ಕರ್ನಾಟಕ

karnataka

By

Published : Sep 23, 2020, 7:31 AM IST

ETV Bharat / bharat

ಅಂತಾರಾಷ್ಟ್ರೀಯ ಸನ್ನೆ ಭಾಷೆಗಳ ದಿನಾಚರಣೆ: ಅಭಿವೃದ್ಧಿಗೆ ಬೇಕಿದೆ ಸೂಕ್ತ ವ್ಯವಸ್ಥೆ

2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ ಕಿವುಡರ ಜನಸಂಖ್ಯೆ ಸುಮಾರು 50 ಲಕ್ಷ ದಷ್ಟಿದೆ. ಕಿವುಡ ಸಮುದಾಯದ ಅಗತ್ಯಗಳನ್ನು ಬಹಳ ಹಿಂದಿನಿಂದಲೂ ಕಡೆಗಣಿಸಲಾಗಿದೆ . ಇಂದು ''ಅಂತಾರಾಷ್ಟ್ರೀಯ ಸನ್ನೆ ಭಾಷೆಗಳ ದಿನಾಚರಣೆ'' ಹಿನ್ನೆಲೆ ಈ ಭಾಷೆಗಳ ಅಭಿವೃದ್ಧಿಗಾಗಿ ಆಧುನಿಕ ತರಬೇತಿ ವಿಧಾನ ಮತ್ತು ಬೋಧನಾ ವ್ಯವಸ್ಥೆಗಳತ್ತ ತುರ್ತು ಗಮನಹರಿಸುವುದು ಬಹುಮುಖ್ಯವಾಗಿದೆ.

International Day of Sign Languages
ಅಂತಾರಾಷ್ಟ್ರೀಯ ಸನ್ನೆ ಭಾಷೆಗಳ ದಿನಾಚರಣೆ

ಕಿವುಡರು ಮತ್ತು ಇತರ ಜನರು ಬಳಸುವ ಸನ್ನೆ ಭಾಷೆಗಳ ಗುರುತಿಸುವಿಕೆ ಮತ್ತು ಆ ಭಾಷೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಬೆಂಬಲಿಸುವ ಮತ್ತು ರಕ್ಷಿಸುವ ಉದ್ದೇಶವನ್ನು ಅಂತಾರಾಷ್ಟ್ರೀಯ ಸನ್ನೆ ಭಾಷೆಗಳ ದಿನ ಆಚರಣೆ ಹೊಂದಿದೆ. ಕಿವುಡ ಜನರಿಗೆ ಮಾನವ ಹಕ್ಕುಗಳು ದೊರೆಯುವಂತೆ ಮಾಡುವುದು ಹಾಗೂ ಅವರ ಸಂಪೂರ್ಣ ಏಳಿಗೆಯಲ್ಲಿ ಸನ್ನೆ ಭಾಷೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನೂ ಕೂಡ ಈ ದಿನಾಚರಣೆ ಹೊಂದಿದೆ.

2020:

ಈ ವರ್ಷ, ವಿಶ್ವ ಕಿವುಡರ ಒಕ್ಕೂಟವು ಜಾಗತಿಕ ನಾಯಕರಿಗೆ ಒಂದು ಸವಾಲು ನೀಡಿದೆ. ಈ ಮೂಲಕ ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ನಾಯಕರಿಂದ ಪ್ರತಿ ದೇಶದಲ್ಲಿನ ಕಿವುಡರ ರಾಷ್ಟ್ರೀಯ ಸಂಘಗಳು ಮತ್ತು ಇತರ ಕಿವುಡರ ನೇತೃತ್ವದ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸನ್ನೆ ಭಾಷೆಗಳ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಹಿನ್ನೆಲೆ:

