ಕರ್ನಾಟಕ

karnataka

ETV Bharat / bharat

ಅಂತಾರಾಷ್ಟ್ರೀಯ ಸಾಕ್ಷರತಾ ದಿನ: ಇದರ ಮಹತ್ವ ಹಾಗೂ ಸರ್ಕಾರದ ಕ್ರಮಗಳ ಬಗ್ಗೆ ತಿಳಿಯಿರಿ

2015ರಿಂದ ಸೆಪ್ಟೆಂಬರ್ 8ರಂದು ಪ್ರತೀ ವರ್ಷ ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಆಚರಿಸಲಾಗುತ್ತದೆ. ಕಲಿಕೆಯ ಅವಕಾಶಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಉತ್ತೇಜಿಸಲು ಈ ದಿನ ಆಚರಿಸಲಾಗುತ್ತದೆ.

literacy day
literacy day

By

Published : Sep 8, 2020, 8:18 AM IST

ಹೈದರಾಬಾದ್:ಸಾಕ್ಷರತೆಯ ಮಹತ್ವವನ್ನು ಸಾರಲು ಸೆಪ್ಟೆಂಬರ್ 8ರಂದು ಪ್ರತೀ ವರ್ಷ ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಆಚರಿಸಲಾಗುತ್ತದೆ.

ವಿಶ್ವಸಂಸ್ಥೆಯು ಈ ದಿನವನ್ನು 2015ರಿಂದ ಆಚರಿಸಲು ಪ್ರಾರಂಭಿಸಿದೆ. ಗುಣಮಟ್ಟದ ಶಿಕ್ಷಣ ಮತ್ತು ಕಲಿಕೆಯ ಅವಕಾಶಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಉತ್ತೇಜಿಸಲು ಈ ದಿನ ಆಚರಿಸಲಾಗುತ್ತದೆ.

ಕಳೆದ ದಶಕಗಳಲ್ಲಿ ವಿಶ್ವವು ಸಾಕ್ಷರತೆಯಲ್ಲಿ ಸ್ಥಿರ ಪ್ರಗತಿಯನ್ನು ಸಾಧಿಸಿದೆ. ಆದರೂ ಜಾಗತಿಕವಾಗಿ 773 ಮಿಲಿಯನ್ ವಯಸ್ಕರು ಮತ್ತು ಯುವಜನರಿಗೆ ಮೂಲ ಸಾಕ್ಷರತೆ ದೊರೆತಿಲ್ಲ.

617 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು ಹದಿಹರೆಯದವರು ಓದುವುದು ಮತ್ತು ಗಣಿತ ಶಾಸ್ತ್ರದಲ್ಲಿ ಕನಿಷ್ಠ ಪ್ರಾವೀಣ್ಯತೆಯ ಮಟ್ಟವನ್ನು ಸಾಧಿಸಿಲ್ಲ.

ಅಂತಾರಾಷ್ಟ್ರೀಯ ಸಾಕ್ಷರತಾ ದಿನ

ಕೋವಿಡ್-19 ಹಾಗೂ ಸಾಕ್ಷರತೆ:

ಕೋವಿಡ್-19 ಬಿಕ್ಕಟ್ಟಿನಿಂದಾಗಿ ಸಾಕ್ಷರತಾ ಸವಾಲುಗಳು ವೃದ್ಧಿಯಾಗಿವೆ. ಇದು ಶಾಲಾ ಶಿಕ್ಷಣ ಮತ್ತು ಕಲಿಕೆಯ ಅವಕಾಶಗಳ ಮೇಲೆ ಆಳವಾಗಿ ಪರಿಣಾಮ ಬೀರುತ್ತಿದೆ.

ಸಾಂಕ್ರಾಮಿಕ ರೋಗದ ಆರಂಭಿಕ ಹಂತದಲ್ಲಿ 190ಕ್ಕೂ ಹೆಚ್ಚು ದೇಶಗಳಲ್ಲಿ ಶಾಲೆಗಳನ್ನು ಮುಚ್ಚಲಾಯಿತು. ಇದು ವಿಶ್ವದ ವಿದ್ಯಾರ್ಥಿ ಜನಸಂಖ್ಯೆಯ ಶೇಕಡಾ 91ರಷ್ಟು ಅಂದರೆ 1.6 ಶತಕೋಟಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಪಡಿಸಿತು. ಕೋವಿಡ್​-19 ಸುಮಾರು 63 ದಶಲಕ್ಷ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರ ಮೇಲೆಯೂ ಪರಿಣಾಮ ಬೀರಿತು.

