ಕೋಲ್ಕತ್ತಾ:ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲ ಫ್ರಾಂಚೈಸಿಗಳು ಓಡುವ ಕುದುರೆಗಳಿಗೆ ಮಣೆ ಹಾಕುತ್ತಿದ್ದಾರೆ. ಪ್ರಮುಖವಾಗಿ ಆಸ್ಟ್ರೇಲಿಯಾದ ಪ್ಲೇಯರ್ಸ್ಗಳಿಗೆ ಫ್ರಾಂಚೈಸಿಗಳು ಮಣೆ ಹಾಕಿದ್ದು, ಭಾರಿ ಮೊತ್ತ ನೀಡಿ ತಮ್ಮ ತಮ್ಮ ತಂಡಗಳಿಗೆ ಖರೀದಿಸುತ್ತಿದ್ದಾರೆ.
15 ಕೋಟಿ ರೂಗೆ ಪ್ಯಾಟ್ ಕಮ್ಮಿನ್ಸ್ ಇಲ್ಲಿಯವರೆಗಿನ ಹರಾಜು ಪ್ರಕ್ರಿಯೆಯಲ್ಲಿ ಪ್ಯಾಟ್ ಕುಮ್ಮಿನ್ಸ್ ಬರೋಬ್ಬರಿ 15.5 ಕೋಟಿ ರೂ ಪಡೆದುಕೊಂಡು ಸೇಲ್ ಆಗಿದ್ದು, ಇದೇ ಮೊದಲ ಬಾರಿಗೆ ಅತಿ ಹೆಚ್ಚು ಹಣ ಪಡೆದುಕೊಂಡು ಬಿಕರಿಯಾಗಿರುವ ವಿದೇಶಿ ಪ್ಲೇಯರ್ಸ್ ಆಗಿದ್ದಾರೆ. ಈ ಹಿಂದೆ ಟೀಂ ಇಂಡಿಯಾದ ಆಲ್ರೌಂಡರ್ ಯುವರಾಜ್ ಸಿಂಗ್ 2015ರಲ್ಲಿ ಡೆಲ್ಲಿ ತಂಡಕ್ಕೆ 16 ಕೋಟಿ ರೂಗೆ ಸೇಲ್ ಆಗಿದ್ದರು. ಇದು ಇಲ್ಲಿಯವರೆಗಿನ ಅತಿ ಹೆಚ್ಚಿನ ಬಿಡ್ಡಿಂಗ್ ಆಗಿದೆ.
ಗ್ಲೆನ್ ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾ ನಿಗದಿತ ಓವರ್ಗಳ ಕ್ಯಾಪ್ಟನ್ ಆರೋನ್ ಫಿಂಚ್ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 4.4 ಕೋಟಿ ರೂಗೆ ಸೇಲ್ ಆಗಿದ್ದು, ಅವರ ಮೂಲ ಬೆಲೆ 1 ಕೋಟಿ ಆಗಿತ್ತು. ಉಳಿದಂತೆ ಮತ್ತೋರ್ವ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಕ್ರಿಸ್ ಲಿನ್ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದು, ಬರೋಬ್ಬರಿ 2 ಕೋಟಿ ರೂಗೆ ಸೇಲ್ ಆಗಿದ್ದಾರೆ.
ಇದರ ಮಧ್ಯೆ ಕಳೆದ ವರ್ಷ ಪಂಜಾಬ್ ತಂಡದಿಂದ ರಿಲೀಸ್ ಆಗಿದ್ದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಈ ಸಲ ಮತ್ತೊಮ್ಮೆ ಪಂಜಾಬ್ ತಂಡ ಸೇರಿಕೊಂಡಿದ್ದು, ಬರೋಬ್ಬರಿ 10.75 ಕೋಟಿಗೆ ರಿಸೇಲ್ ಆಗಿದ್ದಾರೆ. ಇವರ ಮೂಲ ಬೆಲೆ 2 ಕೋಟಿ ಆಗಿತ್ತು. ಇನ್ನು ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಬರೋಬ್ಬರಿ 15.5 ಕೋಟಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರಿಕೊಂಡಿದ್ದಾರೆ. ಆಸ್ಟ್ಟೇಲಿಯಾ ವಿಕೆಟ್ ಕೀಪರ್ ಅಲೆಕ್ಸ್ ಕೇರಿ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದು 2.4 ಕೋಟಿಗೆ ಬಿಕರಿಯಾಗಿದ್ದಾರೆ.