ಸೆಪ್ಟೆಂಬರ್ 23 , 1951 ರಲ್ಲಿ WFD (ವಿಶ್ವ ಕಿವುಡರ ಒಕ್ಕೂಟ)ಸ್ಥಾಪನೆಯಾಯ್ತು. ಮೂಕ ಅಥವಾ ಸನ್ನೆ ಭಾಷೆಗಳ ಸಂರಕ್ಷಣೆ ಮತ್ತು ಕಿವುಡ ಸಂಸ್ಕೃತಿ, ಕಿವುಡರಿಗೆ ಮಾನವ ಹಕ್ಕುಗಳ ಅರಿವು ಮೂಡಿಸುವುದು ಅದರ ಮುಖ್ಯ ಗುರಿಗಳಲ್ಲಿ ಒಂದಾಗಿದೆ. ಈ ಹಿನ್ನೆಲೆ ಸೆಪ್ಟೆಂಬರ್ 23 ರನ್ನು ಅಂತಾರಾಷ್ಟ್ರೀಯ ಸನ್ನೆ ಭಾಷೆಗಳ ದಿನವಾಗಿ ಆಚರಿಸಲಾಗುತ್ತಿದೆ.

ಆಂಟಿಗುವಾ ಮತ್ತು ಬಾರ್ಬುಡಾ ದೇಶಗಳ ಶಾಶ್ವತ ಪ್ರಾಧಿಕಾರ A/RES/72/161 ಎಂಬ ಒಂದು ಸಂಕಲ್ಪವನ್ನು ವಿಶ್ವಸಂಸ್ಥೆಗೆ ಪ್ರಾಯೋಜಿಸಿವೆ. ವಿಶ್ವಸಂಸ್ಥೆಯ 97 ಸದಸ್ಯ ರಾಷ್ಟ್ರಗಳು ಸಹ ಇದರ ಪ್ರಾಯೋಜಕತ್ವವನ್ನು ಬೆಂಬಲಿಸಿವೆ. ಮತ್ತು 19 ಡಿಸೆಂಬರ್ 2017 ರಂದು ಒಮ್ಮತದಿಂದ ಅಂಗೀಕರಿಸಲ್ಪತು. ನಂತರ 2018 ರಲ್ಲಿ ಅಂತಾರಾಷ್ಟ್ರೀಯ ಕಿವುಡರ ವಾರ ಆಚರಣೆಯ ಒಂದು ಭಾಗವಾಗಿ ಅಂತಾರಾಷ್ಟ್ರೀಯ ಸನ್ನೆ ಭಾಷೆಗಳ ದಿನವನ್ನು ಮೊದಲ ಬಾರಿಗೆ ಆಚರಿಸಲಾಯ್ತು.

ಸನ್ನೆ ಭಾಷೆಗಳು:

ಸನ್ನೆ ಭಾಷೆಗಳು ಸಂಪೂರ್ಣವಾಗಿ ನೈಸರ್ಗಿಕ ಭಾಷೆಗಳಾಗಿದ್ದು, ಮಾತನಾಡುವ ಭಾಷೆಗಳಿಗಿಂತ ರಚನಾತ್ಮಕವಾಗಿ ಬಹಳ ವಿಭಿನ್ನ ಹಾಗೂ ವಿಶಿಷ್ಟವಾಗಿವೆ. ಸ್ಥಳೀಯವಾಗಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಸನ್ನೆ ಭಾಷೆ ಕೂಡ ಇದ್ದು, ಇದನ್ನು ಸಾಮಾನ್ಯವಾಗಿ ಕಿವುಡರು ಅಂತಾರಾಷ್ಟ್ರೀಯ ಸಭೆಗಳಲ್ಲಿ ಹಾಗೂ ಅನೌಪಚಾರಿಕ ಪ್ರಯಾಣದ ವೇಳೆ ಮಾತನಾಡಲು ಬಳಸುತ್ತಾರೆ. ಇದನ್ನು ಸನ್ನೆ ಭಾಷೆಯ pidgin(ಸಾಮಾನ್ಯ ಜನರ ಭಾಷೆಯನ್ನು ಬಳಸದ ಜನರ ನಡುವೆ ಸಂವಹನ ನಡೆಸಲು ಬಳಸುವ ಭಾಷೆ) ರೂಪವೆಂದು ಪರಿಗಣಿಸಲಾಗುತ್ತದೆ ಅದು ನೈಸರ್ಗಿಕ ಸನ್ನೆ ಭಾಷೆಗಳಂತೆ ಸಂಕೀರ್ಣವಾಗಿಲ್ಲ ಮತ್ತು ಸೀಮಿತ ನಿಘಂಟನ್ನು ಹೊಂದಿದೆ.

