ಕರ್ನಾಟಕ

karnataka

ETV Bharat / bharat

ವಿಶೇಷ ಲೇಖನ.. ಚೀನಾಗೆ ಆಗಿರುವ ಹಿನ್ನಡೆಯಿಂದ ಭಾರತಕ್ಕೆ ಲಾಭವೇ!?

ಚೀನಾದ ವುಹಾನ್ ನಗರ ಕೊರೊನಾ ವೈರಸ್ ಕೇಂದ್ರಬಿಂದುವಾಗಿ ಹೊರಹೊಮ್ಮಿದಾಗ ಕನಿಷ್ಠ 1,000 ಕಂಪನಿಗಳು ಭಾರತವನ್ನು ಸಂಪರ್ಕಿಸಿವೆ ಎಂಬ ವರದಿಗಳು ಕೇಳಿ ಬಂದಿದ್ದವು. ವಿಶ್ವ ವ್ಯಾಪಾರದಲ್ಲಿ ಚೀನಾದ ಪ್ರಾಬಲ್ಯವನ್ನು ತಡೆಯಲು ಅಮೆರಿಕ ಕಾರ್ಯತಂತ್ರ ಆನುಸರಿಸುತ್ತಿದೆ.

China and India
ಚೀನಾ-ಭಾರತ

By

Published : May 5, 2020, 11:47 AM IST

ಕೋವಿಡ್-19 ನಂತರದ ಬೆಳವಣಿಗೆಗಳು ಭಾರತಕ್ಕೆ ಅನುಕೂಲಕರವಾದ ಪರಿಣಾಮ, ಚೀನಾದೊಂದಿಗೆ ವ್ಯಾಪಾರ ಮಾಡಲು ವಿಶ್ವ ಹಿಂದೇಟು ಹಾಕುತ್ತಿದೆಯೇ? ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಪೂರೈಕೆಯ ಮೇಲೆ ಚೀನಾ ಇದುವರೆಗೆ ಹೊಂದಿರುವ ಪ್ರಾಬಲ್ಯ ಕೊನೆಗೊಳ್ಳುವುದೇ? ತಜ್ಞರು ಮತ್ತು ಸಾಮಾನ್ಯ ನಾಗರಿಕರು ಈ ಪ್ರಶ್ನೆಗಳನ್ನು ಅವಲೋಕಿಸುತ್ತಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಸೋಂಕಿಗೆ ಸ್ಪಂದಿಸುವಲ್ಲಿ ಚೀನಾದ ವೈಫಲ್ಯವು ಭಾರತಕ್ಕೆ ಲಾಭವಾಗಲಿದೆ ಎಂಬ ವಾದವು ಈಗ ಬಲ ಪಡೆಯುತ್ತಿದೆ. ಮುಖ್ಯವಾಗಿ, ಜುಲೈ 2019ರಲ್ಲಿ ಅಮೆರಿಕಾ ಮತ್ತು ಚೀನಾ ವ್ಯಾಪಾರ ಯುದ್ಧದ ಮಧ್ಯೆಯೇ ಜಗತ್ತು ಕಾಣದ ಸಂದರ್ಭಗಳನ್ನು ಎದುರಿಸಲು ಸಜ್ಜಾಯಿತು. ಅದೇ ಸಂದರ್ಭದಲ್ಲಿ ಅಮೆರಿಕಾದ ಐಟಿ ದಿಗ್ಗಜ ಕಂಪನಿಗಳಾದ ಹೆಚ್‌ಪಿ ಮತ್ತು ಡೆಲ್ ಇತರರು ತಮ್ಮ ಉತ್ಪಾದನಾ ಘಟಕಗಳನ್ನು ಚೀನಾದಿಂದ ಸ್ಥಳಾಂತರಿಸಿದ್ದವು. ಜಪಾನಿನ ಕಂಪನಿಗಳಾದ ಸಿಕೊ, ಸೋನಿ ಮತ್ತು ಇತರ ವಿಶ್ವಾಸಾರ್ಹ ಪೂರೈಕೆ ಕೊಂಡಿ ಆಧರಿಸಿದ ಅನೇಕ ಕಂಪನಿಗಳು; ಆಗ್ನೇಯ ಏಷ್ಯಾದ ದೇಶಗಳನ್ನು ಚೀನಾಕ್ಕೆ ಪರ್ಯಾಯವಾಗಿ ಆಯ್ಕೆ ಮಾಡಿವೆ.

