ಕರ್ನಾಟಕ

karnataka

ETV Bharat / bharat

ಇಂಡಿಯಾದ ಟಾಪ್- 5 ಲಿಸ್ಟ್​​​ನಲ್ಲಿರುವ​ ಶ್ರೀಮಂತ ವನಿತೆಯರಿವರು..!

ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಪುರುಷರು ಮಾತ್ರ ಅಲ್ಲ ನಾವು ಕೂಡ ಇದ್ದೇವೆ ಎನ್ನುವುದನ್ನು ಸಾಬೀತು ಮಾಡಿ ತೋರಿಸಿದ್ದಾರೆ ಭಾರತದ ಈ ಐದು ಶ್ರೀಮಂತ ಮಹಿಳೆಯರು.

ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಭಾರತದ ವನಿತೆಯರಿವರು

By

Published : Mar 8, 2019, 8:46 PM IST

ನವದೆಹಲಿ: ಶ್ರೀಮಂತ ಉದ್ಯಮಿಗಳು ಎಂದ ಕೂಡಲೇ ನೆನಪಾಗುವುದು ಬಿಲ್​​ಗೇಟ್ಸ್‌, ವಾರನ್ ಬಫೆಟ್‌, ಜಾಕ್‌ ಮಾ, ಟಾಟಾ, ಬಿರ್ಲಾ, ಅಂಬಾನಿ, ಮಿತ್ತಲ್​ರಂತಹ ಪುರುಷರೇ ಹೊರತು ಮಹಿಳೆಯರಲ್ಲ ಎಂದುಕೊಳ್ಳುತ್ತೇವೆ.ಆದರೆ, ಮಹಿಳೆಯರೂ ಕೂಡಟಾಪ್​ ಲಿಸ್ಟ್​ನಲ್ಲಿದ್ದಾರೆ. ಅವರು ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ -ಪಡೆದಿದ್ದಾರೆ.

ಅವಳು ಬಾಸ್ ಆಗಿ ಉದ್ಯಮವನ್ನು ನಡೆಸಬಲ್ಲಳು, ನಾಲ್ಕು ಜನರ ನಡುವೆ ನಿಂತು ಕೆಲಸ ಮಾಡಬಲ್ಲಳು. ಪುರಷರಷ್ಟೇ ಸಾಧಿಸಬಲ್ಲಳು ಎಂಬುದನ್ನು ಹಲವು ವೇಳೆ ಸಾಬೀತುಪಡಿಸಿದ್ದಾಳೆ. ಫೋರ್ಬ್ಸ್‌ ನಿಯತಕಾಲಿಕೆ ಬಿಡುಗಡೆ ಮಾಡಿದ ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯ ಟಾಪ್​ ಐವರು ಮಹಿಳೆಯರು ಹೀಗಿದ್ದಾರೆ.

ಜಿಂದಾಲ್ ಒಡತಿ ಸಾವಿತ್ರಿ:

ಭಾರತದ ಅತ್ಯಂತ ಶ್ರೀಮಂತ ಮಹಿಳೆಯರ ಸಾಲಿನಲ್ಲಿ ಮೊದಲಿಗರಾಗಿ ನಿಲ್ಲುವವರು ಸಾವಿತ್ರಿ ಜಿಂದಾಲ್. ಜಿಂದಾಲ್ ಸ್ಟೀಲ್ ಆ್ಯಂಡ್​ ಪವರ್ ಲಿಮಿಟೆಡ್​ನ ಗೌರವ ಅಧ್ಯಕ್ಷೆ ಆಗಿರುವ ಸಾವಿತ್ರಿ ಜಿಂದಾಲ್ ಅವರು, ₹ 45.57 ಸಾವಿರ ಕೋಟಿ (6.5 ಬಿಲಿಯನ್ ಡಾಲರ್​) ಆಸ್ತಿಗೆ ಒಡತಿಯಾಗಿದ್ದಾರೆ.