ವಿಶೇಷ ಚೇತನರ ಹಕ್ಕುಗಳ ಸಮಾವೇಶವು ಸನ್ನೆ ಭಾಷೆಗಳ ಬಳಕೆಯನ್ನು ಗುರುತಿಸಿ ಉತ್ತೇಜಿಸುತ್ತದೆ ಮತ್ತು ಈ ಸನ್ನೆ ಭಾಷೆಗಳು, ಮಾತನಾಡುವ ಭಾಷೆಗಳಿಗೆ ಸಮಾನವಾಗಿವೆ ಎಂದು ಇದು ಸ್ಪಷ್ಟಪಡಿಸುತ್ತದೆ. ಹಾಗೂ ಈ ಸನ್ನೆ ಭಾಷೆಯ ಕಲಿಕೆಗೆ ಅನುಕೂಲವಾಗುವಂತೆ ಮತ್ತು ಕಿವುಡ ಸಮುದಾಯದ ಭಾಷಾ ಗುರುತನ್ನು ಉತ್ತೇಜಿಸಲು ಒತ್ತಾಯಿಸುತ್ತದೆ.

ಸನ್ನೆ ಭಾಷಗಳ ಗುರುತಿಸುವಿಕೆ:

"ಸನ್ನೆ ಭಾಷೆಗಳು ಪೂರ್ಣ ಪ್ರಮಾಣದ ಭಾಷೆಗಳಾಗಿವೆ, ಮತ್ತು ಅವರ ಬಳಕೆದಾರರನ್ನು ಭಾಷಾ ಅಲ್ಪಸಂಖ್ಯಾತರ ಸದಸ್ಯರೆಂದು ಪರಿಗಣಿಸಬಹುದು. ಹಾಗೂ ಅವರು ರಾಜ್ಯದ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತ ಕಡಿಮೆ ಪ್ರತಿನಿಧಿಸುತ್ತಾರೆ" ಎಂದು ವಿಶ್ವಸಂಸ್ಥೆಯ ವಿಶೇಷ ವರದಿಗಾರರೊಬ್ಬರು ಹೇಳಿದ್ದಾರೆ.

ಸನ್ನೆ ಭಾಷೆಗಳ ಬಳಕೆದಾರರು ತಮ್ಮ ಭಾಷೆಗಳನ್ನು ಸೂಚನೆ ಅಥವಾ ಬೋಧನೆಯ ಭಾಷೆಗಳಾಗಿ ಬಳಸದಿದ್ದರೆ ಇತರ ಅಲ್ಪಸಂಖ್ಯಾತರಂತೆಯೇ ಅವರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಅಥವಾ ಭಾಷಾ ನಿರಾಕರಣೆಗೊಳಪಡಬಹುದು.

ಕಿವುಡರಿಗೆ ಪರಿಣಾಮಕಾರಿ, ಗುಣಮಟ್ಟದ ಶಿಕ್ಷಣಕ್ಕೆ ಇರುವ ಅಡೆತಡೆಗಳು ಉಚ್ಚರಣಾ ಭಾಷೆಗಳೇ ಸನ್ನೆ ಭಾಷೆಗಳಿಗಿಂತ ಹೆಚ್ಚಾಗಿ ಬಳಸಲು ಕಾರಣವಾಗಬಹುದು ಎಂದು ಹೇಳಬಹುದು. ಹೀಗಾಗಿ ಕಿವುಡರ ಶೈಕ್ಷಣಿಕ ಅಗತ್ಯತೆಗಳು, ಮತ್ತು ಸನ್ನೆ ಭಾಷೆಗಳ ಗುರುತಿಸುವಿಕೆ ( ಎಲ್ಲಾ ಶೈಕ್ಷಣಿಕ ಹಂತಗಳಲ್ಲಿ ಬೋಧನಾ ಮಾಧ್ಯಮವಾಗಿ ಸನ್ನೆ ಭಾಷೆಯನ್ನು ಸೇರಿಸುವುದು)ಗೆ ಹೆಚ್ಚಿನ ಆದ್ಯತೆ ನೀಡಬೇಕು.

