ಮುಂಬೈ:ಷೇರು ಮಾರುಕಟ್ಟೆ ಎಂಬ ವಹಿವಾಟಿನ ಸಾಗರದಲೆಯನ್ನ ಭೇದಿಸಿ ನುಗ್ಗುವ ಕಿರು ದೋಣಿಯನ್ನ ಒಂದು ಚಿಕ್ಕ ಅಲೆ ಮಗುಚಿ ಹಾಕಬಹುದು. ಅಂತಹ ಘಟನೆ ಇಂದಿನ ವಹಿವಾಟಿನಲ್ಲಿ ಸಂಭವಿಸಿದೆ.
ಮುಂಬೈ ಷೇರು ಪೇಟೆಯಲ್ಲಿ ಹೂಡಿಕೆದಾರರು ಗುರುವಾರದ ಒಂದು ದಿನದ ವಹಿವಾಟಿನಲ್ಲಿ ಸುಮಾರು ₹ 2.22 ಲಕ್ಷ ಕೋಟಿ (₹ 2.22 ಟ್ರಿಲಿಯನ್) ಸಂಪತ್ತು ಕಳೆದುಕೊಂಡಿದ್ದಾರೆ. ಇದಕ್ಕೆ ಆರ್ಬಿಐ ತೆಗೆದುಕೊಂಡ ಇಂದಿನ ನಿರ್ಧಾರ ಹಾಗೂ ದೇಶಿ- ವಿದೇಶಿ ಮಾರುಕಟ್ಟೆಗಳ ಬೆಳವಣಿಗೆಗಳು ಸಹ ಪುಷ್ಟಿನೀಡಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರದಲ್ಲಿ ಕಡಿತಗೊಳಿಸಿದ ಬಳಿಕ ಸೆನ್ಸೆಕ್ಸ್ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತು. ''ಹಣಕಾಸೇತರ ಬ್ಯಾಂಕಿಂಗ್ ವಲಯದಲ್ಲಿ ಭರವಸೆ ಮೂಡಿಸುವಲ್ಲಿ ಆರ್ಬಿಐ ವಿಫಲವಾಗಿದ್ದು ಕುಸಿತಕ್ಕೆ ಮುಖ್ಯಕಾರಣ'' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.