- ಚಿದಂಬರಂ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಸಿಬಿಐ ತಂಡ
- ಸಿಬಿಐನ ರೋಸ್ ಅವೆನ್ಯೂ ಕೋರ್ಟ್ಗೆ ನಾಳೆ ಚಿದಂಬರಂ ಹಾಜರುಪಡಿಸುವ ಸಾಧ್ಯತೆ
- ದೆಹಲಿಯ ಸಿಬಿಐ ಕಚೇರಿಯಲ್ಲಿ ಚಿದಂಬರಂ: ನಾಳೆ ವಿಚಾರಣೆ ಸಾಧ್ಯತೆ
- ಇದನ್ನೆಲ್ಲ ಬಿಜೆಪಿ ಬಿಟ್ಟರೆ ಇನ್ಯಾರು ಮಾಡಿಸುತ್ತಾರೆ? ಡೊನಾಲ್ಡ್ ಟ್ರಂಪ್ ಮಾಡ್ತಿದ್ದಾರಾ?: ಕಾರ್ತಿ ಚಿದಂಬರಂ
- ಸುದ್ದಿಗೋಷ್ಠಿ ನಡೆಸಿ ಮನೆಗೆ ತೆರಳಿದ ಚಿದಂಬರಂ
- ದೆಹಲಿಯ ಜೋರ್ ಬಘ್ ನಿವಾಸದ ಒಳ ಕುಳಿತ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ
-
ಚಿದಂಬರಂ ನಿವಾಸದ ಬಳಿ ಬೀಡುಬಿಟ್ಟ ಸಿಬಿಐ, ಇಡಿ ಅಧಿಕಾರಿಗಳ ತಂಡ
-
ಮನೆಯ ಬಳಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ
-
ಚಿದು ಮನೆ ಗೇಟ್ ಹಾರಿ ಒಳ ನುಗ್ಗಿದ ಸಿಬಿಐ ಅಧಿಕಾರಿಗಳು
- ದೆಹಲಿ ಪೊಲೀಸರ ನೆರವು ಕೇಳಿದ ಸಿಬಿಐ, ಇಡಿ
- ಮುಂಭಾಗದಿಂದ ಪ್ರವೇಶಿಸಲು ಯತ್ನಿಸಿದ ಅಧಿಕಾರಿಗಳಿಗೆ ಚಿದಂಬರಂ ಭದ್ರತಾ ಸಿಬ್ಬಂದಿ ತಡೆಯೊಡ್ಡಿದರು. ಅಧಿಕಾರಿಗಳು ಹಿಂಭಾಗದ ಗೇಟ್ ಮೂಲಕ ಒಳ ಪ್ರವೇಶಿದರು
- ಸಿಬಿಐನ 2 ತಂಡಗಳು ಚಿದು ಮನೆ ಪ್ರವೇಶಿಸಿದ್ದು, ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು
- 20 ಅಧಿಕಾರಿಗಳೊಂದಿಗೆ ಮನೆ ಪ್ರವೇಶಿಸಿದ ಸಿಬಿಐ, ಇಡಿ
- ತೀವ್ರಗೊಂಡ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
- ಕುಟುಂಬ ಸದಸ್ಯರು ಮನೆಯಿಂದ ಹೊರ ಬಂದು ಇಡಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದಾರೆ
- ತನಿಖಾ ಸಂಸ್ಥೆಗಳು ಏಜನ್ಸಿ ರೀತಿಯ ನಾಟಕವು ಸ್ವಾರಸ್ಯಕರವಾಗಿದೆ ಎಂದು ತನಿಖಾ ಸಂಸ್ಥೆಗಳ ನಡೆಯನ್ನು ಖಂಡಿಸಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಟ್ವೀಟ್ ಮಾಡಿದ್ದಾರೆ
- ಜೋರ್ ಬಘ್ ನಿವಾಸದ ಎಲ್ಲ ಗೇಟ್ಗಳ ಮುಂದೆ ನಿಂತ ಅಧಿಕಾರಿಗಳ ದಂಡು
- ಬಂಧನದ ಬಳಿಕ ಮನೆಯ ಬಳಿ ನಡೆದ 2 ಗಂಟೆಗಳ ಡ್ರಾಮಾಗೆ ತೆರೆ ಬಿದ್ದಿದೆ
ಐಎನ್ಎಕ್ಸ್ ಮೀಡಿಯಾ ಹಗರಣ: ಮನೆ ಗೇಟ್ ಹಾರಿ ಚಿದಂಬರಂ ಬಂಧಿಸಿದ ಸಿಬಿಐ, ಇಡಿ ಟೀಂ - ಐಎನ್ಎಕ್ಸ್ ಮೀಡಿಯಾ ಪ್ರಕರಣ
ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಅವರನ್ನು ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ, ಸಿಬಿಐ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ನವದೆಹಲಿ:ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಅವರನ್ನು ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ, ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಇದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಚಿದಂಬರಂ, ನಾನಾಗಲೀ ನನ್ನ ಕುಟುಂಬದವರಾಗಲೀ ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಪಾತ್ರವಹಿಸಿಲ್ಲ. ನನ್ನ ಪಾತ್ರವಿರುವ ಬಗ್ಗೆ ಇಲ್ಲಿಯವರೆಗೂ ಜಾರಿ ನಿರ್ದೇಶನಾಲಯವಾಗಲೀ ಹಾಗೂ ಸಿಬಿಐ ಆಗಲೀ ಯಾವುದೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ ಎಂದರು.
ಕಳೆದ 24 ಗಂಟೆಗಳಲ್ಲಿ ನಡೆದ ಘಟನಾವಳಿಗಳು ಕೆಲವು ಸಂದೇಹಗಳಿಗೆ ಎಡೆ ಮಾಡಿಕೊಟ್ಟಿವೆ. ನಾನು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂಬ ಸುಳ್ಳು ಸುದ್ದಿ ಹಬ್ಬಿತ್ತು. ಆದರೆ, ನಾನು ಕಾನೂನಿನ ರಕ್ಷಣೆ ಪಡೆಯುವ ಪ್ರಯತ್ನದಲ್ಲಿದ್ದೆ. ಶುಕ್ರವಾರಕ್ಕೆ ಜಾಮೀನು ಅರ್ಜಿ ವಿಚಾರಣೆ ದಿನಾಂಕ ಗೊತ್ತಾಗಿದೆ ಎಂದು ನನ್ನ ವಕೀಲರು ತಿಳಿಸಿದ್ದಾರೆ. ನಾನು ಕಾನೂನನ್ನು ಗೌರವಿಸುತ್ತೇನೆ, ವಿಚಾರಣೆಗೆ ಸಹಕರಿಸುತ್ತೇನೆ ಎಂದು ಹೇಳಿದ್ರು.
ಪ್ರಜಾಪ್ರಭುತ್ವಕ್ಕೆ ಸ್ವಾತಂತ್ರ್ಯವೇ ಅಡಿಪಾಯ. ಸಂವಿಧಾನದ ವಿಧಿ 21 ಭಾರತದ ನಾಗರಿಕನಿಗೆ ಜೀವನ ಹಾಗೂ ಸ್ವಾತಂತ್ರ್ಯವನ್ನು ಕೊಡುತ್ತದೆ. ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ನನಗೆ ಕೇಳಿದರೆ ಸ್ವಾತಂತ್ರ್ಯವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.