ಕರ್ನಾಟಕ

karnataka

ETV Bharat / bharat

ಉದ್ಧವ್​ ಠಾಕ್ರೆ ಟೀಕಿಸಿ ಪೋಸ್ಟ್​: ಸರ್ಕಾರಿ ಅಧಿಕಾರಿ ಮೇಲೆ ಇಂಕ್​ ಸುರಿದು ಶಿವಸೇನಾ ಕಾರ್ಯಕರ್ತೆ ಧಮ್ಕಿ! - ಸಿಎಂ ಉದ್ಧವ್​ ಠಾಕ್ರೆಯನ್ನು ಟೀಕಿಸಿ ಪೋಸ್ಟ್

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯನ್ನು ಟೀಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಕ್ಕೆ ಸಾರ್ವಜನಿಕ ಸ್ಥಳದಲ್ಲೇ ಸರ್ಕಾರಿ ಅಧಿಕಾರಿ ಮೇಲೆ ಶಿವಸೇನಾ ಕಾರ್ಯಕರ್ತೆ ಇಂಕ್​ ಸುರಿದು ಆವಾಜ್​ ಹಾಕಿದ್ದು, ವಿಡಿಯೋ ವೈರಲ್​ ಆಗಿದೆ.

Ink poured on a man over his post against  Uddhav Thackeray
ವ್ಯಕ್ತಿ ಮೇಲೆ ಇಂಕ್​ ಸುರಿದು ಶಿವಸೇನಾ ಕಾರ್ಯಕರ್ತೆ ಆವಾಜ್

By

Published : Dec 31, 2019, 8:21 AM IST

ಮಹಾರಾಷ್ಟ್ರ:ಸಾಮಾಜಿಕ ಜಾಲತಾಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯನ್ನು ಟೀಕೆ ಮಾಡಿ ಪೋಸ್ಟ್​ ಮಾಡಿದ್ದಕ್ಕೆ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಶಿವಸೇನಾ ಮಹಿಳಾ ಕಾರ್ಯಕರ್ತರೊಬ್ಬರು ಶಾಯಿ (ಇಂಕ್​) ಸುರಿದಿರುವ ಘಟನೆ ಬೀಡ್​ ಜಿಲ್ಲೆಯಲ್ಲಿ ನಡೆದಿದೆ.

ವ್ಯಕ್ತಿ ಮೇಲೆ ಇಂಕ್​ ಸುರಿದು ಶಿವಸೇನಾ ಕಾರ್ಯಕರ್ತೆ ಆವಾಜ್

ಸಾರ್ವಜನಿಕ ಸ್ಥಳದಲ್ಲೇ ಅಧಿಕಾರಿ ಮೇಲೆ ಶಿವಸೇನಾ ಕಾರ್ಯಕರ್ತೆ ಇಂಕ್​ ಸುರಿದು ಆವಾಜ್​ ಹಾಕುತ್ತಿರುವ ವಿಡಿಯೋ ವೈರಲ್​ ಆಗಿದೆ.

ಸಿಎಎ ವಿರುದ್ಧ ಜಾಮಿಯಾ ಮಿಲಿಯಾ ಘಟನೆಯನ್ನು ಜಲಿಯನ್ ವಾಲಾ ಬಾಗ್​ ದುರಂತದ ಜೊತೆ ಸಿಎಂ ಹೋಲಿಕೆ ಮಾಡಿರುವುದು ತಪ್ಪು ಎಂದು ವಡಾಲಾ ನಿವಾಸಿ ಹಿರಮಣಿ ವಿಜೇಂದ್ರ ತಿವಾರಿ ಎಂಬವರು ಡಿ.19 ರಂದು ಸಿಎಂ ಉದ್ಧವ್​ ಠಾಕ್ರೆ ವಿರುದ್ಧ 'ಆಕ್ಷೇಪಾರ್ಹ ಪೋಸ್ಟ್'​ ಮಾಡಿದ್ದಕ್ಕೆ ಶಿವಸೇನಾ ಕಾರ್ಯಕರ್ತರು ಥಳಿಸಿ, ಆತನ ತಲೆ ಬೋಳಿಸಿರುವ ಪ್ರಕರಣ ನಡೆದಿತ್ತು. ಈ ಸಂಬಂಧ ಐದು ಜನರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು.

For All Latest Updates

TAGGED:

ABOUT THE AUTHOR

...view details