ಕರ್ನಾಟಕ

karnataka

ETV Bharat / bharat

ಐಪಿಎಲ್​​​​​​​​​ ಬಿಡ್ಡಿಂಗ್​​​​​ ಪ್ರಕ್ರಿಯೆ: ಈ ಹಿಂದಿನ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಬಿಕರಿಯಾದ ಪ್ಲೇಯರ್ಸ್​​​​! - ಯುವರಾಜ್​ ಸಿಂಗ್​

ನಾಡಿದ್ದು ಕೋಲ್ಕತ್ತಾದಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಹರಾಜು ಪ್ರಕ್ರಿಯೆ ನಡೆಯಲಿದ್ದು, ಫ್ರಾಂಚೈಸಿಗಳು ಕೆಲ ಯಂಗ್​ ಪ್ಲೇಯರ್​ಗಳ ಮೇಲೆ ಕಣ್ಣಿಟ್ಟಿದ್ದಾರೆ.

IPL 2020
ಐಪಿಎಲ್​​​​​​​ ಬಿಡ್ಡಿಂಗ್​​ ಪ್ರಕ್ರಿಯೆ

By

Published : Dec 17, 2019, 2:32 PM IST

ಕೋಲ್ಕತ್ತಾ: ಮುಂದಿನ ವರ್ಷ ನಡೆಯಲಿರುವ ಇಂಡಿಯನ್​​ ಪ್ರೀಮಿಯರ್​ ಲೀಗ್​​​ನ ಹರಾಜು ಪ್ರಕ್ರಿಯೆ ಇದೇ ತಿಂಗಳ 19ರಂದು ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ ನಡೆಯಲಿದ್ದು, ಒಟ್ಟು 332 ಪ್ಲೇಯರ್ಸ್​​ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ರವೀಂದ್ರ ಜಡೇಜಾ

ಡಿ.19ರಂದು ಐಪಿಎಲ್​ ಹರಾಜು.. ಕನ್ನಡಿಗ ಉತ್ತಪ್ಪಗೆ ₹1.5 ಕೋಟಿ.. ಮತ್ಯಾರಿಗೆ ಎಷ್ಟೆಷ್ಟಿದೆ?

ಈ ಹಿಂದೆ ನಡೆದ ಬಿಡ್ಡಿಂಗ್​ ಪ್ರಕ್ರಿಯೆಯಲ್ಲಿ ಕೆಲವೊಂದು ಪ್ಲೇಯರ್ಸ್​ ದುಬಾರಿ ಬೆಲೆಗೆ ಬಿಕರಿಯಾಗಿದ್ದು, ಇಲ್ಲಿಯವರೆಗೆ ಟೀಂ ಇಂಡಿಯಾದ ಮಾಜಿ ಆಲ್​ರೌಂಡರ್​ ಯುವರಾಜ್​ ಸಿಂಗ್​​ ಟಾಪ್​​​ನಲ್ಲಿದ್ದಾರೆ. 2015ರಲ್ಲಿ ಡೆಲ್ಲಿ ತಂಡ ಬರೋಬ್ಬರಿ 16 ಕೋಟಿ ರೂ. ನೀಡಿ ಅವರನ್ನ ಖರೀದಿ ಮಾಡಿತ್ತು.

ಬೆನ್​ ಸ್ಟೋಕ್ಸ್​​​

2008ರಿಂದ 2019ರವರೆಗಿನ ದುಬಾರಿ ಬಿಕರಿಯಾದ ಪ್ಲೇಯರ್ಸ್

  • ​​​2008ರ ಟಾಪ್​ ದುಬಾರಿ ಆಟಗಾರ9.5 ಕೋಟಿ ಮಹೇಂದ್ರ ಸಿಂಗ್​ ಧೋನಿ(ಸಿಎಸ್​ಕೆ)
  • 2009 ಟಾಪ್​ ದುಬಾರಿ ಆಟಗಾರ9.8 ಕೋಟಿ ಕೆವಿನ್​ ಪಿಟರ್​​ಸನ್(ಆರ್​ಸಿಬಿ)​ ಹಾಗೂ ಆಂಡ್ರ್ಯೋ ಪ್ಲಿಂಟಾಪ್​​(ಸಿಎಸ್​ಕೆ)
  • 2011 ಟಾಪ್ ದುಬಾರಿ ಆಟಗಾರ14.9 ಕೋಟಿ ಗೌತಮ್ ಗಂಭೀರ್​​( ಕೆಕೆಆರ್)
  • ​​​ 2012 ಟಾಪ್ ದುಬಾರಿ ಆಟಗಾರ12.8 ಕೋಟಿ ರವೀಂದ್ರ ಜಡೇಜಾ(ಸಿಎಸ್​ಕೆ)
  • 2014 ಟಾಪ್ ದುಬಾರಿ ಆಟಗಾರ14.0 ಕೋಟಿ ಯುವರಾಜ್ ಸಿಂಗ್ (ಆರ್​​ಸಿಬಿ)
  • 2015 ಟಾಪ್ ದುಬಾರಿ ಆಟಗಾರ16.0 ಕೋಟಿ ಯುವರಾಜ್ ಸಿಂಗ್ (ಡಿಡಿ)
  • 2016 ಟಾಪ್​​​ ದುಬಾರಿ ಆಟಗಾರ9.50 ಕೋಟಿ – ಶೇನ್ ವ್ಯಾಟ್ಸನ್ (ಆರ್​ಸಿಬಿ)
  • 2017 ಟಾಪ್ ದುಬಾರಿ ಆಟಗಾರ14.50 ಕೋಟಿ ಬೆನ್ ಸ್ಟೋಕ್ಸ್ (ಪುಣೆ ತಂಡ)
  • 2018 ಟಾಪ್ ಫೈವ್ ದುಬಾರಿ ಆಟಗಾರರು12.50 ಕೋಟಿ ಬೆನ್ ಸ್ಟೋಕ್ಸ್ (ರಾಜಸ್ಥಾನ)
  • 2019 ಟಾಪ್ ದುಬಾರಿ ಆಟಗಾರ8.40 ಕೋಟಿ ಜಯದೇವ್ ಉನಾದ್ಕಟ್​​(ರಾಜಸ್ಥಾನ), ವರುಣ್​ ಚಕ್ರವರ್ತಿ(ಪಂಜಾಬ್​)

ಈ ಸಲದ ಬಿಕರಿಯಲ್ಲಿ ಕೆಲವೊಂದು ಆಟಗಾರರ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿದ್ದು, ಅತಿ ಹೆಚ್ಚಿನ ಬೆಲೆಗೆ ಬಿಕರಿಗೊಳ್ಳುವ ಸಾಧ್ಯತೆ ದಟ್ಟವಾಗಿ ಕಂಡು ಬರುತ್ತಿವೆ.

ABOUT THE AUTHOR

...view details