ಚೀನಾದ ವುಹಾನ್ ನಗರ ಕೊರೊನಾ ವೈರಸ್ ಕೇಂದ್ರಬಿಂದುವಾಗಿ ಹೊರಹೊಮ್ಮಿದಾಗ ಕನಿಷ್ಠ 1,000 ಕಂಪನಿಗಳು ಭಾರತವನ್ನು ಸಂಪರ್ಕಿಸಿವೆ ಎಂಬ ವರದಿಗಳು ಕೇಳಿ ಬಂದಿದ್ದವು. ವಿಶ್ವ ವ್ಯಾಪಾರದಲ್ಲಿ ಚೀನಾದ ಪ್ರಾಬಲ್ಯವನ್ನು ತಡೆಯಲು ಅಮೆರಿಕ ಕಾರ್ಯತಂತ್ರ ಆನುಸರಿಸುತ್ತಿದೆ. ಉತ್ಪಾದನಾ ಘಟಕಗಳನ್ನು ಚೀನಾದ ಮುಖ್ಯ ಭೂಭಾಗದಿಂದ ಸ್ಥಳಾಂತರಿಸುವ ಕಂಪನಿಗಳಿಗೆ ಜಪಾನ್ ದೇಶವು ಜೆಪಿವೈ 25,000 ಕೋಟಿ ಪ್ಯಾಕೇಜ್ ಘೋಷಿಸಿದೆ. ಕೊರಿಯಾದ ಕೆಲವು ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಲು ಉತ್ಸುಕವಾಗಿವೆ. ಚೀನಾದಲ್ಲಿ ಹೂಡಿಕೆ ಮಾಡಿದ್ದ ಬಂಡವಾಳ ಹಿಂಪಡೆದಿರುವ 56 ಕಂಪನಿಗಳಲ್ಲಿ 26 ವಿಯೆಟ್ನಾಂ, 11 ತೈವಾನ್, 8 ಥೈಲ್ಯಾಂಡ್ ಮತ್ತು 3 ಭಾರತಕ್ಕೆ ಸ್ಥಳಾಂತರಗೊಂಡಿವೆ ಎಂದು ನೋಮುರಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬದಲಾಗುತ್ತಿರುವ ಈ ಸಮೀಕರಣಗಳನ್ನು ಭಾರತವು ಎಷ್ಟರ ಮಟ್ಟಿಗೆ ಬಳಸಿಕೊಳ್ಳಲು ಸಾಧ್ಯವಾಗಬಹುದು ಎನ್ನುವ ಕುರಿತು ಮೂಡಿ ವರದಿಯಲ್ಲಿ ವಿವರಿಸಲಾಗಿದೆ.