ಸನ್ನೆ ಭಾಷೆಗಳ ಇತಿಹಾಸ:

ಸ್ಥಳೀಯ ಅಮೆರಿಕನ್ನರು ಇತರ ಬುಡಕಟ್ಟು ಜನಾಂಗದವರೊಂದಿಗೆ ಸಂವಹನ ನಡೆಸಲು ಮತ್ತು ಯುರೋಪಿಯನ್ನರೊಂದಿಗೆ ವ್ಯಾಪಾರ ಮಾಡಲು ಅನುಕೂಲವಾಗುವಂತೆ ಕೈ ಸನ್ನೆಗಳನ್ನು ಬಳಸಿದರು.

ಬೆನೆಡಿಕ್ಟೈನ್ ಸನ್ಯಾಸಿಗಳು ತಮ್ಮ ದೈನಂದಿನ ಮೌನವ್ರತದ ಅವಧಿಯಲ್ಲಿ ಸಂದೇಶಗಳನ್ನು ರವಾನಿಸಲು ಈ ಸನ್ನೆ ಭಾಷೆಯನ್ನು ಬಳಸುತ್ತಿದ್ದರು.

ಶ್ರವಣದೋಷವುಳ್ಳವರಿಗೆ ಔಪಚಾರಿಕ ಸನ್ನೆ ಭಾಷೆಯನ್ನು ರಚಿಸಿದ ಮೊದಲ ವ್ಯಕ್ತಿ ಎಂಬ ಕೀರ್ತಿ 16 ನೇ ಶತಮಾನದ ಸ್ಪ್ಯಾನಿಷ್ ಬೆನೆಡಿಕ್ಟೈನ್ ಸನ್ಯಾಸಿಯಾದ ಪೆಡ್ರೊ ಪೊನ್ಸ್ ಡಿ ಲಿಯಾನ್​ಗೆ ಸಲ್ಲುತ್ತದೆ.

1620 ರಲ್ಲಿ ಜುವಾನ್ ಪ್ಯಾಬ್ಲೊ ಬೊನೆಟ್ ಶ್ರವಣದೋಷವುಳ್ಳ ಜನರ ಶಿಕ್ಷಣದ ಬಗ್ಗೆ ಕುರಿತ ಮೊದಲ ಕೃತಿಯನ್ನು ಪ್ರಕಟಿಸಿದರು.

1755 ರಲ್ಲಿ ಫ್ರೆಂಚ್ ಕ್ಯಾಥೋಲಿಕ್ ಚರ್ಚ್​​ನ ಪಾದ್ರಿ ಚಾರ್ಲ್ಸ್-ಮೈಕೆಲ್ ಡೆ ಎಲ್ ಎಪಿ ಕಿವುಡರಿಗೆ ಶಿಕ್ಷಣ ನೀಡಲು ಹೆಚ್ಚು ವಿಸ್ತೃತವಾದ ವಿಧಾನಗಳನ್ನು ಪರಿಚಯಿಸಿದ್ರು. ಇದು ಕಿವುಡ ಮಕ್ಕಳಿಗೆಂದೇ ಪ್ಯಾರಿಸ್​ನಲ್ಲಿ ಸ್ಥಾಪನೆಯಾದ ಮೊದಲ ಶಾಲೆಯಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಡೆಫ್-ಮ್ಯೂಟ್ಸ್ ( the National Institute for Deaf-Mutes)ಸ್ಥಾಪನೆಗೆ ನಾಂದಿ ಹಾಡಿತು.

ಜಾಗತಿಕ-ಅಂಕಿ-ಸಂಖ್ಯೆ:

World Federation of the Deafನ ವರದಿ ಪ್ರಕಾರ, ವಿಶ್ವಾದ್ಯಂತ ಸರಿಸುಮಾರು 72 ಮಿಲಿಯನ್ ಕಿವುಡರಿದ್ದಾರೆ. ಅವರಲ್ಲಿ 80% ಕ್ಕಿಂತ ಹೆಚ್ಚು ಕಿವುಡ ಜನರು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅವರು 300 ಕ್ಕೂ ಹೆಚ್ಚು ವಿಭಿನ್ನ ಸನ್ನೆ ಭಾಷೆಗಳನ್ನು ಬಳಸುತ್ತಾರೆ.

