ಕರ್ನಾಟಕ

karnataka

ETV Bharat / bharat

ದೇಶ ತೊರೆಯಿರಿ ಎಂದ ಅಮೆರಿಕಾ ; ವಿದ್ಯಾರ್ಥಿಗಳ ಜೀವನದ ಜತೆ ಯುಎಸ್ ಚೆಲ್ಲಾಟ!! - ವರ್ಧಾ ಅಗರ್ವಾಲ್

ಕೋವಿಡ್​-19ನ 2ನೇ ಅಲೆ ದೇಶದಲ್ಲಿ ಉಂಟಾಗಿದೆ. ಆದಾಗ್ಯೂ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ದೇಶದಲ್ಲಿ ಉಳಿಯಲು ಹೈಬ್ರಿಡ್ ಕ್ಲಾಸ್‌ಗಳನ್ನು ನಡೆಸುವ ವಿಶ್ವವಿದ್ಯಾಲಯಗಳಲ್ಲಿ, ಕನಿಷ್ಠ 1 ಕ್ರೆಡಿಟ್-ಕ್ಲಾಸ್ ಇನ್-ಪರ್ಸನ್ ಕ್ಲಾಸ್‌ಗೆ ಸೇರಿರಬೇಕಾಗುತ್ತದೆ..

students
students

By

Published : Jul 14, 2020, 7:09 PM IST

Updated : Jul 14, 2020, 8:25 PM IST

ನವದೆಹಲಿ:ವರ್ಧಾ ಅಗರ್ವಾಲ್, ಕಿರಿಯ ಜೈವಿಕ ಎಂಜಿನಿಯರಿಂಗ್‌ ಆಗಿ ಯುಎಸ್​ನ ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ಸೆಮಿಸ್ಟರ್​ನಲ್ಲಿ ನೀಡಿದ್ದ ವಿನಾಯಿತಿಯನ್ನು ಈ ಬಾರಿ ಯುಎಸ್​ ಸರ್ಕಾರ ತೆಗೆದು ಹಾಕಿದ್ದು, ಅಮೆರಿಕಾದಲ್ಲಿನ ಅವರ ಭವಿಷ್ಯಕ್ಕೆ ಅನಿಶ್ಚಿತತೆ ಇಲ್ಲದಾಗಿದೆ.

ಅಮೇರಿಕಾದಲ್ಲಿರುವ ವಿದ್ಯಾರ್ಥಿಗಳ ಗೋಳು

ಕೊರೊನಾ ವೈರಸ್​ ಪ್ರಪಂಚದಾದ್ಯಂತ ವ್ಯಾಪಿಸಿರುವ ಈ ಸಮಯದಲ್ಲಿ ಕುಟುಂಬದಿಂದಲೂ ದೂರವಾಗಿರುವ ವರ್ಧಾ ಈ ಕಠಿಣ ಸಮಯವನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಅಲ್ಲಿರುವ ಭಾರತೀಯರ ವೀಸಾ ಪರಿಸ್ಥಿತಿ, ಮುಂದಿನ ಶಿಕ್ಷಣದ ಕುರಿತು ಆಕೆ ಚಿಂತಾಕ್ರಾಂತಳಾಗಿದ್ದಾಳಂತೆ. ತನ್ನಂತೆಯೇ ಅನೇಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಅದೇ ಪರಿಸ್ಥಿತಿಯಿಂದ ಬಳಲುತ್ತಿದ್ದಾರೆ. ಸರ್ಕಾರದ ಈ ಹೊಸ ನೀತಿಗಳು ಅನ್ಯಾಯವೆಂದು ಆಕೆ ಭಾವಿಸುತ್ತಾಳೆ.

ಯುಎಸ್ ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಎನ್​ಫೋರ್ಸ್​ಮೆಂಟ್​(ಐಸಿಇ)ನ ಹೊಸ ನೀತಿಯ ಪ್ರಕಾರ, ಆನ್​ಲೈನ್​ ಶಿಕ್ಷಣ ವ್ಯವಸ್ಥೆಯನ್ನು ತಮ್ಮ ವಿಶ್ವವಿದ್ಯಾಲಯಗಳು ಹೊಂದಿದ್ದರೆ ಅಂತಹ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ದೇಶವನ್ನು ತೊರೆಯಬೇಕು. ಇಲ್ಲದಿದ್ರೆ ಅವರನ್ನು ಗಡಿಪಾರು ಮಾಡಲಾಗುವುದು ಎಂದಿತ್ತು.

ಕೋವಿಡ್​-19ನ 2ನೇ ಅಲೆ ದೇಶದಲ್ಲಿ ಉಂಟಾಗಿದೆ. ಆದಾಗ್ಯೂ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ದೇಶದಲ್ಲಿ ಉಳಿಯಲು ಹೈಬ್ರಿಡ್ ಕ್ಲಾಸ್‌ಗಳನ್ನು ನಡೆಸುವ ವಿಶ್ವವಿದ್ಯಾಲಯಗಳಲ್ಲಿ, ಕನಿಷ್ಠ 1 ಕ್ರೆಡಿಟ್-ಕ್ಲಾಸ್ ಇನ್-ಪರ್ಸನ್ ಕ್ಲಾಸ್‌ಗೆ ಸೇರಿರಬೇಕಾಗುತ್ತದೆ. ಅಲ್ಲದೆ ವಿಶ್ವವಿದ್ಯಾನಿಲಯವು ಮಧ್ಯ ಸೆಮಿಸ್ಟರ್‌ನಲ್ಲಿ ಸಂಪೂರ್ಣವಾಗಿ ಆನ್‌ಲೈನ್ ಮೋಡ್‌ಗೆ ಸಾಗಬೇಕಾದ್ರೆ, ವಿದ್ಯಾರ್ಥಿಗಳು ದೇಶವನ್ನು ತೊರೆಯಬೇಕಾಗುತ್ತದೆ ಎಂದಿದೆ.

ಈ ನೀತಿಗಳು ಟ್ರಂಪ್ ಆಡಳಿತವು ವಲಸೆಯನ್ನು ಕಡಿಮೆ ಮಾಡಲು ಮತ್ತು ವಿಶ್ವವಿದ್ಯಾಲಯಗಳನ್ನು ಪುನಃ ತೆರೆಯುವಂತೆ ಒತ್ತಾಯಿಸುವ ರಾಜಕೀಯ ತಂತ್ರವಾಗಿದೆ ಎಂದು ವಲಸೆ ವಕೀಲ ಮಂಜುನಾಥ್ ಗೋಕರೆ ಹೇಳಿದ್ದಾರೆ. ಫೆಡರಲ್ ರಿಜಿಸ್ಟರ್‌ನಲ್ಲಿ ನೀತಿಗಳನ್ನು ಇನ್ನೂ ಪ್ರಕಟಿಸದ ಕಾರಣ ಅವರು ಶಾಂತವಾಗಿರಲು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಿದ್ದಾರೆ.

ಹಾರ್ವರ್ಡ್ ಮತ್ತು ಎಂಐಟಿಯಂತಹ ಶಾಲೆಗಳು ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ಹೂಡುತ್ತಿರುವುದರಿಂದ, ಕಾನೂನು ಕ್ರಮಗಳು ಈ ನೀತಿಗಳನ್ನು ನಿರ್ಬಂಧಿಸುತ್ತವೆ ಎಂಬ ಭರವಸೆ ಇದೆ ಎಂದಿದ್ದಾರೆ.

Last Updated : Jul 14, 2020, 8:25 PM IST

ABOUT THE AUTHOR

...view details