ನವದೆಹಲಿ:ದೇಶ ಮಹಾಮಾರಿ ಕೊರೊನಾ ವಿರುದ್ಧ ಹೋರಾಡುತ್ತಿದ್ದು, ಈ ಸಮರಕ್ಕೆ ಬೆಂಬಲ ನೀಡುವುದಾಗಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಭರವಸೆ ನೀಡಿದೆ. ಜೊತೆಗೆ ಇದರ ಸದಸತ್ವದ ಸಂಘಟನೆಗಳು ಹಾಗೂ ರಾಜ್ಯಗಳ ಸಂಸ್ಥೆಗಳು ಕೂಡಾ ಕೊರೊನಾ ವಿರುದ್ಧ ಹೋರಾಡುವುದರಲ್ಲಿ ಸಹಾಯ ಮಾಡುತ್ತವೆ ಎಂದು ಸ್ಪಷ್ಟಪಡಿಸಿದೆ.
ಕೊರೊನಾ ವಿರುದ್ಧ ಸಮರಕ್ಕೆ ಎಲ್ಲ ರೀತಿಯ ಸಹಕಾರ ನೀಡ್ತೇವೆ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ - corona outbreak
ದೇಶದಲ್ಲಿ ಕೊರೊನಾ ಮಹಾಮಾರಿ ತೀವ್ರ ಹಾವಳಿ ಉಂಟುಮಾಡುತ್ತಿದೆ. ಈ ವೇಳೆ, ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಟ್ವಿಟರ್ ಖಾತೆಯಲ್ಲಿ ಭರವಸೆ ನೀಡಿದೆ.
![ಕೊರೊನಾ ವಿರುದ್ಧ ಸಮರಕ್ಕೆ ಎಲ್ಲ ರೀತಿಯ ಸಹಕಾರ ನೀಡ್ತೇವೆ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ Indian Olympic Association](https://etvbharatimages.akamaized.net/etvbharat/prod-images/768-512-6593508-thumbnail-3x2-rajesh.jpg)
ಭಾರತೀಯ ಒಲಿಂಪಿಕ್ ಅಸೋಸಿಯೇಷನ್
ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ನ ಸೆಕ್ರೆಟರಿ ಜನರಲ್ ಆಗಿರುವ ರಾಜೀವ್ ಮೆಹ್ತಾ ''ಕೊರೊನಾ ಮಹಾಮಾರಿ ವಿರುದ್ಧ ಹೋರಾಡುವುದರಲ್ಲಿ ದೇಶದ ಜೊತೆ ಪಾಲ್ಗೊಳ್ಳುವುದಕ್ಕೆ ನಮಗೆ ಹೆಮ್ಮೆಯೆನಿಸುತ್ತದೆ'' ಎಂದು ಬರೆದುಕೊಂಡಿದ್ದಾರೆ.
ಇದರ ಜೊತೆಗೆ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಮತ್ತೊಂದು ಟ್ವೀಟ್ ಮಾಡಿದ್ದು, ಸೈಕ್ಲಿಂಗ್ ಫೆಡರೇಷನ್ ಹಾಗೂ ಇಂಡಿಯನ್ ಗಾಲ್ಫ್ ಯೂನಿಯನ್ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದೆ ಎಂದು ಸ್ಪಷ್ಟಪಡಿಸಿದೆ. ಇದರ ಜೊತೆಗೆ ಹಲವು ಕ್ರೀಡಾಪಟುಗಳು ಆರ್ಥಿಕ ನೆರವು ಘೋಷಿಸಿರುವುದನ್ನು ಕೂಡಾ ಖಚಿತಪಡಿಸಿದೆ.