ಕೋವಿಡ್​​-19 ಸಂದರ್ಭದಲ್ಲಿ ಸನ್ನೆ ಭಾಷೆಯ ಪ್ರಾಮುಖ್ಯತೆ:

ದಿಢೀರನೆ ವಿಶ್ವಾದ್ಯಂತ ಕೋವಿಡ್​​ ಬಿಕ್ಕಟ್ಟು ಆವರಿಸಿದಾಗ ಕೋವಿಡ್​ ಕುರಿತಾದ ಆರೋಗ್ಯ ಮಾಹಿತಿಯನ್ನು ವಿಶೇಷ ಚೇತನರಿಗೆ ಅರ್ಥವಾಗುವ ರೀತಿ ಸನ್ನೆ ಭಾಷೆ ಮೂಲಕ, ಶೀರ್ಷಿಕೆಗಳ ಮೂಲಕ ಮೆಸೇಜ್​ಗಳ ಮೂಲಕ ಅಧಿಕಾರಿಗಳು ವಿಕಲಚೇತನರಿಗೂ ತಲುಪಿಸಬೇಕು ಎಂದು ವಿಶ್ವಸಂಸ್ಥೆ ಸಾರಿ ಹೇಳಿತು.

ಭಾರತ:

2000ದ ದಶಕದಲ್ಲಿ, ಭಾರತೀಯ ಕಿವುಡ ಸಮುದಾಯವು ಐಎಸ್ಎಲ್- ಅಂತಾರಾಷ್ಟ್ರೀಯ ಸನ್ನೆ ಭಾಷೆಗಳ ಬೋಧನೆ ಮತ್ತು ಸಂಶೋಧನೆಯ ಮೇಲೆ ಕೇಂದ್ರೀಕರಿಸುವ ಸಂಸ್ಥೆಯನ್ನು ಸ್ಥಾಪಿಸುವಂತೆ ಪ್ರತಿಪಾದಿಸಿತು. 2007-2012 ರ ಅವಧಿಯಲ್ಲಿ ಜಾರಿಗೆ ಬಂದ 11 ನೇ ಪಂಚವಾರ್ಷಿಕ ಯೋಜನೆ, ಶ್ರವಣದೋಷವುಳ್ಳ ಜನರ ಅಗತ್ಯಗಳನ್ನು ತುಲನಾತ್ಮಕವಾಗಿ ನಿರ್ಲಕ್ಷಿಸಲಾಗಿದೆ ಎಂದು ಒಪ್ಪಿಕೊಂಡಿತು ಮತ್ತು ಸನ್ನೆ ಭಾಷೆಗಳ ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪನೆ ಹಾಗೂ ಅಭಿವೃದ್ದಿಗಾಗಿ ಯೋಜನೆ ರೂಪಿಸಿತು. ಸನ್ನೆ ಭಾಷಾ ಶಿಕ್ಷಕರು ಮತ್ತು ವ್ಯಾಖ್ಯಾನಕಾರರ ತರಬೇತಿಯನ್ನು ಉತ್ತೇಜಿಸಲು ಮತ್ತು ತರಬೇತಿ ಕೇಂದ್ರ ಅಭಿವೃದ್ಧಿಪಡಿಸಲು. 2010-11ರ ಕೇಂದ್ರ ಬಜೆಟ್ ಭಾಷಣದಲ್ಲಿ ISLRTC(Indian signs language research and training centre)ಸ್ಥಾಪಿಸುವುದಾಗಿ ಅಂದಿನ ವಿತ್ತ ಸಚಿವರು ಘೋಷಿಸಿದರು.

