ಕರ್ನಾಟಕ

karnataka

ETV Bharat / bharat

2021ರಲ್ಲಿ ಮಾರುಕಟ್ಟೆಗೆ ಬರಲಿದೆ 'ಐಫೋನ್ ಎಸ್ಇ ಪ್ಲಸ್' - ಆಪಲ್ ಐಫೋನ್

'ಐಫೋನ್ ಎಸ್ಇ ಪ್ಲಸ್' 2021ರ ದ್ವಿತೀಯಾರ್ಧದ ವೇಳೆಗೆ ಮಾರುಕಟ್ಟೆಗೆ ಬರಲಿದೆ ಎಂಬ ನಿರೀಕ್ಷೆಯಿದೆ.

iphone
iphone

By

Published : Apr 24, 2020, 12:10 PM IST

ಐಫೋನ್​ ಎಸ್​ಇ ಪ್ಲಸ್​​ ಸುಧಾರಿತ ಆವೃತ್ತಿಯು 2021ರ ದ್ವಿತೀಯಾರ್ಧದ ವೇಳೆಗೆ ಬರಬಹುದು ಎಂದು ಆ್ಯಪಲ್​ ವಿಶ್ಲೇಷಕ ಮಿಂಗ್-ಚಿ ಕುವೊ ಹೇಳಿದ್ದಾರೆ.

ಈ ಹಿಂದೆ, 2021ರ ಮೊದಲಾರ್ಧದಲ್ಲಿ 'ಐಫೋನ್ ಎಸ್ಇ ಪ್ಲಸ್' ಬಿಡುಗಡೆಯಾಗಲಿದೆ ಎಂದು ಕುವೊ ಹೇಳಿದ್ದರು. ಆದರೆ ಇದೀಗ 2021ರ ದ್ವಿತೀಯಾರ್ಧದ ವೇಳೆಗೆ ಇದರ ಬಿಡುಗಡೆಯನ್ನು ಮುಂದೂಡಬಹುದು ಎಂದು ಅವರು ಹೇಳಿದ್ದಾರೆ.

ಇದು 5.5 ಅಥವಾ 6.1ಇಂಚಿನ ಡಿಸ್ಪ್ಲೇ ಹೊಂದಬಹುದು ಎಂಬ ನಿರೀಕ್ಷೆಯಿದೆ. ಇದರಲ್ಲಿ ಫೇಸ್ ಐಡಿ ಆಪ್ಷನ್ ಇರುವುದಿಲ್ಲ ಎಂದು ಹೇಳಲಾಗಿದೆ.

ಇದು ಆಪಲ್​ನ ಇತರ ಐಫೋನ್​ಗಳಿಗಿಂತ ಕಡಿಮೆ ಬೆಲೆಯಲ್ಲಿ ದೊರಕಲಿದೆ. ಎಂದು ತಿಳಿಸಿದ್ದಾರೆ.

ABOUT THE AUTHOR

...view details