ಕರ್ನಾಟಕ

karnataka

ETV Bharat / bharat

ತಲೆ ಬೋಳಿಸಿ, ಮೆರವಣಿಗೆ... ಪ್ರೀತಿಸುತ್ತಿದ್ದ ಜೋಡಿಗೆ ವಿಚಿತ್ರ ಶಿಕ್ಷೆ! - ಸ್ಥಳೀಯ ಕೋರ್ಟ್​​

ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ ಜೋಡಿಗೆ ಗ್ರಾಮಸ್ಥರು ಸೇರಿ ವಿಚಿತ್ರ ಶಿಕ್ಷೆ ನೀಡಿರುವ ಘಟನೆ ಒಡಿಶಾದ ಮಯೂರ್​ಬಂಜ್​​ನಲ್ಲಿ ನಡೆದಿದೆ.

ಗ್ರಾಮಸ್ಥರಿಂದ ಲವರ್ಸ್​ಗಳಿಗೆ ಶಿಕ್ಷೆ

By

Published : Jun 25, 2019, 4:53 PM IST

ಮಯೂರ್​ಬಂಜ್​(ಒಡಿಶಾ):ಪರಸ್ಪರ ಪ್ರೀತಿಸುತ್ತಿದ್ದ ಜೋಡಿಗೆ ಇಲ್ಲಿನ ನ್ಯಾಯ ಪಂಚಾಯ್ತಿ ಒಂದು ವಿಚಿತ್ರ ರೀತಿಯ ಶಿಕ್ಷೆ ನೀಡಿ ಆದೇಶ ಹೊರಡಿಸಿರುವ ಅಮಾನವೀಯ ಘಟನೆ ಒಡಿಶಾದ ಮಯೂರ್​ಬಂಜ್​ನಲ್ಲಿ ನಡೆದಿದೆ.

ಜೂನ್​ 22ರಂದು ತಾನು ಪ್ರೀತಿಸುತ್ತಿದ್ದ ಯುವತಿಯನ್ನ ಮೀಟ್​ ಮಾಡಲು ಯುವಕ ಪಕ್ಕದ ಊರಿಗೆ ಹೋಗಿದ್ದಾನೆ. ಈ ವೇಳೆ ಸ್ಥಳೀಯರು ಲವರ್ಸ್​ಗಳನ್ನ ಒಂದೇ ರೂಂನಲ್ಲಿರುವುದನ್ನ ನೋಡಿ ಕೂಡಿ ಹಾಕಿದ್ದಾರೆ. ಅಷ್ಟೇ ಅಲ್ಲ ಮರುದಿನ ನ್ಯಾಯ ಪಂಚಾಯ್ತಿ ಎದುರು ಹಾಜರು ಪಡಿಸಿದ್ದಾರೆ.

ಗ್ರಾಮಸ್ಥರಿಂದ ಲವರ್ಸ್​ಗಳಿಗೆ ಶಿಕ್ಷೆ

ಈ ವೇಳೆ ಸ್ಥಳೀಯ ಪಂಚಾಯ್ತಿ​​, ಅವರಿಬ್ಬರ ತಲೆ ಬೋಳಿಸಿ, ಮೆರವಣಿಗೆ ಮಾಡುವಂತೆ ಆದೇಶ ನೀಡಿದೆ. ಅದೇ ರೀತಿ, ಗ್ರಾಮಸ್ಥರು ಲವರ್ಸ್​ಗಳ ತಲೆ ಬೋಳಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಜತೆಗೆ ಅವರಿಬ್ಬರ ಮೇಲೆ ಹಲ್ಲೆ ಸಹ ನಡೆಸಿದ್ದಾರೆ. ಇವರಿಬ್ಬರು ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಎರಡೂ ಕುಟುಂಬಗಳಿಂದ ಪ್ರೀತಿಗೆ ವಿರೋಧ ವ್ಯಕ್ತವಾಗಿತ್ತು ಎಂದು ತಿಳಿದು ಬಂದಿದೆ.

ಇನ್ನು ಇದರ ವಿಡಿಯೋ ವೈರಲ್​ ಆಗುತ್ತಿದ್ದಂತೆ ಪೊಲೀಸರು ಇವರ ರಕ್ಷಣೆ ಮಾಡಿ, ಗ್ರಾಮದ 21 ಜನರನ್ನ ಬಂಧಿಸಿ, ಅವರ ವಿರುದ್ಧ ದೂರು ದಾಖಲು ಮಾಡಿಕೊಂಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದು, ಇನ್ನು ಹಲವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ABOUT THE AUTHOR

...view details