ಬದಲಾಗುತ್ತಿರುವ ಅಭಿವೃದ್ದಿ ಪಥದಲ್ಲಿ ಪೂರ್ವ ಮತ್ತು ಆಗ್ನೇಯ ಏಷ್ಯಾದ ದೇಶಗಳು ಅಪಾರ ಪ್ರಯೋಜನವನ್ನು ಪಡೆಯಲಿವೆ ಎಂದು ಮೂಡಿ ವರದಿಯಲ್ಲಿ ಗ್ರಹಿಸಲಾಗಿದೆ. ಉತ್ಪಾದನೆಯಲ್ಲಿ ಚೀನಾ ಸಾಟಿಯಿಲ್ಲದ ಮಹಾಶಕ್ತಿಯಾಗಿ ಉಳಿಯಲು ಇದೀಗ ಸಾಧ್ಯವಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ. ಅನಿರೀಕ್ಷಿತವಾಗಿ ಒದಗಿ ಬಂದಿರುವ ಈ ಅವಕಾಶವನ್ನು ಭಾರತವು ಪಡೆದುಕೊಳ್ಳದಂತೆ ನಿರ್ಬಂಧಿಸುವ ಅಂಶಗಳ ಬಗ್ಗೆ ಕೂಡ ಮೂಡಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೆಚ್ಚಾಗಿರುವ ದೇಶೀಯ ಉತ್ಪಾದನಾ ವೆಚ್ಚವು ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಅಡ್ಡಿಯಾಗಿದೆ. ಭಾರತದಲ್ಲಿ ಬಂಡವಾಳ ಹೂಡಿಕೆ, ದುಬಾರಿ ವಿದ್ಯುತ್ ಮತ್ತು ತೆರಿಗೆಗಳು ಹೆಚ್ಚು ಎಂಬದನ್ನು ಅಂಕಿ-ಅಂಶಗಳು ತೋರಿಸುತ್ತವೆ. ಅಧಿಕಾರಶಾಹಿ ಜಡತ್ವ ಮತ್ತು ವ್ಯವಸ್ಥೆಯ ಪ್ರತಿಯೊಂದು ಹಂತದಲ್ಲೂ ಕಡತಗಳ ವಿಲೇವಾರಿ ವಿಳಂಬವು ಭಾರತದ ಪ್ರಗತಿಗೆ ಅಡ್ಡಿಯಾಗುತ್ತಿದೆ ಎಂದು ತಜ್ಞರು ಹಲವು ವರ್ಷಗಳಿಂದ ಹೇಳುತ್ತಿದ್ದಾರೆ.

ಈ ಅಡೆತಡೆಗಳನ್ನು ಸರ್ಕಾರ ಕಡೆಗಣಿಸುವಂತಿಲ್ಲ. ಚೀನಾ ಎದುರಿಸುತ್ತಿರುವ ಹಿನ್ನಡೆಯ ಸನ್ನಿವೇಶದಲ್ಲಿಯೇ ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನಾ ಉದ್ಯಮಗಳನ್ನು ಬಲಪಡಿಸುವಂತೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ರಾಜ್ಯಗಳಿಗೆ ಕರೆ ನೀಡಿದ್ದಾರೆ. ಭಾರತವನ್ನು ಎಲೆಕ್ಟ್ರಾನಿಕ್ ಉಪಕರಣಗಳ ಕೇಂದ್ರಗಳಾಗಿ ಮಾರ್ಪಾಡು ಆಗಬೇಕಾದ್ರೆ, ಕೇಂದ್ರ ಸರ್ಕಾರವು ಪ್ರತಿ ರಾಜ್ಯದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಅನುದಾನ ನೀಡಬೇಕು. ದೇಶೀಯ ಉತ್ಪಾದನಾ ಘಟಕಗಳ ಪುನರುಜ್ಜೀವನಗೊಳಿಸುವ ಪ್ರಮುಖ ನೀತಿ ನಿರ್ಧಾರಗಳನ್ನು ಸರ್ಕಾರವು ತ್ವರಿತಗತಿಯಲ್ಲಿ ಜಾರಿಗೊಳಿಸಬೇಕು. ಅಲ್ಲದೆ ಹೆಚ್ಚುವರಿಯಾಗಿ, ಸರ್ಕಾರವು ವಿವಿಧ ಕೈಗಾರಿಕೆಗಳನ್ನು ಪೂರೈಕೆ ಕೊಂಡಿಗಳಾಗಿ ಸೇರಿಸಿಕೊಳ್ಳಬೇಕು. ಭೂಸ್ವಾಧೀನ, ಕಾರ್ಮಿಕ ಮತ್ತು ತೆರಿಗೆ ನಿಯಮಗಳನ್ನು ಸರಳಗೊಳಿಸಬೇಕು. ಚೀನಾಕ್ಕೆ ಆವರಿಸುವ ಶೂನ್ಯವನ್ನು ಸದುಪಯೋಗ ಪಡಿಸಿಕೊಳ್ಳಲು ಭಾರತವು ತನ್ನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕು. ಈ ಎಲ್ಲಾ ಸಂಘಟಿತ ಪ್ರಯತ್ನಗಳಿಂದ ಮಾತ್ರ ನಾವು 2024ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಬಹುದಾಗಿದೆ.

ABOUT THE AUTHOR

...view details