ಜಗತ್ತಿನ 'ಸೆಲ್ಫ್​ ಮೇಡ್​ ರಿಚೆಸ್ಟ್​ ವುಮೆನ್​' ಕಿರಣ್​ ಮಜುಂದಾರ್​:

ಭಾರತದ ಎರಡನೇ ಶ್ರೀಮಂತ ಮಹಿಳೆ ಕಿರಣ್ ಮಜುಂದಾರ್ ಷಾ. 1978ರಲ್ಲಿ ಬೆಂಗಳೂರಿನಲ್ಲಿ ಬಯೋಕಾನ್ ಸಂಸ್ಥೆ ಸ್ಥಾಪಿಸಿದ್ದು, ಈಗ ಭಾರತದ ಅತಿದೊಡ್ಡ ಜೈವಿಕ ಔಷಧ ಸಂಸ್ಥೆಯಾಗಿ ಬೆಳೆದು ನಿಂತಿದೆ. 2019ರ 'ಹ್ಯೂರುನ್​ ರಿಚ್ಚೆಸ್ಟ್​ ಸೆಲ್ಫ್​ ಮೇಡ್​ ವುಮೆನ್​ ಇನ್ ವರ್ಲ್ಡ್​' ಪಟ್ಟ ಗಿಟ್ಟಿಸಿಕೊಂಡವರು ಇವರು. ಷಾ ಅವರು 3.29 ಬಿಲಿಯನ್ ಡಾಲರ್​ ಆಸ್ತಿಗೆ ಹಕ್ಕುದಾರರಾಗಿದ್ದಾರೆ. ಅಂದರೆ ಇದು ಭಾರತೀಯ ಲೆಕ್ಕದಲ್ಲಿ ಸರಿಸುಮಾರು 23 ಸಾವಿರ ಕೋಟಿ ರೂ.

ಸ್ಮಿತಾ ಕೃಷ್ಣ ಗೋದ್ರೆಜ್:

ಇನ್ನು ಮೂರನೇ ಸ್ಥಾನದಲ್ಲಿ ಗೋದ್ರೆಜ್​ ಸಂಸ್ಥೆಯ ಮೂರನೇ ತಲೆಮಾರಿನ ಉತ್ತರಾಧಿಕಾರಿ ಸ್ಮಿತಾ ಕೃಷ್ಣ ಗೋದ್ರೆಜ್ ಅವರಿದ್ದಾರೆ. ಇವರ ಒಟ್ಟು 2.8 ಮಿಲಿಯನ್ ಡಾಲರ್​ ನಿವ್ವಳ ಮೌಲ್ಯದ ಗಳಿಕೆ ಮಾಡಿಕೊಳ್ಳುವ ಮುಖೇನ 3ನೇ ಶ್ರೇಯಾಂಕದಲ್ಲಿ ಇದ್ದಾರೆ. ( 19.62 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದಾರೆ ಸ್ಮಿತಾ ಕೃಷ್ಣ ಗೋದ್ರೆಜ್​)

ಲೀನಾ ತಿವಾರಿ:

ಹೃದಯ ರೋಗ ಸಂಬಂಧಿತ ಫಾರ್ಮಾ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿದ ಯುಎಸ್​ವಿ ಇಂಡಿಯಾ ಕಂಪನಿಯ ಅಧ್ಯಕ್ಷೆ ಲೀನಾ ತಿವಾರಿ ಅವರು, 1.2 ಬಿಲಿಯನ್​ ಡಾಲರ್ ಸಂಪತ್ತಿನೊಂದಿಗೆ ನಾಲ್ಕನೇ ಸ್ಥಾನದಲ್ಲಿ ಮುಂದುವರೆಯುತ್ತಿದ್ದಾರೆ.

