ನವದೆಹಲಿ: ಎರಡು ವಿವಿಧ ಪ್ರಕರಣಗಳಲ್ಲಿ ಇಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂಗೆ ರಿಲೀಫ್ಗಿಂತ ಹೆಚ್ಚು ನಿರಾಸೆಯೇ ಮೂಡಿದೆ.
ಐಎನ್ಎಕ್ಸ್ ಮಿಡಿಯಾ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ಬಂಧನದಿಂದ ರಕ್ಷಣೆ ನೀಡಬೇಕುಎ ಎಂದು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕುವ ಮೂಲಕ ಇಡಿ ಬಂದನಕ್ಕೆ ಮುಕ್ತ ಅವಕಾಶ ನೀಡಿತ್ತು. ಅದಲ್ಲದೆ ಕಳೆದ ಎರಡು ವಾರದಿಂದ ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಚಿದಂಬರಂ ಸಿಬಿಐ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ಸುಪ್ರೀಂನಲ್ಲಿ ಅರ್ಜಿ ತಿರಸ್ಕೃತವಾಗಿದ್ದು ಚಿದಂಬರಂಗೆ ದೊಡ್ಡ ಹಿನ್ನಡೆಯಾಗಿದ್ದು, ಇಂದು ಸಿಬಿಐ ನ್ಯಾಯಾಂಗ ಬಂಧನ ಮುಕ್ತಾಯವಾಗಲಿದೆ. ಜಾರಿ ನಿರ್ದೇಶನಾಲಯ ಚಿದಂಬರಂ ಅವರನ್ನು ಬಂಧಿಸುವ ಸಾಧ್ಯತೆ ದಟ್ಟವಾಗಿದೆ.
ಇಂದೇ ಚಿದಂಬರಂ ಬಂಧನವಾದಲ್ಲಿ ತುಘ್ಲಕ್ ರೋಡ್ ಪೊಲೀಸ್ ಠಾಣೆಗೆ ಕರೆದೊಯ್ಯಲಿದೆ. ಇದೇ ಠಾಣೆಯಲ್ಲಿ ಸದ್ಯ ಕಾಂಗ್ರೆಸ್ನ ಇನ್ನೊಬ್ಬ ನಾಯಕ ಡಿ.ಕೆ ಶಿವಕುಮಾರ್ ನ್ಯಾಯಾಂಗ ಬಂಧನ ಎದುರಿಸುತ್ತಿದ್ದಾರೆ. ಇಡಿ ಒಂದು ವೇಳೆ ಕಸ್ಟಡಿಗೆ ತೆಗೆದುಕೊಳ್ಳದಿದ್ದಲ್ಲಿ ಚಿದಂಬರಂ ತಿಹಾರ್ ಜೈಲಿಗೆ ಶಿಫ್ಟ್ ಆಗುವ ಸಾಧ್ಯತೆ ಇದೆ.