ಕರ್ನಾಟಕ

karnataka

ETV Bharat / bharat

ಅಂಗೈನಲ್ಲೇ ಅಂತರ್ಜಾಲ ಕ್ರಾಂತಿ...ದೇಶಾದ್ಯಂತ ಬಹುಮುಖ ಸೇವೆ! - Reliance jio phone

ಪ್ರಸ್ತುತ ಅಂತರ್ಜಾಲದ ಬಳಕೆ ಅತಿಯಾಗಿದೆ. ಮನುಷ್ಯ ಒಂದು ಹೊತ್ತು ಊಟವಿಲ್ಲದೆ ಇರುತ್ತಾನೆ. ಮೊಬೈಲ್​ ಇಲ್ಲದೆ ಇರಲಾರ. ಆದರೆ, ನಾವು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದೇವೆ.

internet world and India

By

Published : Sep 10, 2019, 2:48 PM IST

Updated : Sep 10, 2019, 3:10 PM IST

ತಾಂತ್ರಿಕ ಕ್ರಾಂತಿ ದೇಶಾದ್ಯಂತ ನೀರಿನಂತೆ ಹರಿಯುತ್ತಿದ್ದು, ಯಾರೂ ಊಹಿಸದ ರೀತಿಯಲ್ಲಿ ವಿಜ್ಞಾನ ಬೆಳೆದು ನಿಂತಿರುವುದು ಕಣ್ಣಿಗೆ ಕಾಣುತ್ತಿದೆ. ಕೈಯಲ್ಲಿ ಮೊಬೈಲ್​, ಅದಕ್ಕೆ ಇಂಟರ್ನೆಟ್​ ಸೇವೆ ಇಲ್ಲದೆ ಯಾರೂ ನಮಗೆ ಕಾಣುವುದಿಲ್ಲ. ಸಿಕ್ಕರೂ ಅಪರೂಪ. ಒಂದು ಕಾಲದಲ್ಲಿದ್ದ ಲ್ಯಾಂಡ್​ಲೈನ್​ ಸಾಮ್ರಾಜ್ಯವನ್ನು ಅಳಿಸಿ ಹಾಕಿ ಮೊಬೈಲ್​ ಎಂಬ ರಾಜ ರಾಜ್ಯಭಾರ ಮಾಡುತ್ತಿದ್ದಾನೆ.

ದಶಕಗಳ ಹಿಂದೆ ಮೂರು ನಿಮಿಷಗಳ ಇಂಟರ್ನೆಟ್​ ಬಳಕೆಗೆ ₹ 1.20 ಪಾವತಿಸಬೇಕಿತ್ತು. ಅಂದರೆ ಸೆಕೆಂಡಿಗೆ 52 ಕಿಲೋಬೈಟ್​ ಬಳಕೆ. 3 ವರ್ಷಗಳ ಹಿಂದೆ (ಸೆಪ್ಟೆಂಬರ್ 5) ರಿಲಯನ್ಸ್​ ಜಿಯೋ ನೀಡಿರುವ ಇಂಟರ್ನೆಟ್​ ಕೊಡುಗೆ ದೇಶದ ಮೂಲೆಮೂಲೆಗೂ ವಿಸ್ತರಿಸಿ ಸಂಚಲನ ಸೃಷ್ಟಿಸಿತು. ಇದರಿಂದಾಗಿ ಅತ್ಯಂತ ಕಡಿಮೆ ದರದಲ್ಲಿ ಕಟ್ಟ ಕಡೆಯ ವ್ಯಕ್ತಿಯೂ ಇಂಟರ್ನೆಟ್​ ಸೇವೆ ಪಡೆಯುವಂತಾಯ್ತು. ಪ್ರಸ್ತುತ ಈ ಜಿಯೋ ಇಂಟರ್ನೆಟ್​, ಮೊಬೈಲ್​ ಸೇವೆ ದೂರದರ್ಶನದತ್ತಲೂ ಹೆಜ್ಜೆ ಇಟ್ಟಿದೆ. ಈಚೆಗೆ ರಿಲಯನ್ಸ್ 'ಜಿಯೋ ಫೈಬರ್' ಯೋಜನೆಗೆ ಚಾಲನೆ ನೀಡಲಾಗಿದ್ದು, ಅಲ್ಪ ದರದಲ್ಲಿಯೇ ಎಲ್ಲಾ ಚಾನೆಲ್​ಗಳನ್ನು ವೀಕ್ಷಿಸಬಹುದು. ಇಂಟರ್ನೆಟ್​, ಮೊಬೈಲ್​ ದೂರದರ್ಶನ ಚಾನೆಲ್​ಗಳನ್ನು ದೇಶವ್ಯಾಪಿ ಒದಗಿಸುವ ಮೂಲಕ ಹೊಸ ಅಧ್ಯಾಯ ಸೃಷ್ಟಿಸಿದೆ.

ಹೇಗಿದೆ ಬೆಳವಣಿಗೆ..!

ಮೊದಲು ಕೆಲವರಿಗೆ ಮಾತ್ರ ಸೀಮಿತವಾಗಿದ್ದ ಇಂಟರ್ನೆಟ್​ ಸೇವೆ ಈಗ ಪ್ರತಿಯೊಬ್ಬರಿಗೂ ಸಿಗುವಂತಾಗಿದೆ. ಅದಕ್ಕೆ ಸಂಬಂಧಿಸಿದಂತೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಪ್ರಕಾರ ಮಾಹಿತಿ ಇಲ್ಲಿದೆ.

ಅಂಕಿ-ಅಂಶ

  • ಶೇ 63.67- 2019ರ ಮಾರ್ಚ್​ವರೆಗೆ ಇಂಟರ್ನೆಟ್​ ಬಳಕೆದಾರರ ಸಂಖ್ಯೆ
  • ಶೇ 96.4 - ಮೊಬೈಲ್​, ವೈರ್​ಲೆಸ್ ಸಾಧನಗಳಿಗೆ ಇಂಟರ್ನೆಟ್​ ಸೇವೆ ಪಡೆಯುವವರ ಸಂಖ್ಯೆ
  • ಶೇ 40 - ನಗರದ ಪ್ರದೇಶದಲ್ಲಿ ಇಂಟರ್ನೆಟ್​ ಬಳಕೆದಾರರ ಸಂಖ್ಯೆ
  • ಶೇ 36 - ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್​ ಬಳಕೆದಾರರ ಸಂಖ್ಯೆ
  • ದೇಶದ ಪ್ರತಿ 100 ಜನರಗೆ ಸರಾಸರಿ ಶೇ 48.48ರಷ್ಟು ಇಂಟರ್ನೆಟ್ ಚಂದಾದಾರರು ಇದ್ದಾರೆ
  • ನಗರ ಪ್ರದೇಶದಲ್ಲಿ ಪ್ರತಿ 100 ಮಂದಿಗೆ ಶೇ 97.94ರಷ್ಟು ಅಂತರ್ಜಾಲ ಸೌಕರ್ಯವಿದೆ
  • ಗ್ರಾಮೀಣ ಪ್ರದೇಶದಲ್ಲಿ ಪ್ರತಿ 100 ಮಂದಿಗೆ ಶೇ 25.36ರಷ್ಟು ಮಂದಿಗೆ ಅಂತರ್ಜಾಲ ಸೇವೆ
  • ಪ್ರಪಂಚಕ್ಕೆ ಹೋಲಿಸಿದರೆ, ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಕಡಿಮೆ (ತಿಂಗಳಿಗೆ 9.06 GB)
  • ಭಾರತದಲ್ಲಿ ಒಂದು GB ಇಂಟರ್ನೆಟ್​ಗೆ ₹ 7.95, ಇದು ಕೆಲವು ನಗರದಲ್ಲಿ ಕಪ್​ ಟೀಗಿಂತ ಕಡಿಮೆ
  • 25.15 ಕೋಟಿ- 2014ರಲ್ಲಿದ್ದ ಇಂಟರ್ನೆಟ್​ ಬಳಕೆದಾರರ ಸಂಖ್ಯೆ