ಇದರ ಫಲವಾಗಿ, 2011 ರಲ್ಲಿ, ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಐಜಿಎನ್​​ಒಯು) ಸ್ವಾಯತ್ತ ಕೇಂದ್ರವಾಗಿ ಭಾರತೀಯ ಸನ್ನೆ ಭಾಷಾ ಸಂಶೋಧನಾ ಮತ್ತು ತರಬೇತಿ ಕೇಂದ್ರವನ್ನು (ಐಎಸ್​​ಆರ್​​ಟಿಸಿ) ಸ್ಥಾಪಿಸಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅನುಮೋದನೆ ನೀಡಿತು. ಅದರಂತೆ ಅಕ್ಟೋಬರ್ 4,2011 ರಂದು ISLRTC ಸ್ಥಾಪನೆಗೆ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಅಡಿಪಾಯವನ್ನು ಹಾಕಲಾಯಿತು. 2013ರಲ್ಲಿ, IGNOUನಲ್ಲಿ ಸ್ಥಾಪನೆಗೊಂಡಿದದ್ದ ಕೇಂದ್ರವನ್ನು ಮುಚ್ಚಲಾಯಿತು.

ನಂತರ 20 ಏಪ್ರಿಲ್, 2015 ರ ಆದೇಶದಲ್ಲಿ, ದೆಹಲಿಯ ಅಲಿ ಯವರ್‌ ಜಂಗ್‌ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್​ ಹಿಯರಿಂಗ್‌ ಹ್ಯಾಂಡಿಕ್ಯಾಪ್ಡ್‌ ಎವೈಜೆಎನ್​ಐಎಚ್​ನ ​ಪ್ರಾದೇಶಿಕ ಕೇಂದ್ರದೊಂದಿಗೆ ISLRTCಯನ್ನು ಸಂಯೋಜಿಸಲು ಸಚಿವಾಲಯ ನಿರ್ಧರಿಸಿತು. ಆದರೆ ISLRTC ಮತ್ತು ಎಂಎಸ್​ಜೆಇ ಎರಡರ ವಿಭಿನ್ನ ದೃಷ್ಟಿಕೋನಗಳು ಮತ್ತು ಗುರಿಗಳಿಂದಾಗಿ ಕಿವುಡ ಸಮುದಾಯವು ಈ ನಿರ್ಧಾರವನ್ನು ಪ್ರತಿಭಟಿಸಿತು.

ಪ್ರತಿಭಟನೆ ಮತ್ತು ಮಂತ್ರಿಗಳ ಜೊತೆಗಿನ ಸಭೆಗಳ ಪರಿಣಾಮವಾಗಿ ಸೆಪ್ಟೆಂಬರ್ 22, 2015 ರಂದು ನಡೆದ ಸಭೆಯಲ್ಲಿ ISLRTCಯನ್ನು ಅಂಗವಿಕಲರ ಸಬಲೀಕರಣ ಇಲಾಖೆಯ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ (ಎಂಎಸ್​ಜೆಇ) ಅಡಿಯಲ್ಲಿ ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು. ನಂತರ ಸೆಪ್ಟೆಂಬರ್ 28, 2015 ರಂದು ಎಂಎಸ್​ಜೆಇ ನಡೆಸಿದ ಸಭೆಯಿಂದ ಐಎಸ್​​ಆರ್​​ಟಿಸಿ ಸ್ಥಾಪನೆಗೆ ಒಂದು ಹೊಸ ಆಯಾಮ ಸಿಕ್ಕಂತಾಯ್ತು.

2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ ಕಿವುಡರ ಒಟ್ಟು ಜನಸಂಖ್ಯೆಯು ಸುಮಾರು 50 ಲಕ್ಷ ದಷ್ಟಿದೆ. ಕಿವುಡ ಸಮುದಾಯದ ಅಗತ್ಯಗಳನ್ನು ಬಹಳ ಹಿಂದಿನಿಂದಲೂ ಕಡೆಗಣಿಸಲಾಗಿದೆ ಮತ್ತು ಕಿವುಡರಿಗಾಗಿ ಕೆಲಸ ಮಾಡುವ ವಿವಿಧ ಸಂಸ್ಥೆಗಳಲ್ಲಿ ಅವರ ಸಮಸ್ಯೆಗಳನ್ನು ದಾಖಲಿಸಲಾಗಿದೆ. ಇವರ ಅಭಿವೃದ್ಧಿಗಾಗಿ ಬಳಕೆಯಲ್ಲಿಲ್ಲದ ಆಧುನಿಕ ತರಬೇತಿ ವಿಧಾನ ಮತ್ತು ಬೋಧನಾ ವ್ಯವಸ್ಥೆಗಳತ್ತ ತುರ್ತು ಗಮನಹರಿಸುವುದು ಬಹುಮುಖ್ಯವಾಗಿದೆ.

