ಕರ್ನಾಟಕ

karnataka

ETV Bharat / bharat

ಗ್ರ್ಯಾಂಡ್​ ಎಂಟ್ರಿ ಕೊಡೋದು ಅಂದ್ರೆ ಹಿಂಗೇನಾ? - ಎಮಿರೇಟ್ಸ್​ ಏರ್​ಲೈನ್ಸ್

ಮೋಡಗಳ ಮಧ್ಯೆ ಹಾದು ಬರುವ ವಿಮಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಮಾನದ ವಿಡಿಯೋ

By

Published : Aug 7, 2019, 10:19 PM IST

ಲಂಡನ್​ : ಕೆಲವೊಂದು ಕ್ಷಣಗಳು ಭೂಲೋಕದಲ್ಲಿ ಸ್ವರ್ಗದ ಅನುಭವ ಕೊಡುತ್ತವೆ. ಅಂಥಹದ್ದೇ ವಿಡಿಯೋವೊಂದು ನೋಡುಗರ ಮನಸೂರೆಗೊಳಿಸುತ್ತಿದೆ.

ಹೀಗೆ ಮೋಡಗಳ ಮಧ್ಯೆ ಹಾದು ಬರುವ ವಿಮಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಒಂದೊಮ್ಮೆ ನಿಬ್ಬೆರಗಾಗಿಸಿಸುವ ಈ ದೃಶ್ಯವನ್ನು ಎಮಿರೇಟ್ಸ್​ ಏರ್​ಲೈನ್ಸ್ ತನ್ನ​ ಟ್ವಿಟ್ಟರ್​​ ಖಾತೆಯಲ್ಲಿ ಹಂಚಿಕೊಂಡಿದೆ.

ವಿಮಾನ ಲ್ಯಾಂಡ್​ ಆಗೋದಕ್ಕೂ ಕೆಲ ನಿಮಿಷಗಳ ಮುಂಚೆ ಈ ಅದ್ಭುತ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಲಂಡನ್​​ನ ಗ್ಯಾಟ್ವಿಕ್​​​ ಏರ್​​ಪೋರ್ಟ್​ಗೆ ಆಗಮಿಸಿದ ವಿಮಾನ ಮೋಡಗಳ ಮಧ್ಯ ಹಾದು ಬಂದು, ಲ್ಯಾಂಡ್​ ಆಗಿದೆ. ಗ್ರ್ಯಾಂಡ್​ ಎಂಟ್ರಿ ಕೊಡೋದು ಅಂದ್ರೆ ಹೀಗೇನಾ ಅಂತ ಎಮಿರೇಟ್ಸ್​ ಏರ್​ಲೈನ್ಸ್​ ಬರೆದುಕೊಂಡು ಈ ವಿಡಿಯೋ ಹಂಚಿಕೊಂಡಿದೆ.

ABOUT THE AUTHOR

...view details