  • 66 MB - 2014ರಲ್ಲಿ ಒಬ್ಬರು ತಿಂಗಳಿಗೆ ಬಳಕೆ ಮಾಡುತ್ತಿದ್ದ ಅಂತರ್ಜಾಲ ಸೇವೆ
  • 389 ನಿಮಿಷ- 2014ರಲ್ಲಿ ಒಬ್ಬರು ತಿಂಗಳಿಗೆ ಅಂತರ್ಜಾಲ ಬಳಕೆಗೆ ತೆಗೆದುಕೊಳ್ಳುತ್ತಿದ್ದ ಸಮಯ
  • 692 ನಿಮಿಷ- 2019ರಲ್ಲಿ ಒಬ್ಬರು ತಿಂಗಳಿಗೆ ಅಂತರ್ಜಾಲ ಬಳಕೆಗೆ ತೆಗೆದುಕೊಳ್ಳುತ್ತಿರುವ ಸಮಯ
  • 2015ರಲ್ಲಿ ಅಂತರ್ಜಾಲ ಸೇವೆ ಗ್ರಾಮೀಣ ಪ್ರದೇಶದಲ್ಲಿ ಶೇ 9ರಷ್ಟಿತ್ತು. ಅದೀಗ ಶೇ 25ಕ್ಕೆ ಏರಿದೆ
  • ದೇಶದ 10 ಹೊಸ ಬಳಕೆದಾರರಲ್ಲಿ 9 ಮಂದಿ ಭಾರತೀಯ ಭಾಷೆಗಳಲ್ಲಿ ಇಂಟರ್ನೆಟ್ ಬಳಕೆ (ಅಧಿಕವಾಗಿ ಗ್ರಾಮೀಣ ಪ್ರದೇಶ)
  • 24.5 ಕೋಟಿ- ದೇಶದಲ್ಲಿ ಯೂಟ್ಯೂಬ್​ ಬಳಕೆದಾರರ ಸಂಖ್ಯೆ (ಕಳೆದ ಡಿಸೆಂಬರ್​ವರೆಗೆ)
  • ಶೇ 75 ರಷ್ಟು ಮಂದಿ ವಿಡಿಯೋಗಳನ್ನೇ ವೀಕ್ಷಿಸುವ ಸ್ಮಾರ್ಟ್‌ಫೋನ್ ಬಳಕೆದಾರರು
  • 2014ರಲ್ಲಿ 25.10 ಕೋಟಿ ನಿಮಿಷಗಳು ಔಟ್​ಗೋಯಿಂಗ್​ ಕರೆಯಲ್ಲಿ ಮಾತನಾಡುತ್ತಿದ್ದರು. ಅದೀಗ 19 ಕೋಟಿಗೆ ಇಳಿಕೆ ಕಂಡಿದೆ. (ಇಂಟರ್ನೆಟ್​ ಬಳಕೆ ಮತ್ತು ಚಾಟಿಂಗ್​ನಲ್ಲಿ ಮಗ್ನರಾಗಿರುವುದು ಇದಕ್ಕೆ ಕಾರಣ)
  • ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳ ಬೆಳವಣಿಗೆಯು ರಾಜ್ಯದ ಒಟ್ಟು ದೇಶೀಯ ಉತ್ಪನ್ನ ಶೇ1.2ರಷ್ಟು ಹೆಚ್ಚಿಸಿದೆ
  • ಪ್ರಸ್ತುತ ಶೇ 10ರಷ್ಟು ಮೊಬೈಲ್ ಫೋನ್ ಬಳಕೆಯ ಹೆಚ್ಚಳ
Last Updated : Sep 10, 2019, 3:10 PM IST

ABOUT THE AUTHOR

...view details