ಆದರೂ ಸರ್ಕಾರಗಳು ಶಿಕ್ಷಣ ನೀಡಲು ಬೇರೆ ಮಾರ್ಗಗಳನ್ನು ಅಳವಡಿಸಿಕೊಂಡಿವೆ. ವರ್ಚುವಲ್ ತರಗತಿ, ಟಿವಿ ಅಥವಾ ರೇಡಿಯೋ ಮೂಲಕ ಪಾಠ, ತೆರೆದ ಸ್ಥಳಗಳಲ್ಲಿ ಕಲಿಸುವ ಮೂಲಕ ಶಿಕ್ಷಣ ಮುಂದುವರೆದಿದೆ.

ಭಾರತದಲ್ಲಿ ಸಾಕ್ಷರತೆ:

  • 2011ರ ಜನಗಣತಿಯ ಪ್ರಕಾರ, ಭಾರತದ ಸಾಕ್ಷರತೆಯ ಪ್ರಮಾಣ ಶೇಕಡಾ 74.04ರಷ್ಟಿತ್ತು.
  • 2011ರ ಜನಗಣತಿಯ ಪ್ರಕಾರ, ಅಗ್ರ ಐದು ಸಾಕ್ಷರತೆ ಹೊಂದಿದ ರಾಜ್ಯಗಳು: ಕೇರಳ (ಶೇ. 93.91), ಲಕ್ಷದ್ವೀಪ (ಶೇ. 92.28), ಮಿಜೋರಾಂ (ಶೇ. 91.5), ತ್ರಿಪುರ (ಶೇ. 87.75) ಮತ್ತು ಗೋವಾ (ಶೇ. 87.40)
  • ಭಾರತವು 313 ಮಿಲಿಯನ್ ಅನಕ್ಷಸ್ಥರನ್ನು ಹೊಂದಿದ್ದು, ಅವರಲ್ಲಿ ಶೇ. 59ರಷ್ಟು ಮಹಿಳೆಯರಿದ್ದಾರೆ.

ಸರ್ಕಾರದ ಕ್ರಮಗಳು:

  • 1988ರಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ಸಾಕ್ಷರತಾ ಮಿಷನ್ (ಎನ್‌ಎಲ್‌ಎಂ) ವಯಸ್ಕರ ಶಿಕ್ಷಣದತ್ತ ಗಮನ ಹರಿಸತ್ತದೆ. ಇದು 15-35 ವರ್ಷದೊಳಗಿನ ಸಾಕ್ಷರರಲ್ಲದವರಿಗೆ ಕ್ರಿಯಾತ್ಮಕ ಸಾಕ್ಷರತೆಯನ್ನು ನೀಡುತ್ತದೆ.
  • ಮಿಡ್-ಡೇ- ಸ್ಕೀಮ್ (1995), ಸರ್ವ ಶಿಕ್ಷಣ ಅಭಿಯಾನ (2001), ಆರ್‌ಟಿಇ (ಶಿಕ್ಷಣ ಹಕ್ಕು ಕಾಯ್ದೆ, 2009) ಜಾರಿಯಾಗಿದ್ದು, ಇವುಗಳು ಸಾಕ್ಷರತೆಯನ್ನು ಸುಧಾರಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿವೆ.
  • ಭಾರತವು "ಕಡಿಮೆ ಸಾಕ್ಷರತೆಯ ಬಲೆ"ಯಿಂದ ಯಶಸ್ವಿಯಾಗಿ ಹೊರ ಬಂದಿದೆ. ಇದರಲ್ಲಿ ಪೋಷಕರು ಅನಕ್ಷರಸ್ಥರಾಗಿದ್ದು, ತಮ್ಮ ಗಂಡು ಮತ್ತು ಹೆಣ್ಣು ಮಕ್ಕಳನ್ನು ಸಾಕ್ಷರರನ್ನಾಗಿಸುತ್ತಿದ್ದಾರೆ.
  • ಇದೇ ವೇಗದಲ್ಲಿ ಭಾರತದ ಸಾಕ್ಷರತೆಯ ಪ್ರಮಾಣ ಅಧಿಕವಾದಲ್ಲಿ ದೇಶವು 2030ರ ವೇಳೆಗೆ ಮಕ್ಕಳು ಮತ್ತು ಯುವಕರಿಗೆ ಸಾರ್ವತ್ರಿಕ ಸಾಕ್ಷರತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ.

ABOUT THE AUTHOR

...view details