ಭಾರತೀಯ ಸನ್ನೆ ಭಾಷೆಗಳು ಇಡೀ ಭಾರತಾದ್ಯಂತ ವಾಸಿಸುವ ಎಲ್ಲಾ ಕಿವುಡ ಸಮುದಾಯಗಳಲ್ಲಿ ಬಳಕೆಯಾಗುತ್ತಿವೆ. ಆದರೆ ಈ ಸನ್ನೆ ಭಾಷೆಗಳು ಕಿವುಡರ ಶಾಲೆಯಲ್ಲಿ ,ಮಕ್ಕಳಿಗೆ ಕಲಿಸುವಲ್ಲಿ ಬಳಕೆಯಾಗ್ತಿಲ್ಲ. ಶಿಕ್ಷಕರ ತರಬೇತಿ ಕಾರ್ಯಕ್ರಮಗಳು ಶಿಕ್ಷಕರನ್ನು ಸನ್ನೆ ಭಾಷೆಗಳನ್ನು ಬಳಸುವ ಬೋಧನಾ ವಿಧಾನಗಳತ್ತ ಒಲವು ತೋರುವುದಿಲ್ಲ. ಜೊತೆಗೆ ಈ ಸನ್ನೆ ಅಥವಾ ಸಂಕೇತ ಭಾಷೆಯನ್ನು ಒಳಗೊಂಡಿರುವ ಯಾವುದೇ ಬೋಧನಾ ಸಾಮಗ್ರಿಗಳು ಲಭ್ಯವಿಲ್ಲ. ಅದೇ ರೀತಿ ಕಿವುಡರ ಪೋಷಕರಿಗೆ ಸನ್ನೆ ಭಾಷೆಗಳ ಮಹತ್ವದ ಬಗ್ಗೆ ಅರಿವಿಲ್ಲ. ಹಾಗೇ ಈ ಭಾಷೆಯ ಮೂಲಕ ಸಂವಹನದ ಅಡೆತಡೆಗಳನ್ನು ತೆಗೆದುಹಾಕುವ ಸಾಮರ್ಥ್ಯದ ಬಗ್ಗೆಯೂ ತಿಳಿದಿಲ್ಲ.

ಕಿವುಡ ಮತ್ತು ಶ್ರವಣದೋಷವುಳ್ಳ ಜನರ ನಡುವೆ ಸಂವಹನ ನಡೆಸುವ ಸಂಸ್ಥೆಗಳು ಮತ್ತು ಸ್ಥಳಗಳಲ್ಲಿ ಸನ್ನೆ ಭಾಷೆ ವ್ಯಾಖ್ಯಾನಕಾರರನ್ನು ನೇಮಿಸುವುದು ತುರ್ತು ಅವಶ್ಯಕತೆಯಾಗಿದೆ ಆದರೆ ಭಾರತವು ಕೇವಲ 300 ಕ್ಕಿಂತ ಕಡಿಮೆ ಪ್ರಮಾಣೀಕೃತ ವ್ಯಾಖ್ಯಾನಕಾರರನ್ನು ಹೊಂದಿದೆ. ಆದ್ದರಿಂದ, ಈ ಎಲ್ಲ ಅಗತ್ಯಗಳನ್ನು ಪೂರೈಸುವ ಸಂಸ್ಥೆ ಅಗತ್ಯವಾಗಿತ್ತು. ಕೊನೆಗೂ ಕಿವುಡ ಸಮುದಾಯದ ಸುದೀರ್ಘ ಹೋರಾಟದ ನಂತರ, ಸೆಪ್ಟೆಂಬರ್ 28, 2015 ರಂದು ನವದೆಹಲಿಯಲ್ಲಿ ISLRTC ಸ್ಥಾಪಿಸಲು ಸಚಿವಾಲಯ ಅನುಮೋದನೆ ನೀಡಿತು.

