ಕರ್ನಾಟಕ

karnataka

ETV Bharat / bharat

ಇದುವರೆಗೆ 1.86 ಲಕ್ಷ ಊಟದ ಪೊಟ್ಟಣ ವಿತರಿಸಿದ ಭಾರತೀಯ ರೈಲ್ವೆ

ಸ್ಥಳೀಯ ಆಹಾರ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡ ಭಾರತೀಯ ರೈಲ್ವೆ ಲೆಮನ್​ ರೈಸ್​, ಕಿಚಡಿ ಚೋಕಾ ಹಾಗೂ ಕದಿ ಚವಾಲ್​ ಸಿದ್ಧಪಡಿಸಿ ವಿತರಿಸಿ ಜನರ ಹಸಿವು ನೀಗಿಸಿದೆ.

1.86 ಲಕ್ಷ ಊಟದ ಪೊಟ್ಟಣ ವಿತರಿಸಿದ ಭಾರತೀಯ ರೈಲ್ವೆ
1.86 ಲಕ್ಷ ಊಟದ ಪೊಟ್ಟಣ ವಿತರಿಸಿದ ಭಾರತೀಯ ರೈಲ್ವೆ

By

Published : Apr 5, 2020, 10:46 AM IST

ನವದೆಹಲಿ: ಬಡವರು, ನಿರ್ಗತಿಕರ ಆಹಾರದ ಪಡಿಪಾಟಲು ನಿವಾರಿಸಲು ಭಾರತೀಯ ರೈಲ್ವೆ ಕಳೆದ ಏಳು ದಿನಗಳಲ್ಲಿ ಸುಮಾರು 1.86 ಲಕ್ಷ ಊಟದ ಪೊಟ್ಟಣಗಳನ್ನು ವಿತರಿಸಿದೆ.

ಮಾರ್ಚ್ 28 ರಿಂದ ನಾವು ಅಗತ್ಯವಿರುವವರಿಗೆ 1,86,140 ಊಟದ ಪೊಟ್ಟಣಗಳನ್ನು ವಿತರಿಸಿದ್ದೇವೆ ಎಂದು ಐಆರ್​ಸಿಟಿಸಿ ವಕ್ತಾರರು ತಿಳಿಸಿದ್ದಾರೆ.

ರೈಲ್ವೆ ಸಚಿವಾಲಯದ ಪ್ರಕಾರ, ಮಾರ್ಚ್ 28 ರಂದು 2,500 ಊಟದಿಂದ ಪ್ರಾರಂಭಿಸಿ, 29 ರಂದು 11,030, ಮಾರ್ಚ್ 30 ರಂದು 20,320 ಮತ್ತು ಮಾರ್ಚ್ 31 ರಂದು 30,850, ಏಪ್ರಿಲ್ 1 ರಂದು 37,370, ಏಪ್ರಿಲ್ 2 ರಂದು 40,870 ಮತ್ತು ಏಪ್ರಿಲ್ 3 ರಂದು 43,100 ಊಟದ ಪೊಟ್ಟಣಗಳನ್ನು ಜನರಿಗೆ ವಿತರಣೆ ಮಾಡಿದೆ.

ಅಲ್ಲದೆ, ಆರ್‌ಪಿಎಫ್ (ರೈಲ್ವೆ ಪ್ರೊಟೆಕ್ಷನ್ ಫೋರ್ಸ್) ಸಹ ಆಹಾರ ವಿತರಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಂಡಿದೆ.

ABOUT THE AUTHOR

...view details