ಕರ್ನಾಟಕ

karnataka

ETV Bharat / bharat

ಯಾವ ತಂಡಕ್ಕೂ ಬೇಡವಾದ ಯೂಸುಫ್: ಟ್ವೀಟ್‌ ಮೂಲಕ ಧೈರ್ಯ ತುಂಬಿದ ಸಹೋದರ - ಸಹೋದರ ಇರ್ಫಾನ್ ಪಠಾಣ್​ ಟ್ವೀಟ್​​

2008 ರಿಂದಲೂ ಸತತವಾಗಿ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಭಾಗಿಯಾಗಿದ್ದ ಕ್ರಿಕೆಟಿಗ ಯೂಸುಫ್​ ಪಠಾಣ್​ ಈ ಸಲದ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾಗಲಿಲ್ಲ.

IPL Player Auction
ಯುಸೂಪ್​ ಪಠಾಣ್​​

By

Published : Dec 20, 2019, 1:14 PM IST

ಕೋಲ್ಕತ್ತಾ:ಒಂದು ಕಾಲದಲ್ಲಿಟೀಂ ಇಂಡಿಯಾದ ಬಿಗ್​ ಹಿಟ್ಟರ್​ ಎಂಬ ಖ್ಯಾತಿಯ ಆಲ್​​ರೌಂಡರ್​​ ಯೂಸುಫ್​ ಪಠಾಣ್​​ ಈ ಸಲದ ಐಪಿಎಲ್​​ನ ಬಿಡ್ಡಿಂಗ್​​ನಲ್ಲಿ ಸೇಲ್​ ಆಗಲೇ ಇಲ್ಲ. ಹೀಗಾಗಿ ಐಪಿಎಲ್‌ನ ಮತ್ತೊಂದು ಆವೃತ್ತಿಯಲ್ಲಿ ಅಬ್ಬರಿಸುವ ಅವರ ಕನಸು ಕಮರಿದೆ.

2008ರಿಂದ ಸತತವಾಗಿ ಇಂಡಿಯನ್​​ ಪ್ರೀಮಿಯರ್​​ ಲೀಗ್​​ನಲ್ಲಿ ಭಾಗಿಯಾಗಿದ್ದ ಯೂಸೂಫ್​ ಇದೇ ಮೊದಲ ಸಲ ಅನ್​​ಸೋಲ್ಡ್​ ಆಗಿದ್ದು ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿಯಿಂದ ಹೊರ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ಹರಾಜು ಪ್ರಕ್ರಿಯೆಯಲ್ಲಿ ಅನ್​ಸೋಲ್ಡ್​​ ಆಗುತ್ತಿದ್ದಂತೆ ಸಹೋದರ ಇರ್ಫಾನ್​ ಪಠಾಣ್ ಹೃದಯಸ್ಪರ್ಶಿ ಸಂದೇಶ ರವಾನಿಸಿದ್ದು ಯೂಸೂಫ್‌ಗೆ​ ಧೈರ್ಯ ತುಂಬಿದ್ದಾರೆ.

ಇರ್ಫಾನ್‌ ಟ್ವೀಟ್‌:

'ಬದುಕಿನಲ್ಲಿ ಎದುರಾಗುವ ಸಣ್ಣ ಸೋಲುಗಳು ನಿಮ್ಮ ವೃತ್ತಿ ಜೀವನವನ್ನು ವ್ಯಾಖ್ಯಾನಿಸಲಾರವು. ನೀವೊಬ್ಬ ಅತ್ಯುತ್ತಮ ಆಟಗಾರ. ನಿಜವಾದ ಪಂದ್ಯ ವಿಜೇತ ನೀವು. ಲವ್​ ಯು ಲಾಲಾ' ಎಂದು ತಡರಾತ್ರಿ ಟ್ವೀಟ್​ ಮಾಡಿದ್ದಾರೆ.

ಯೂಸುಫ್‌ ಐಪಿಎಲ್ ಸಾಧನೆ:

2008 ರಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ ಲಗ್ಗೆ ಹಾಕಿದ್ದ ಈ ಆಟಗಾರ​​​ ರಾಜಸ್ಥಾನ ರಾಯಲ್ಸ್​​ ಪರ 435 ರನ್​ ಗಳಿಸಿ, 8 ವಿಕೆಟ್​​ ಕಿತ್ತಿದ್ದರು. ಈ ವೇಳೆ ಕೇವಲ 21 ಎಸೆತಗಳಲ್ಲಿ 50 ರನ್ ದಾಖಲಿಸಿದ್ದರು. 2014ರಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಪರ ಕಣಕ್ಕಿಳಿದಿದ್ದ ಈ ಆಟಗಾರ​ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದರು.

ಯೂಸುಫ್ ಜೊತೆ ಹೊರಗುಳಿದ ಇತೆರೆ ಆಟಗಾರರು:

ಈ ಹಿಂದಿನ ಎರಡು ಆವೃತ್ತಿಗಳಲ್ಲಿ ಸನ್​​ರೈಸರ್ಸ್​ ಹೈದರಾಬಾದ್​ ತಂಡದ ಪರ ಆಡಿದ್ದ ಯೂಸುಫ್‌​ ಅವರನ್ನು ಫ್ರಾಂಚೈಸಿ ಕೈಬಿಟ್ಟಿತ್ತು. ಇವರ ಜತೆಗೆ ಟೆಸ್ಟ್​ ಕ್ರಿಕೆಟಿಗ ಚೇತೇಶ್ವರ್​ ಪೂಜಾರಾ, ಸ್ಟುವರ್ಟ್​ ಬಿನ್ನಿ, ಇವಿನ್​ ಲೆವಿಸ್​​, ಶಾಯಿ ಹೋಪ್​ ಅವರನ್ನೂ ಕೊಂಡುಕೊಂಡಿಲ್ಲ.

ABOUT THE AUTHOR

...view details