ಕರ್ನಾಟಕ

karnataka

ETV Bharat / bharat

ಪಂಜಾಬ್ ವಿರುದ್ಧ ಹೀನಾಯ ಸೋಲು: ಆರ್​ಸಿಬಿ ನಾಯಕ ಕೊಹ್ಲಿ ಹೇಳಿದ್ದೇನು? - ಪಂಜಾಬ್ ವಿರುದ್ಧ ಆರ್​ಸಿಬಿ ಸೋಲು

17 ಮತ್ತು 18ನೇ ಓವರ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಅವರ ಎರಡು ಸುಲಭದ ಕ್ಯಾಚ್‌ಗಳನ್ನು ಕೊಹ್ಲಿ ಕೈಬಿಟ್ಟರು. ಇದರಿಂದ ಅಂತಿಮ 2 ಓವರ್​ಗಳಲ್ಲಿ ಮಿಂಚಿದ ರಾಹುಲ್, ತಂಡದ ಮೊತ್ತ 200ರ ಗಡಿ ದಾಟಿಸಿದ್ರು.

Skipper Kohli reacts after RCB's humiliating 97 runs loss
ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ

By

Published : Sep 25, 2020, 7:45 AM IST

ದುಬೈ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಾವು ಮಾಡಿದ ತಪ್ಪುಗಳು 97 ರನ್​ಗಳ ಸೋಲಿಗೆ ಕಾರಣವಾಯಿತು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ.

17 ಮತ್ತು 18ನೇ ಓವರ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಅವರ ಎರಡು ಸುಲಭದ ಕ್ಯಾಚ್‌ಗಳನ್ನು ಕೊಹ್ಲಿ ಕೈಬಿಟ್ಟರು.

ರಾಹುಲ್ 19ನೇ ಓವರ್‌ನಲ್ಲಿ ಡೆಲ್ ಸ್ಟೇನ್‌ ಬೌಲಿಂಗ್​ನಲ್ಲಿ 26 ರನ್‌ಗಳನ್ನು ಬಾರಿಸಿದ್ರು ಮತ್ತು 20ನೇ ಓವರ್​ನಲ್ಲಿ ಸತತ ಸಿಕ್ಸರ್‌ ಸಿಡಿಸುವ ಮೂಲಕ 69 ಎಸೆತಗಳಲ್ಲಿ 132 ರನ್ ಗಳಿಸಿ ಅಜೇಯರಾಗಿ ಉಳಿದರು. ಇದು ಐಪಿಎಲ್​ನಲ್ಲಿ ನಾಯಕನ ಅತ್ಯಧಿಕ ಸ್ಕೋರ್ ಮತ್ತು ಪಂದ್ಯಾವಳಿಯ ಇತಿಹಾಸದಲ್ಲಿ ಭಾರತೀಯರಿಂದ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ.

ಮಧ್ಯಮ ಹಂತದವರೆಗೂ ನಾಮ್ಮ ಬೌಲರ್​ಗಳು ಉತ್ತಮ ಪ್ರದರ್ಶನ ತೋರಿದ್ರು. ಪಂಜಾಬ್​ ಉತ್ತಮ ಆರಂಭ ಪಡೆಯಿತು. ನಂತರ ನಮ್ಮ ಬೌಲರ್​​ಗಳು ಅವರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ರಾಹುಲ್​ಗೆ​ ಜೀವದಾನ ನೀಡಿದ ನಂತರ ಸುಮಾರು 35-40 ರನ್​ಗಳು ಹೆಚ್ಚಾದವು. ಬಹುಶಃ ಅವುಗಳನ್ನು ನಿರ್ಬಂಧಿಸಿದ್ದರೆ 180 ರನ್​ಗಳ ಗುರಿ ಬೆನ್ನಟ್ಟಬೇಕಾಗುತ್ತಿತ್ತು. ಆಗ ನಮಗೆ ಯಾವುದೇ ಒತ್ತಡ ಇರುತ್ತಿರಲಿಲ್ಲ ಎಂದಿದ್ದಾರೆ.

ಕೊಹ್ಲಿ 4ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದರು. ಜೋಶ್ ಫಿಲಿಪ್ಪೆ ಅವರನ್ನು 3ನೇ ಸ್ಥಾನದಲ್ಲಿ ಕಣಕ್ಕಿಳಿಸಲಾಯ್ತು. ಅದರೆ ಫಿಲಿಪ್ಪೆ ಸೊನ್ನೆ ಸುತ್ತಿದ್ರೆ, ಕೊಹ್ಲಿ ಒಂದು ರನ್​ ಗಳಿಸಿ ಔಟ್​ ಆದ್ರು.

ಫಿಲಿಪ್ಪೆ ವೆಸ್ಟರ್ನ್ ಆಸ್ಟ್ರೇಲಿಯಾದ ಟೂರ್ನಿಗಳಲ್ಲಿ ಅರಂಭಿಕ ಆಟಗಾರನಾಗಿ ಬ್ಯಾಟಿಂಗ್ ಮಾಡಿದ್ದಾರೆ ಮತ್ತು ಬಿಬಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ದರಿಂದ ಅವರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಉನ್ನತ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಸಿದ್ದಾಗಿ ವಿರಾಟ್ ತಿಳಿಸಿದ್ದಾರೆ.

ABOUT THE AUTHOR

...view details