ಭಾವನಗರ್(ಗುಜರಾತ್):ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ತಮ್ಮ ವೈಯಕ್ತಿಕ ನೋವು ನಲಿವುಗಳನ್ನು ಬದಿಗಿಟ್ಟು ಸಮಾಜದ ಇತರ ಜನರ ಆರೋಗ್ಯಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ರೀತಿ, ಗುಜರಾತ್ನ ಭಾವನಗರ್ನ ದಂಪತಿಗಳಿಬ್ಬರು ವೈದ್ಯರಾಗಿದ್ದು, ತಮ್ಮ ಎಂಟು ತಿಂಗಳ ಮಗುವನ್ನು ಅಜ್ಜ ಅಜ್ಜಿಯೊಂದಿಗೆ ಬಿಟ್ಟು ತಮ್ಮ ಕಾಯಕಕ್ಕೆ ಹಾಜರಾಗುತ್ತಿದ್ದಾರೆ.
ಡಾ.ಜಯೇಶ್ಬಾಯ್ ವಕಾನಿ ಭಾವನಗರದ ಸಿಹೋರ್‌ನಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಹಾಗೂ ಸಿಹೋರ್ ತಾಲೂಕಿನ ಆರೋಗ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಇವರ ಪತ್ನಿ ಪನಾರಾ ವಕಾನಿ ಸಹ ಭಾವನಗರದ ಕನಬಿವಾಡ್ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಎಂಟು ತಿಂಗಳ ಮಗುವನ್ನು ಅಜ್ಜ ಅಜ್ಜಿಯೊಂದಿಗೆ ಬಿಟ್ಟು ಬೆಳಗ್ಗೆಯಿಂದ ಸಂಜೆಯವರೆಗೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ.