್ದಾರೆ. ಇವರೆಲ್ಲ ದಕ್ಷಿಣ ಕೇರಳದ ಭಾಗದವರು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇರಳದ ಪೊಲೀಸರು ಹನಿಟ್ರ್ಯಾಪ್​ಗೆ ಒಳಗಾದ 10-12 ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಆಂತರಿಕ ಭದ್ರತೆ ಘಟಕಗಳನ್ನು ಸ್ಥಾಪನೆ ಮಾಡಿ, ತನಿಖೆ ನಡೆಸಲಾಗ್ತಿದೆ. ಶ್ರೀಲಂಕಾ ದಾಳಿ ಸಂಬಂಧ 30 ಮಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದಿದ್ದಾರೆ.

For All Latest Updates

TAGGED:

ABOUT THE AUTHOR

...view details