ಎನ್​​.ಇ.ಪಿ.-2020:

ದೇಶಾದ್ಯಂತ ಶ್ರವಣದೋಷವುಳ್ಳ ವಿದ್ಯಾರ್ಥಿಗಳಲ್ಲಿ ಭಾರತೀಯ ಸನ್ನೆ ಭಾಷೆ ಬಳಕೆಯ ಮಟ್ಟ ಹೆಚ್ಚುತ್ತದೆ ಎಂಬುದು 2020 ರ ಹೊಸ ಶಿಕ್ಷಣ ನೀತಿಯಿಂದ (ಎನ್​​ಇಪಿ-2020) ಪ್ರಮಾಣೀಕರಿಸಲ್ಪಡುತ್ತದೆ. ಭಾರತೀಯ ಸನ್ನೆ ಭಾಷೆ ಬಳಕೆಗಾಗಿ ರಾಷ್ಟ್ರೀಯ ಮತ್ತು ರಾಜ್ಯ ಪಠ್ಯಕ್ರಮಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು NEP-2020 ಹೇಳುತ್ತದೆ.

ಇದಲ್ಲದೆ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಲರ್ನಿಂಗ್ , “ಭಾರತೀಯ ಸನ್ನೆ ಭಾಷೆ”ಯನ್ನು ಬಳಸಿಕೊಂಡು ಇತರ ಮೂಲಭೂತ ವಿಷಯಗಳನ್ನು ಕಲಿಸಲು ಉತ್ತಮ-ಗುಣಮಟ್ಟದ ಕಲಿಕಾ ವಿಧಾನಗಳನ್ನು ಅಭಿವೃದ್ಧಿಪಡಿಸಲಿದೆ ಎಂದು ಎನ್.​​ಇ.ಪಿ. ಹೇಳುತ್ತದೆ. ಹಾಗೂ ಸ್ಥಳೀಯ ಸನ್ನೆ ಭಾಷೆಯನ್ನು ಗೌರವಿಸುವುದರ ಜೊತೆಗೆ ಅದನ್ನು ಕಲಿಸಲಾಗುತ್ತದೆ, ಇದು ಸಾಧ್ಯ ಮತ್ತು ಪ್ರಸ್ತುತ ಕೂಡ.

ಸಮಸ್ಯೆಗಳು:

ಭಾರತೀಯ ಸನ್ನೆ ಭಾಷೆ , ಬಹಳ ವೈಜ್ಞಾನಿಕ ಮತ್ತು ತನ್ನದೇ ಆದ ವ್ಯಾಕರಣವನ್ನು ಹೊಂದಿದೆ. ಆದರೆ, ಅರಿವಿನ ಕೊರತೆಯಿಂದಾಗಿ ಅನೇಕ ಕಿವುಡರಿಗೆ ಅದನ್ನು ಕಲಿಯಲು ಮತ್ತು ಸಾರ್ವಜನಿಕ ಸಂವಹನಕ್ಕಾಗಿ ತಮ್ಮನ್ನು ಸಜ್ಜುಗೊಳಿಸಬಹುದಾದ ಸಂಸ್ಥೆಗಳ ಬಗ್ಗೆ ಸಹ ತಿಳಿದಿಲ್ಲ. ವಿಪರ್ಯಾಸವೆಂದರೆ ದೇಶದಲ್ಲಿ ಕೇವಲ 700 ಭಾರತೀಯ ಸನ್ನೆ ಭಾಷೆ ಕಲಿಸುವ ಶಾಲೆಗಳಿವೆ, ಮತ್ತು ಇಂಗ್ಲಿಷ್ ಅಥವಾ ಹಿಂದಿಯಂತೆ ಇದನ್ನು ಬರೆಯಲಾಗಿಲ್ಲ.

ನಮ್ಮ ದೇಶದಲ್ಲಿ ಸನ್ನೆ ಭಾಷೆಯ ಜ್ಞಾನದ ಕೊರತೆಯಿಂದಾಗಿ ಕಿವುಡರು ಶಿಕ್ಷಣ ವ್ಯವಸ್ಥೆಯಿಂದ ತುಂಬಾ ಬೇಗ ಹೊರಗುಳಿಯುತ್ತಾರೆ, ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಕೋಟಾಗಳಿದ್ರೂ, ಅವುಗಳ ಸಂಪೂರ್ಣ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ.

ABOUT THE AUTHOR

...view details