ಕರ್ನಾಟಕ

karnataka

ETV Bharat / bharat

ಪಿಯುಸಿ ಪರೀಕ್ಷೆ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಸಾವು... ಮುಗಿಲು ಮುಟ್ಟಿದ ಪೋಷಕರ ಆಕ್ರಂದನ! - ಪೋಷಕರ ಆಕ್ರಂದನ

ಹೈದರಾಬಾದ್​: ಇಂಟರ್ಮಿಡಿಯಟ್​ ಪರೀಕ್ಷೆ ಬರೆಯುತ್ತಿರುವ ವೇಳೆ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

ಸಾವನ್ನಪ್ಪಿರುವ ವಿದ್ಯಾರ್ಥಿ...

By

Published : Mar 3, 2019, 7:54 PM IST

ಇಲ್ಲಿನ ಸಿಕಿಂದ್ರಾಬಾದ್​ನ​ ಶ್ರೀ ಚೈತನ್ಯ ಕಾಲೇಜ್​ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿ ಗೋಪಿರಾಜ್ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದರು ಯಾವುದೇ ಪ್ರಯೋಜವಾಗಲಿಲ್ಲ. ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಗೋಪಿರಾಜ್​ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು.

ಎಲ್ಲಾರೆಡ್ಡಿಗೂಡ್​ಗೆ ಸೇರಿದ ವೆಂಕಟ್ರಾವ್​ ಮಗ ಗೋಪಿರಾಜ್​ ಅಮೀರ್​ಪೇಟ್​ನ ಕಾಲೇಜ್​ವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಗೋಪಿರಾಜ್​ ಮೃತಪಟ್ಟಿರುವ ವಿಷಯ ತಿಳಿದ ತಂದೆ ಮತ್ತು ಸಹೋದರರು ಸ್ಥಳಕ್ಕೆ ದೌಡಾಯಿಸಿದ್ದರು. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಎಲ್ಲರನ್ನು ಮರುಗುವಂತೆ ಮಾಡಿತು.

ABOUT THE AUTHOR

...view details