ನವದೆಹಲಿ:ಉತ್ತರ ಅಮೆರಿಕಾದ ಅತ್ಯಂತ ಎತ್ತರದ ಪರ್ವತವನ್ನು ಏರಿದ ಮೊದಲ ಮಹಿಳೆ ಎಂಬ ದಾಖಲೆಯನ್ನು ಭಾರತದ ಐಪಿಎಸ್ ಅಧಿಕಾರಿಯೊಬ್ಬರು ಬರೆದು ಕೀರ್ತಿ ತಂದಿದ್ದಾರೆ.
ಜೈ ಹೋ...! ಅಮೆರಿಕ ಪರ್ವತದ ಮೇಲೆ ಭಾರತದ ಪತಾಕೆ ಹಾರಿಸಿದ ಮಹಿಳಾ IPS ಅಧಿಕಾರಿ..
ಉತ್ತರಪ್ರದೇಶದ ಡಿಐಜಿ ಹಾಗೂ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಅಧಿಕಾರಿ ಅಪರ್ಣಾ ಕುಮಾರ್ ಅವರು ಉತ್ತರ ಅಮೆರಿಕಾದ ಅತ್ಯಂತ ಎತ್ತರದ ಪರ್ವತವನ್ನು ಏರಿದ ಮೊದಲ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ.
ಉತ್ತರಪ್ರದೇಶದ ಡಿಐಜಿ ಹಾಗೂ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಅಧಿಕಾರಿ ಅಪರ್ಣಾ ಕುಮಾರ್ ಅವರು ಇಂತಹದೊಂದು ಇತಿಹಾಸ ನಿರ್ಮಿಸಿದ್ದಾರೆ ಎಂದು ಐಟಿಬಿಪಿ ಅಧಕಾರಿಗಳು ಹೇಳಿದ್ದಾರೆ.
ಸಮುದ್ರ ಮಟ್ಟದಿಂದ 20,310 ಅಡಿ ಎತ್ತರದಲ್ಲಿರುವ ದಿನಾಲಿ ಪರ್ವತವನ್ನು ಅಪರ್ಣಾ ಅವರು ಏರಿದ್ದಾರೆ. ಸಿವಿಲ್ ಸರ್ವೆಂಟ್ವೊಬ್ಬರು ಅತಿ ಎತ್ತರವಾದ ಈ ಪರ್ವತ ಏರಿದ್ದು ಇದೇ ಮೊದಲು ಎನ್ನಲಾಗಿದೆ. ಅಂದಹಾಗೆ, ತಮ್ಮ ಮೂರನೇ ಪ್ರಯತ್ನದಲ್ಲಿ ಅವರು ಪರ್ವತದ 7 ನೇ ಹಂತವನ್ನು ತಲುಪಿದ್ದಾರೆ.ಜನವರಿ 13ರಂದು ನಾರ್ತ್ ಪೋಲ್ ತಲುಪಿದ್ದ ಅಪರ್ಣಾ, ನಾರ್ವೆಯ ಓಸ್ಲೋದಿಂದ ಏಪ್ರಿಲ್ 4ರಂದು ಹೊರಟು, 111 ಮೈಲಿಗಳ ಸಾಗಿ ತಂಡವನ್ನು ಮುನ್ನಡೆಸಿದ್ದರು.