ಅನು ಅಗಾ:

ಎಂಜಿನಿಯರಿಂಗ್ ಸಂಸ್ಥೆಯ ಥೆರ್ಮ್ಯಾಕ್ಸ್​ ನಲ್ಲಿ ಶೇ. 62ರಷ್ಟು ಪಾಲು ಹೊಂದಿದ್ದ ಅನು ಅಗಾ, ಪತಿಯ ಮರಣದ ನಂತರ ಸಂಸ್ಥೆಯನ್ನು ತಮ್ಮ ಹಿಡಿತಕ್ಕೆ ಪಡೆದಿದ್ದಾರೆ. ಅನು ಮಗಳು ಮೆಹರಾ ಉತ್ತರಾಧಿಕಾರಿಯಾಗಿ ನೇಮಕ ಆಗುತ್ತಿದ್ದಂತೆ ಅಧ್ಯಕ್ಷ ಪಟ್ಟದಿಂದ ಕೆಳಗಿಳಿದ್ದಾರೆ. ಭಾರತದ ಶ್ರೀಮಂತರ ಸಾಲಿನಲ್ಲಿ ಇವರದ್ದು, 5ನೇ ಸ್ಥಾನ. ಇವರು ಭಾರತದ ಶ್ರೀಮಂತ ನೀರೆಯರಾದರೆ, ಫ್ರಾನ್ಸ್‌ನ ಫ್ರಾಂಕೋಯಿಸ್ ಬೆಟೆನ್ಕೊರ್ಟ್ ಮೇಯರ್ಸ್ ಪ್ರಪಂಚದ ಅತ್ಯಂತ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಲೋರಿಯಲ್ ಸಂಸ್ಥಾಪಕನ ಮೊಮ್ಮಗಳು ಇವರು. 51.2 ಬಿಲಿಯನ್‌ ಡಾಲರ್‌ ಸಂಪತ್ತಿನ ಒಡತಿ. ಲೋರಿಯಲ್ ಕಂಪನಿಯಲ್ಲಿ ಶೇ 33ರಷ್ಟು ಷೇರು ಮೌಲ್ಯ ಹೊಂದಿದ್ದಾರೆ ಫ್ರಾಂಕೋಯಿಸ್​.

ಕ್ರಿಸ್ಟಲ್ ಬ್ರಿಡ್ಜಸ್ ಮ್ಯೂಸಿಯಂ ಆಫ್ ಅಮೆರಿಕನ್ ಆರ್ಟ್​ನ ಅಧ್ಯಕ್ಷೆ ಆಲಿಸ್ ವಾಲ್ಟನ್. 45.1 ಬಿಲಿಯನ್‌ ಡಾಲರ್‌ ಸಂಪತ್ತು ಹೊಂದಿದ್ದು, ವಾಲ್ಮಾರ್ಟ್ ಸಂಸ್ಥಾಪಕ ಸ್ಯಾಮ್ ವಾಲ್ಟನ್‌ನ ಏಕೈಕ ಪುತ್ರಿ. ವಾಲ್ಮಾರ್ಟ್‌ನಲ್ಲಿ ಕೆಲಸ ಮಾಡದೇ ತನ್ನ ಆಸಕ್ತಿಯ ಕಲೆಯ ಮೇಲೆ ಕೇಂದ್ರೀಕರಿಸಿ ಅದರತ್ತ ವಾಲಿದವರು. 2011ರ ವೇಳೆ ಕ್ರಿಸ್ಟಲ್ ಬ್ರಿಡ್ಜಸ್ ಮ್ಯೂಸಿಯಂ ಆಫ್ ಅಮೆರಿಕನ್ ಆರ್ಟ್ ತೆರೆದರು. ಅವರ ವೈಯಕ್ತಿಕ ಕಲಾ ಸಂಗ್ರಹ ಮೌಲ್ಯವು ಲಕ್ಷಾಂತರ ಡಾಲರ್ ದಾಟುತ್ತದೆ. ಇವರು ಜಗತ್ತಿನ 2ನೇ ಶ್ರೀಮಂತ ಮಹಿಳೆ ಎಂಬ ಗರಿಮೆ ಹೊಂದಿದ್ದಾರೆ.

ABOUT THE AUTHOR

...view details