ನವದೆಹಲಿ:ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂಗೆ ಉರುಳಾಗಿರುವ ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಚಿದು ಜೊತೆ ಕಾರ್ಯನಿರ್ವಹಿಸಿದ್ದ ಆರು ಮಂದಿ ಅಧಿಕಾರಿಗಳು ಇಂದು ಸಿಬಿಐ ವಿಶೇಷ ಕೋರ್ಟ್ಗೆ ಹಾಜರಾಗಲಿದ್ದಾರೆ.
ಆರು ಅಧಿಕಾರಿಗಳು ನ.29ರಂದು ಸಿಬಿಐ ವಿಶೇಷ ಕೋರ್ಟ್ಗೆ ಹಾಜರಾಗುವಂತೆ ಜಡ್ಜ್ ಅಜಯ್ ಕುಮಾರ್ ಕುಹರ್ ಸಮನ್ಸ್ ಜಾರಿ ಮಾಡಿದ್ದರು.
ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಈಗಾಗಲೇ ಸಿಬಿಐ 14 ಮಂದಿ ಮೇಲೆ ಚಾರ್ಜ್ಶೀಟ್ ತಯಾರಿಸಿದೆ. ಪಿ.ಚಿದಂಬರಂ, ಪುತ್ರ ಕಾರ್ತಿ ಚಿದಂಬರಂ, ಅವರ ಲೆಕ್ಕಿಗ ಎಸ್.ಭಾಸ್ಕರನ್, ಐಎನ್ಎಕ್ಸ್ ಮಾಜಿ ನಿರ್ದೇಶಕ ಪೀಟರ್ ಮುರ್ಖಜಿ ಸೇರಿದಂತೆ 14 ಮಂದಿಯ ಮೇಲೆ ಚಾರ್ಜ್ಶೀಟ್ ದಾಖಲಾಗಿದೆ.