ಕರ್ನಾಟಕ

karnataka

ETV Bharat / bharat

ನಾಳೆಯಿಂದ ರೈಲು ಸೇವೆ ಆರಂಭ: ಶೇ 5ರಷ್ಟು ಏರಿಕೆ ಕಂಡ ಐಆರ್‌ಸಿಟಿಸಿ ಷೇರು ಬೆಲೆ - ಲಾಕ್​ಡೌನ್​ ಸಡಿಲಿಕೆ

ಭಾರತೀಯ ರೈಲ್ವೆ ಸೀಟ್​ ಬುಕ್ಕಿಂಗ್​ ಸೌಲಭ್ಯ ಇಂದು ಸಂಜೆ ಸಂಜೆ 4 ಗಂಟೆಗೆ ಪ್ರಾರಂಭವಾಗಲಿದ್ದು, ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಮಾತ್ರ ಬುಕ್ಕಿಂಗ್​​ ಲಭ್ಯವಿರುತ್ತದೆ. ನಾಳೆಯಿಂದ ರೈಲು ಸೇವೆ ಆರಂಭವಾಗಲಿದೆ.

IRCTC shares climb 5% as select passenger train services to resume from May 12
ನಾಳೆಯಿಂದ ರೈಲು ಸೇವೆ ಆರಂಭ

By

Published : May 11, 2020, 1:31 PM IST

ನವದೆಹಲಿ: ಮೇ 12 ರಿಂದ ರೈಲು ಸೇವೆಗಳನ್ನು ಪುನಾರಂಭಿಸುವುದಾಗಿ ಭಾರತೀಯ ರೈಲ್ವೆ ಘೋಷಿಸಿದ್ದರಿಂದ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೈಲ್ವೆ ನಿಗಮದ ಷೇರುಗಳು ಬೆಲೆಯಲ್ಲಿ ಶೇ 5 ರಷ್ಟು ಏರಿಕೆಯಾಗಿವೆ.

ಕಂಪನಿಯ ಷೇರುಗಳು ಶೇ 5 ರಷ್ಟು ಏರಿಕೆ ಕಂಡು 1,302.85 ರೂ.ಗೆ ತಲುಪಿದೆ. ಇನ್ನು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್‌ಎಸ್‌ಇ) ಶೇ 5 ರಷ್ಟು ಏರಿಕೆಯಾಗಿ 1,303.55 ರೂ.ಗೆ ತಲುಪಿದೆ.

ರೈಲ್ವೆ ಸೀಟ್​ ಬುಕ್ಕಿಂಗ್​ ಸೌಲಭ್ಯ ಇಂದು ಸಂಜೆ ಸಂಜೆ 4 ಗಂಟೆಗೆ ಪ್ರಾರಂಭವಾಗಲಿದ್ದು, ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಮಾತ್ರ ಬುಕ್ಕಿಂಗ್​​ ಲಭ್ಯವಿರುತ್ತದೆ. ನಾಳೆಯಿಂದ ರೈಲು ಸೇವೆ ಆರಂಭವಾಗಲಿದ್ದು,ರೈಲುಗಳ ನಿರ್ಗಮನಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಪ್ರಯಾಣಿಕರು ನಿಲ್ದಾಣಕ್ಕೆ ಬರುವಂತೆ ಮನವಿ ಮಾಡಲಾಗಿದೆ.

ಎಲ್ಲ ಹವಾನಿಯಂತ್ರಿತ ರೈಲುಗಳು 15 ರಾಜಧಾನಿ ಮಾರ್ಗಗಳಲ್ಲಿ ಪ್ರಾರಂಭವಾಗಲಿವೆ. ಇದರ ಶುಲ್ಕವು ಸೂಪರ್ ಫಾಸ್ಟ್ ರೈಲಿಗೆ ಸಮನಾಗಿರುತ್ತದೆ ಎಂದು ಇಲಾಖೆ ತಿಳಿಸಿದೆ. ಈ ವಿಶೇಷ ರೈಲುಗಳು ನವದೆಹಲಿಯಿಂದ ದಿಬ್ರುಗ್ರಢ, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ಪುರ್, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡ್ಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮು ತಾವಿಗಳಿಗೆ ಸಂಚರಿಸಲಿವೆ.

ABOUT THE AUTHOR

...view details