ಇರಾನ್:ಇರಾನ್‌ನ ಪ್ರಮುಖ ಕುದ್ಸ್ ಮಿಲಿಟರಿ ಪಡೆಯ ಮುಖ್ಯಸ್ಥ ಮತ್ತು ಇಸ್ಲಾಮಿಕ್ ಗಣರಾಜ್ಯದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ ಕಸ್ಸೆಮ್ ಸೊಲೈಮಾನಿ ಹತ್ಯೆಯ ನಂತರ ಇರಾನ್ ಇನ್ನು ಮುಂದೆ 2015 ರಲ್ಲಿನ ಪರಮಾಣು ಒಪ್ಪಂದದ ಯಾವುದೇ ನೀತಿ-ನಿಯಮಗಳನ್ನು ಪಾಲಿಸುವುದಿಲ್ಲ ಹಾಗೂ ಇರಾನ್‌ನ ಮಣ್ಣಿನಿಂದ ಎಲ್ಲ ಅಮೆರಿಕನ್ ಸೈನಿಕರನ್ನು ಹೊರಹಾಕುವಂತೆ ಇರಾನ್ ಸಂಸತ್ತು ಭಾನುವಾರ ಪ್ರಕಟಿಸಿದೆ.
ಈ ಅವಳಿ ಬೆಳವಣಿಗೆಗಳು ಸಂಭವಿಸಿದಲ್ಲಿ, ಇರಾನ್ ಪರಮಾಣು ಬಾಂಬ್ ನಿರ್ಮಿಸಲು ಮತ್ತು ಇಸ್ಲಾಮಿಕ್ ಸ್ಟೇಟ್ ಗುಂಪನ್ನು ಇರಾನ್ನಲ್ಲಿ ಮರು ಸ್ಥಾಪಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರಿಂದ ಮಧ್ಯಪ್ರಾಚ್ಯ ಹೆಚ್ಚು ಅಪಾಯಕಾರಿ ಆಗುವ ಸಂಭವ ಜಾಸ್ತಿ ಎಂದು ಬಣ್ಣಿಸಲಾಗುತ್ತಿದೆ.
ಯುಎಸ್ನ ಪರಮಾಣು ಮಿತಿಗಳನ್ನು ನಾವಿನ್ನು ಪಾಲಿಸೊಲ್ಲ: ಇರಾನ್ ಘೋಷಣೆ - national news
ಅಧ್ಯಕ್ಷ ಹಸನ್ ರೂಹಾನಿ ಅಲ್ಲಿನ ದೂರದರ್ಶನವೊಂದಕ್ಕೆ ಹೇಳಿಕೆ ನೀಡಿ, ಪರಮಾಣು ಬಾಂಬ್ ಉತ್ಪಾದನೆ ಮತ್ತು ಸಂಶೋಧನೆ ಮೇಲೆ ತಮ್ಮ ರಾಷ್ಟ್ರ ಮಿತಿಗಳನ್ನ ಹೇರುವುದಿಲ್ಲ ಎಂದು ಘೋಷಿಸಿದ್ದಾರೆ. ಇದು ಕೊಲ್ಲಿ ರಾಷ್ಟ್ರಗಳಲ್ಲಿ ಆತಂಕವನ್ನುಂಟು ಮಾಡಿದೆ.
ಯುಎಸ್ನ ಪರಮಾಣು ಮಿತಿಗಳನ್ನು ನಾವಿನ್ನು ಪಾಲಿಸೊಲ್ಲ: ಇರಾನ್
ಅಧ್ಯಕ್ಷ ಹಸನ್ ರೂಹಾನಿ ಅಲ್ಲಿನ ದೂರದರ್ಶನವೊಂದಕ್ಕೆ ಹೇಳಿಕೆ ನೀಡಿ, ಪರಮಾಣು ಬಾಂಬ್ ಉತ್ಪಾದನೆ ಮತ್ತು ಸಂಶೋಧನೆ ಮೇಲೆ ತಮ್ಮ ರಾಷ್ಟ್ರ ಮಿತಿಗಳನ್ನ ಹೇರುವುದಿಲ್ಲ ಎಂದು ಘೋಷಿಸಿದ್ದಾರೆ. ಇದು ಕೊಲ್ಲಿ ರಾಷ್ಟ್ರಗಳಲ್ಲಿ ಆತಂಕವನ್ನುಂಟು ಮಾಡಿದೆ.